ಮುಳ್ಳೇರಿಯ: ಸುಭಿಕ್ಷ ಕೇರಳಂ ಯೋಜನೆಯ ಅಂಗವಾಗಿ ಒಂದು ಲಕ್ಷ ಫಲ-ಪುಷ್ಪ ವೃಕ್ಷಗಳ ನೆಟ್ಟು ಬೆಳೆಸುವ ಮಹತ್ವಾಕಾಂಕ್ಷಿ ಯೋಜನೆಗೆ ಪರಿಸರ ದಿನಾಚರಣೆಯ ಅಂಗವಾಗಿ ಶುಕ್ರವಾರ ಕಾರಡ್ಕ ಕೃಷಿ ಭವನದಲ್ಲಿ ವಿದ್ಯುಕ್ತ ಚಾಲನೆ ನೀಡಲಾಯಿತು.
ಕಾರಡ್ಕ ಗ್ರಾ.ಪಂ.ಅಧ್ಯಕ್ಷೆ ಅನಸೂಯ ರೈ ಕೋಟಿ ವೃಕ್ಷಾರೋಪಣ ಯೋಜನೆಗೆ ಗಿಡ ನೆಡುವ ಮೂಲಕ ಚಾಲನೆ ನೀಡಿದರು. ಗ್ರಾ.ಪಂ.ಉಪಾಧ್ಯಕ್ಷ ವಿನೋದನ್ ನಂಬ್ಯಾರ್, ಕೃಷಿ ಸಹಾಯಕ ನಿರ್ದೇಶಕ ರಾಘವೇಂದ್ರ, ವಿವಿಧ ವಾರ್ಡ್‍ಗಳ ಪ್ರತಿನಿಧಿಗಳು, ಕೃಷಿ ಅಭಿವೃದ್ದಿ ಸಮಿತಿ ಸದಸ್ಯರು ಮೊದಲಾದವರು ಉಪಸ್ಥಿತರಿದ್ದರು.





