ತಿರುವನಂತಪುರ:ಕೊರೊನಾತಂಕದಲ್ಲಿ ಮಿಂದೇಳುತ್ತಿರುವ ರಾಜ್ಯದಲ್ಲಿ ನಿನ್ನೆಯೂ ಒಂದು ಕೋವಿಡ್ ಮರಣ ಉಂಟಾಗಿದೆ. ಮೃತನನ್ನು ತಿರುವನಂತಪುರಂನ ಮಾಣಿಕಿಲವಕ್ಕಂ ನಿವಾಸಿ ಸೈಫುದೀನ್ (67) ಎಂದು ಗುರುತಿಸಲಾಗಿದೆ. ಅವರನ್ನು ತಿರುವನಂತಪುರ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕೋವಿಡ್‍ನಿಂದ ಸಾವನ್ನಪ್ಪಿದವರ ಸಂಖ್ಯೆ ಇದೀಗ 28 ಕ್ಕೆ ಏರಿದೆ.
ಮಧುಮೇಹ ಸಹಿತ ಜೆರಿಯಾಟ್ರಿಕ್ ಕಾಯಿಲೆಗಳಿಂದ ಬಳಲುತ್ತಿದ್ದ ಸೈಫುದ್ದೀನ್ ಶುಕ್ರವಾರ ಬೆಳಿಗ್ಗೆ ನಿಧನರಾದರು. ಮೂರು ದಿನಗಳ ಹಿಂದೆ ಕೋವಿಡ್ ಇವರಲ್ಲಿ ಪತ್ತೆಯಾಗಿತ್ತು. ಕೋವಿಡ್ ನಿಬಂಧನೆಯನುಸಾರ ಇಮದು ಅಂತ್ಯಕ್ರಿಯೆ ನಡೆಯಲಿದೆ.
ಸೈಫುದ್ದೀನ್ ಪೂಂತುರಾ ಆಸ್ಪತ್ರೆಯ ಮುಂಭಾಗದಲ್ಲಿ ಅಂಗಡಿಯೊಂದನ್ನು ನಡೆಸುತ್ತಿದ್ದ. ಇವರ ಇಬ್ಬರು ಮಕ್ಕಳಿಗೂ ಇದೀಗ ಕೋವಿಡ್ ಸೋಂಕು ದೃಢಪಟ್ಟಿದೆ. ಅವರು ಚಿಕಿತ್ಸೆಯಲ್ಲಿದ್ದಾರೆ. ಏತನ್ಮಧ್ಯೆ ಪೂಂತುರಾ ಪ್ರದೇಶವನ್ನು ಕಠಿಣ ಕಾನೂನುಗಳಿಂದ ನಯಂತ್ರಿಸಿದ ಬಳಿಕ ಶುಕ್ರವಾರ ಜನರು ರೊಚ್ಚಿಗೆದ್ದು ಪ್ರತಿಭಟಿಸಿರುವ ಮಧ್ಯೆ ಈ ಮರಣ ಸಂಭವಿಸಿರುವುದು ಸ್ಥಳೀಯರನ್ನು ಬೆಚ್ಚಿಬೀಳಿಸಿದೆ.
ಸೂಪರ್ ಸ್ಪ್ರೆಡ್(ಹರಡುವಿಕೆ)ಗೆ ಕಾರಣವಾದ ತಿರುವನಂತಪುರ ಪುರಸಭೆಯ ಸ್ಥಿತಿಗತಿ ಹದಗೆಡುತ್ತಲೇ ಇದೆ. ಕಳೆದ ಮೂರು ದಿನಗಳಲ್ಲಿ ಕೋವಿಡ್ ಇದುವರೆಗೆ ಪೂಂತುರಾ, ಮಾಣಿಕ್ಯ ವಿಲಕ್ಕಂ ಮತ್ತು ಪುತ್ತನ್ ಪಳ್ಳಿ ಪ್ರದೇಶಗಳಲ್ಲಿ 233 ಪ್ರಕರಣಗಳನ್ನು ವರದಿ ಮಾಡಿದೆ. ಕೋವಿದ್ ನಿನ್ನೆ ತಿರುವನಂತಪುರ ನಗರದ ಮೂರು ವಾರ್ಡ್‍ಗಳಲ್ಲಿ 102 ಜನರಿಗೆ ಸೋಂಕು ಉಂಟಾಗಿರುವುದು ದೃಢಪಟ್ಟಿದೆ.
ಪೂಂತುರಾದಲ್ಲಿ ನಿನ್ನೆ ನಡೆದ ಪ್ರತಿಭಟನೆಗೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಪೂಂತುರಾದಲ್ಲಿ ಆಂಟಿಜೆನ್ ಪರೀಕ್ಷೆ ನಡೆಸುವುದರ ವಿರುದ್ಧ ಯುವ ಕಾಂಗ್ರೆಸ್ ಮುಖಂಡರು ವಾಟ್ಸಾಪ್‍ನಲ್ಲಿ ಪ್ರಚಾರ ನಡೆಸಿದ್ದರು. ಈ ಪರೀಕ್ಷೆಯನ್ನು ನಡೆಸಿದರೆ ಪುಟ್ಟ ಶೀತ ಕೂಡ ಕೋವಿಡ್ ಎಂಬ ರೀತಿಯ ಪರೀಕ್ಷಾ ಫಲ ನೀಡುತ್ತದೆ ಎಂಬ ಸಂದೇಶ ರವಾನಿಸಿರುವುದು ಜನರ ದಾರಿತಪ್ಪಿಸಲು ಎಂದು ಪಿಣರಾಯಿ ವಿಜಯನ್ ಖಾರವಾಗಿ ಪ್ರತಿಕ್ರಿಯಿಸಿರುವರು.


