ಸಮರಸ ಚಿತ್ರ ಸುದ್ದಿ: ಪೆರ್ಲ: ಎಣ್ಮಕಜೆ ಗ್ರಾಮ ಪಂಚಾಯತಿಯ ಕಜಂಪಾಡಿ ವಾರ್ಡಿನಲ್ಲಿ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಕೋಟೆ ಪರಿಸರದಲ್ಲಿ ಗಿಡಗಳನ್ನು ನೆಡಲಾಯಿತು.
ಗ್ರಾ.ಪಂ. ಸದಸ್ಯೆ ರೂಪವಾಣಿ ಆರ್. ಭಟ್ ಗಿಡ ನೆಡುವ ಮೂಲಕ ಚಾಲನೆ ನೀಡಿದರು. ಕುಟುಂಬಶ್ರೀ ಸಿಡಿಎಸ್ ಸದಸ್ಯೆ ಉದಯಕುಮಾರಿ, ಉದ್ಯೋಗ ಖಾತರಿ ಕಾರ್ಮಿಕರಾದ ಮೋಹನ ಕೋಟೆ, ಶಶಿಕಿರಣ್ ಕೋಟೆ ಮೊದಲಾದವರು ಉಪಸ್ಥಿತರಿದ್ದು ಸಹಕರಿಸಿದರು.





