ಕಾಸರಗೋಡು: ಸುಧೀರ್ಘ ಅವಧಿಯ ನಂತರ ಮುಚ್ಚುಗಡೆಯಲ್ಲಿದ್ದ ಆರಾಧನಾಲಯಗಳು, ಉದ್ಯೋಗ ಕೇಂದ್ರಗಳು ಇತ್ಯಾದಿ ಲಾಕ್ ಡೌನ್ ಆದೇಶ ಸಡಿಲಿಕೆಯ ಹಿನ್ನೆಲೆಯಲ್ಲಿ ತೆರೆಯುತ್ತಿರುವ ವೇಳೆ ಮುಂಜಾಗರೂಕ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಜಿಲ್ಲಾ ವೈದ್ಯಾಧಿಕಾರಿ ತಿಳಿಸಿರುವರು.
ಕೋವಿಡ್ ಸೋಂಕು ವ್ಯಾಪಕಗೊಳ್ಳುವ ಭೀತಿಯ ಹಿನ್ನೆಲೆಯಲ್ಲಿ ಈ ಕ್ರಮ ಕಡ್ಡಾಯಗೊಳಿಸಲಾಗಿದೆ ಎಂದು ಅವರು ಹೇಳಿದರು. ಈ ಸಂಸ್ಥೆಗಳನ್ನು ಕಾರ್ಯಾಚರಣೆ ತೊಡಗುವ ಮುನ್ನ ರೋಗಾಣುಮುಕ್ತ ಗೊಳಿಸಬೇಕು. ಯಾವ ಕಾರಣಕ್ಕೂ ಜನಗುಂಪು ಸೇರಕೂಡದು. ಧಾರ್ಮಿಕ ಸಮಾರಂಭಗಳನ್ನು ನಡೆಸಕೂಡದು. ಸಾಮಾಜಿಕ ಅಂತರ ಪಾಲಿಸಬೇಕು, ಮಾಸ್ಕ್ ಧರಿಸಬೇಕು, ಸ್ಯಾನಿಟೈಸರ್ ಬಳಸಬೇಕು. ಬೆಳಗ್ಗಿನಿಂದ ಸಂಜೆ ವರೆಗೆ ತೆರೆಯುವ ಆರಾಧನಲಾಯಗಳಲ್ಲಿ ಬಿಡುವಿನಲ್ಲಿ ಶುಚೀಕರಣ ನಡೆಸಬೇಕು. ಬೆಳಕು, ಶುದ್ಧವಾಯು ಸಂಚಾರ ಇರುವಿಕೆಯನ್ನು ಖಚಿತಪಡಿಸಬೇಕು. ಶೀತ, ಜ್ವರ ಸಹಿತ ರೋಗಲಕ್ಷಣ ಇರುವವರು ಯಾವ ಕಾರಣಕ್ಕೂ ಈ ಕೇಂದ್ರಗಳಿಗೆ ತೆರಳ ಕೂಡದು ಎಂದು ತಿಳಿಸಲಾಗಿದೆ.


