ಮುಂದುವರಿದ ಭಾಗ-10
ಈ ಔಷಧಿಗಳನ್ನು ಸ್ತ್ರೀಯರಿಗೆ ಕೊಡುವಾಗ ಅವರು ಗರ್ಭಿಣಿಯರಾಗದಂತೆ ಜಾಗ್ರತೆ ವಹಿಸಬೇಕು. ಟರ್ಭಿನಾಫಿನ್ ಮಾತ್ರೆ ಕೆಟಗರಿ "ಬಿ" ಮಾತ್ರೆ. ಅಂದರೆ ಮನುಷ್ಯರಲ್ಲಿ ತೊಂದರೆ ಬರಲಾರದು. ಇಟ್ರಕೊನಜೋಲ್ ಕೆಟಗರಿ "ಸಿ" ಮಾತ್ರೆ. ಅಂದರೆ ಮನುಷ್ಯರಲ್ಲಿ ತೊಂದರೆ ಬರಲಾರದೆಂದು ಹೇಳಲಾಗದು!. ಆದುದರಿಂದ ತುಂಬಾ ತುರಿಕೆಯಿಂದ ರೋಗ ಅತಿಯಾಗಿ ವ್ಯಾಪಿಸಿದ್ದರೆ ವೈದ್ಯರ ಅನುಮತಿಯಂತೆ ಮಾತ್ರ ಔಷಧಿಗಳನ್ನು ಸೇವಿಸಬೇಕು.
ಮೇಲೆ ಹೇಳಲಾದ ಎಲ್ಲಾ ಮಾತ್ರೆಗಳು ಲಿವರ್ ನಲ್ಲಿ ಕರಗುತ್ತದೆ. ಮತ್ತು ದೇಹದ ಪ್ರತಿರೋಧ ಶಕ್ತಿ ಕಡಿಮೆ ಇರುವವರಲ್ಲಿ ಅಂದರೆ ಡಯಾಬಿಟೀಸ್, ರಕ್ತ ಹೀನತೆ, ಕಿಡ್ನಿ ಸಂಬಂಧಿ ಖಾಯಿಲೆ ಇರುವವರಲ್ಲಿ ಮಾತ್ರೆಯನ್ನು ದೀರ್ಘಕಾಲ ನೀಡಬೇಕಾಗುತ್ತದೆ. ಹೀಗಾಗಿ ಔಷಧಿಯನ್ನು ತೆಗೆಯುವ ಮೊದಲು ಮತ್ತು ತೆಗೆದುಕೊಳ್ಳುವಾಗ ರಕ್ತಹೀನತೆ, ಡಯಾಬಿಟೀಸ್, ಕಿಡ್ನಿ, ಲಿವರ್ ಪರೀಕ್ಷೆಗಳನ್ನು ರಕ್ತದಲ್ಲಿ ಮಾಡಿಸಿಕೊಳ್ಳುವುದು ಸುರಕ್ಷಿತ. ಔಷಧಿಯನ್ನು ತೆಗೆದುಕೊಳ್ಳುವಾಗ ಲಿವರ್ ಏನ್ ಜೈಮ್ ನಲ್ಲಿ ಏನೂ ವೈತ್ಯಾಸವಾಗಿಲ್ಲ ಎಂದಾದರೆ ಔಷಧಿಯನ್ನು ಧೈರ್ಯವಾಗಿ ಕೊಡಬಹುದು. ಈ ಎಲ್ಲಾ ವಿವರಗಳು ಡರ್ಮಟಾಲಜಿ ನರ್ಸ್ ಗಳಿಗೆ ತಿಳಿದಿರುವ ಕಾರಣ ಪ್ರತಿಬಾರಿಯೂ ರಕ್ತ ಪರೀಕ್ಷೆಯನ್ನು ಮಾಡಿಸಿ, ನರ್ಸ್ ಗಳ ಗಮನಕ್ಕೆ ತಂದರೆ ಸಾಕಾಗುತ್ತದೆ. ಅದರಲ್ಲಿ ಏನಾದರೂ ವೈತ್ಯಾಸಗಳಿದ್ದರೆ ಅವರು ಅದನ್ನು ವೈದ್ಯರ ಗಮನಕ್ಕೆ ತರುತ್ತಾರೆ.
ಬರಹ: ಡಾ.ಪ್ರಸನ್ನಾ ನರಹರಿ.ಕಾಸರಗೋಡು. ಖ್ಯಾತ ಚರ್ಮ-ಲೈಂಗಿಕ ರೋಗ ತಜ್ಞರು.
ನಿರ್ದೇಶಕಿ ಐಎಡಿ ಕಾಸರಗೋಡು.
ನಾಳೆಗೂ ಮುಂದುವರಿಯುವುದು.........................



