HEALTH TIPS

ಬ್ರೇಕಿಂಗ್- ಜಿಲ್ಲೆಯಲ್ಲಿ ಕೋವಿಡ್ ವ್ಯಾಪಕತೆ- ಜಿಲ್ಲೆಯ ಪ್ರಮುಖ 10 ಮಾರುಕಟ್ಟೆಗಳನ್ನು ಒಂದು ವಾರ ಮುಚ್ಚಲು ಆದೇಶ

 
          ಕಾಸರಗೋಡು: ಜಿಲ್ಲೆಯಲ್ಲಿ ನಿನ್ನೆ ಒಂದೇ ದಿನ ಸಂಪರ್ಕದ ಮೂಲಕ  11 ಮಂದಿಗಳಲ್ಲಿ ಕೋವಿಡ್ ದೃಢಪಟ್ಟ ಹಿನ್ನೆಲೆಯಲ್ಲಿ ಕೋವಿಡ್ ಹರಡುವಿಕೆಯನ್ನು ತಡೆಯುವ ನಿಟ್ಟಿನಲ್ಲಿ ವಿಸ್ಕøತ ನಿಯಂತ್ರಣ ಕ್ರಮಗಳಿಗೆ ರೂಪುನೀಡಲಾಗಿದೆ.
            ನಿಯಂತ್ರಣದ ಭಾಗವಾಗಿ ಜಿಲ್ಲೆಯ ಪ್ರಮುಖ ಮೀನು ಮತ್ತು ತರಕಾರಿ ಮಾರುಕಟ್ಟೆಗಳನ್ನು ಇಂದಿನಿಂದ ಒಂದು ವಾರ ಮುಚ್ಚಲು ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ. ನಗರದ 4 ತರಕಾರಿ ಅಂಗಡಿಗಳು ಮತ್ತು ಹಣ್ಣಿನ ಅಂಗಡಿಯಿಂದ ಐದು ಜನರಿಗೆ ಕೋವಿಡ್ ಸೋಂಕು ತಗುಲಿತ್ತು. ಜಿಲ್ಲೆಯಲ್ಲಿ ಸಂಪರ್ಕದ ಮೂಲಕ ರೋಗ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ಕೆಳಗಿನ ಪ್ರದೇಶಗಳಲ್ಲಿನ ಅಂಗಡಿಗಳನ್ನು ಜುಲೈ 17 ರವರೆಗೆ ಸಂಪೂರ್ಣವಾಗಿ ಮುಚ್ಚಬೇಕು ಎಂದು ಜಿಲ್ಲಾಧಿಕಾರಿ ಹೇಳಿರುರು.
        ಕಾಲಿಕಡವು ಮೀನು, ತರಕಾರಿ ಮಾರುಕಟ್ಟೆ, ಚೆರ್ಕಳ ಪಟ್ಟಣ ಪ್ರದೇಶ, ಕಾಞÂಂಗಾಡ್ ಮೀನು ಮಾರುಕಟ್ಟೆ, ಕಾಞಂಗಾಡ್ ತರಕಾರಿ ಮಾರುಕಟ್ಟೆ, ತ್ರಿಕ್ಕರಿಪುರ ಮೀನು ಮಾರುಕಟ್ಟೆ, ನಿಲೇಶ್ವರ ಮೀನು ಮಾರುಕಟ್ಟೆ, ಕಾಸರಗೋಡು ಮೀನು ಮಾರುಕಟ್ಟೆ ಮತ್ತು ತರಕಾರಿ ಮಾರುಕಟ್ಟೆ, ಕುಂಬಳೆ ಮೀನು ಮತ್ತು ತರಕಾರಿ ಮಾರುಕಟ್ಟೆ, ಉಪ್ಪಳ ಹನಾಫಿ ಬಜಾರ್ ತರಕಾರಿ ಅಂಗಡಿ ಮತ್ತು ಮಜೀರ್ ಪಳ್ಳದ ಮಾರುಕಟ್ಟೆಗಳನ್ನು ಮುಂದಿನ ಆದೇಶ ಬರುವಲ್ಲಿವರೆಗೆ ಸಂಪೂರ್ಣ ಮುಚ್ಚಲು ಆದೇಶಗಳನ್ನು ನೀಡಲಾಗಿದೆ.
        ಅಂಗಡಿಗಳಿಂದ ಕರೋನಾ ವೈರಸ್ ಸೋಂಕಿಗೆ ಒಳಗಾದವರ ಸಂಖ್ಯೆಯನ್ನು ನಿಖರವಾಗಿ ಅಂದಾಜು ಮಾಡಲು ಮತ್ತು ಇಲ್ಲಿಂದ ಇನ್ನು ಸಂಪರ್ಕದ ಮೂಲಕ ರೋಗ ಹರಡುವುದನ್ನು ತಡೆಯಲು ಈ ಆದೇಶ ಹೊರಡಿಸಲಾಗಿದೆ. ಶುಕ್ರವಾರ ಸಂಜೆ ಜಿಲ್ಲಾಧಿಕಾರಿ ಡಾ.ಡಿ. ಸಾಜಿತ್ ಬಾಬು, ಜಿಲ್ಲಾ ಪೆÇಲೀಸ್ ಮುಖ್ಯಸ್ಥೆ ಡಿ.ಶಿಲ್ಪಾ, ಜಿಲ್ಲಾ ವೈದ್ಯಕೀಯ ಅಧಿಕಾರಿ ಡಾ. ಎಂ.ವಿ.ರಾಮದಾಸ್ ಅವರ ತುರ್ತು ಸಭೆ ತೀರ್ಮಾನದ ಪ್ರಕಾರ ಈ ನಿರ್ಧಾರ ಹೊರಡಿಸಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries