ಕಾಸರಗೋಡು: ನೂತನ ಶೈಕ್ಷಣಿಕ ವರ್ಷದಲ್ಲಿ ಶಾಲಾ ನೂತನ ಸಮವಸ್ತ್ರ ಖರಿದಿಗಾಗಿ ತೆಗೆದಿರಿಸಿದ್ದ ಮೊಬಲಗನ್ನು ಮುಖ್ಯಮಂತ್ರಿ ದುರಂತ ನಿವಾರಣೆ ನಿಧಿಗೆ ಹಸ್ತಾಂತರಿಸುವ ಮೂಲಕ ಮೂರೂವರೆ ವರ್ಷದ ಬಾಲಕಿ ಮಾದರಿಯಾಗಿದ್ದಾಳೆ. ಬದಿಯಡ್ಕ ನಿವಾಸಿ, ಜಿಲ್ಲಾ ಕ್ರೀಡಾ ಮಮಡಳಿ ಸಿಬ್ಬಂದಿ ಕುಂಞÂ್ಞ ಕೃಷ್ಣನ್-ಬದಿಯಡ್ಕ ಪ್ರಾಥಮಿಕ ಆರೋಗ್ಯ ಕೇಂದ್ರದ ಫಾರ್ಮಸಿಸ್ಟ್ ರಜಿತಾ ಅವರ ಪುತ್ರಿ ದಕ್ಷಾ ಈ ರೀತಿ ಮಾದರಿಯಾದವಳು. ಈಕೆ ಈ ಬಾರಿ ಎಲ್.ಕೆ.ಜಿ.ಗೆ ಪ್ರವೇಶಾತಿ ನಡೆಸಲು ಸಿದ್ಧತೆ ನಡೆಸಿದ್ದಳು. ನೂತನ ಸಮವಸ್ತ್ರ ಖರೀದಿಗಾಗಿ ಮೂರು ತಿಂಗಳಿಂದ ಈಕೆ ಕೊಂಚ ಕೊಂಚವಾಗಿ ಸಂಗ್ರಹಿಸಿರಿಸಿದ್ದ ಮೊಬಲಗನ್ನು ಈಗ ನೀಡಿದ್ದಾಳೆ. ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ನಿಧಿ ಪಡೆದುಕೊಂಡಿದ್ದಾರೆ.
ಶಾಲಾ ಸಮವಸ್ತ್ರ ಖರೀದಿಗೆ ಸಂಗ್ರಹಿಸಿದ್ದ ಮೊಬಲಗು ಮುಖ್ಯಮಂತ್ರಿ ದುರಂತ ನಿವಾರಣೆ ನಿಧಿಗೆ ನೀಡಿದ ಮೂರು ವರ್ಷದ ಬಾಲಕಿ
0
ಜೂನ್ 06, 2020