ಕಾಸರಗೋಡು: ಇತರ ರಾಜ್ಯಗಳ ಕಾರ್ಮಿಕರಿಗೆ ತಮ್ಮ ರಾಜ್ಯಕ್ಕೆ ಮರಳುವ ನಿಟ್ಟಿನಲ್ಲಿ ತುರ್ತು ಕ್ರಮ ಕೈಗೊಳ್ಳುವಂತೆ ಸುಪ್ರೀಂ ಕೋರ್ಟ್ ಆದೇಶಿಸಿರುವ ಹಿನ್ನೆಲೆಯಲ್ಲಿ ಕಾಸರಗೋಡು ಜಿಲ್ಲೆಯಲ್ಲಿರುವ ಇತರ ರಾಜ್ಯಗಳ ಕಾರ್ಮಿಕರು ಮರಳುವ ಕ್ರಮವನ್ನು ಚುರುಕುಗೊಳಿಸಲಾಗಿದೆ.
ಲಾಕ್ ಡೌನ್ ಆದೇಶದ ಹಿನ್ನೆಲೆಯಲ್ಲಿ ಕಾಸರಗೋಡು ಜಿಲ್ಲೆಯಿಂದ ತಮ್ಮ ರಾಜ್ಯಗಳಿಗೆ ಮರಳಲು ಬಯಸುವ ಕಾರ್ಮಿಕರು ತುರ್ತಾಗಿ ಆಯಾ ಗ್ರಾಮಪಂಚಾಯತ್, ನಗರಸಭೆ ಕೇಂದ್ರಗಳಲ್ಲಿ ತಮ್ಮ ನೋಂದಣಿ ನಡೆಸಬೇಕು ಎಂದೂ, ಕೋವಿಡ್ರೋಗ ಲಕ್ಷಣಗಳಿಲ್ಲ ಎಂಬ ಸರ್ಟಿಫಿಕೆಟ್ ಪಡೆದುಕೊಳ್ಳಬೇಕು ಎಂದೂ ಪಂಚಾಯತ್ ಡೆಪ್ಯೂಟಿ ಡೈರೆಕ್ಟರ್ ತಿಳಿಸಿರುವರು.

