ಬದಿಯಡ್ಕ: ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಪೆರಡಾಲ ಸೇವಾ ಸಹಕಾರಿ ಬ್ಯಾಂಕ್ ವತಿಯಿಂದ ಕನ್ನೆಪ್ಪಾಡಿ ಆಶ್ರಯ ಆಶ್ರಮದ ಪರಿಸರದಲ್ಲಿ ತೆಂಗಿನ ಗಿಡ ನೆಡುವ ಕಾರ್ಯಕ್ರಮಕ್ಕೆ ಬದಿಯಡ್ಕ ಗ್ರಾಪಂ ಅಧ್ಯಕ್ಷ ಕೆ.ಎನ್. ಕೃಷ್ಣ ಭಟ್ ಚಾಲನೆ ನೀಡಿದರು.
ಸದಸ್ಯರುಗಳಾದ ಪ್ರೇಮ ಕುಮಾರಿ, ಜಯಂತಿ, ಬ್ಯಾಂಕ್ ಆಡಳಿತ ಸಮಿತಿ ಸದಸ್ಯರು, ಆಶ್ರಮದ ಅಧಿಕೃತರು, ಬದಿಯಡ್ಕ ಪೊಲೀಸ್ ಇಲಾಖೆಯ ಪ್ರತಿನಿಧಿಗಳು, ಸಾರ್ವಜನಿಕರು ಪಾಲ್ಗೊಂಡಿದ್ದರು. ಬ್ಯಾಂಕ್ ಅಧ್ಯಕ್ಷ ಜಯದೇವ ಖಂಡಿಗೆ ಅಧ್ಯಕ್ಷತೆಯನ್ನು ವಹಿಸಿದ್ದರು. ಕಾರ್ಯದರ್ಶಿ ಅಜಿತ ಕುಮಾರಿ ಸ್ವಾಗತಿಸಿ, ಉಪಾಧ್ಯಕ್ಷ ಗಣಪತಿ ಪ್ರಸಾದ ಕುಳಮರ್ವ ವಂದಿಸಿದರು.





