HEALTH TIPS

ಸ್ವದೇಶಿ ಕರೊನಾ ಲಸಿಕೆಗೆ ಅಪಸ್ವರಗಳೆದ್ದಿರೋದೇಕೆ? ಆಗಸ್ಟ್​ 15ಕ್ಕೆ ಲಸಿಕೆ ಸಜ್ಜು ಎನ್ನುವುದು ಅವಾಸ್ತವಿಕವೇ?

          ನವದೆಹಲಿ: ಜಗತ್ತಿನಲ್ಲಿ ಸದ್ಯ ಅತಿ ವೇಗವಾಗಿ ಸಾಗುತ್ತಿರುವ ಕಾರ್ಯವೆಂದರೆ ಕರೊನಾ ವೈರಸ್? ನಿಗ್ರಹಕ್ಕಾಗಿ ಲಸಿಕೆ ಕಂಡು ಹಿಡಿಯುವ ಕಾರ್ಯ. ಸಾಧ್ಯವಾದಷ್ಟು ಬೇಗ ಲಸಿಕೆಯನ್ನು ರೋಗಿಗಳ ಬಳಕೆಗೆ ದೊರೆಯುವಂತೆ ಮಾಡುವತ್ತ ಎಲ್ಲ ಕಂಪನಿಗಳು ಶ್ರಮಿಸುತ್ತಿವೆ.
       ಜೊತೆಗೆ ಸ್ವದೇಶಿ ಕಂಪನಿ ಹೈದರಾಬಾದ್ ಭಾರತ್ ಬಯೋಟೆಕ್ ಇಂಟರ್ ನ್ಯಾಷನಲ್ ಕಂಪನಿ ಅಭಿವೃದ್ಧಿಪಡಿಸರುವ ಕೋವ್ಯಾಕ್ಸಿನ್? ಲಸಿಕೆಯನ್ನು ಆಗಸ್ಟ್ 15ರಂದು ಬಳಕೆಗೆ ಸಜ್ಜುಗೊಳಿಸಲಾಗುತ್ತದೆ.
      ಈ ಸಂಸ್ಥೆಯೊಂದಿಗೆ ಸಹಭಾಗಿತ್ವ ಹೊಂದಿರುವ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಲಸಿಕೆಯನ್ನು ಮಾನವರ ಮೇಲೆ ಪ್ರಯೋಗಿಸುವ ಕ್ಲಿನಿಕಲ್  ಟ್ರಯಲ್ ಹಂತವನ್ನು ತ್ವರಿತವಾಗಿ ಪೂರ್ಣಗೊಳಿಸಲು ಎಲ್ಲ ರೀತಿಯಿಂದಲೂ ಶ್ರಮಿಸಬೇಕು. ರೋಗಿಗಳ ನೋಂದಣಿಯನ್ನು ಜುಲೈ 7ಕ್ಕಿಂತ ವಿಳಂಬ ಮಾಡುವಂತಿಲ್ಲ ವೈದ್ಯಕೀಯ ಸಂಸ್ಥೆಗಳಿಗೆ ಪತ್ರ ಬರೆದಿದೆ.
       ಇದೀಗ ಅಪಸ್ವರಕ್ಕೆ ಕಾರಣವಾಗಿರುವುದು ಕೂಡ ಇದೇ ತರಾತುರಿ. ಐಸಿಎಂಆರ್ ಈ ರೀತಿ ಏಕಾಏಕಿ ಆತುರ ತೋರುವುದು ಲಸಿಕೆಯ ಸುರಕ್ಷತೆಯ ಬಗ್ಗೆಯೇ ಕಳವಳ ಮೂಡಿಸುತ್ತದೆ ಎಂದು ಸಾರ್ವಜನಿಕ ಆರೋಗ್ಯ ಕ್ಷೇತ್ರದ ತಜ್ಞರ ಅಭಿಪ್ರಾಯ. ಜತೆಗೆ, ಕೇಂದ್ರ ಸರ್ಕಾರವೂ ಕೂಡ ಇದರ ಬಗ್ಗೆ ತೀವ್ರ ಆಸಕ್ತಿ ತೋರುತ್ತಿರುವುದು ಕೂಡ ಎಲ್ಲರ ಹುಬ್ಬೇರುವಂತೆ ಮಾಡಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
         ಇನ್ನೂ ಪ್ರಿಕ್ಲಿನಿಕಲ್ ಹಂತದಲ್ಲಿರುವ ಲಸಿಕೆಗೆ ಕ್ಲಿನಿಕಲ್ ಹಂತದ ನೋಂದಣಿ ಹೇಗೆ ಸಾಧ್ಯ. ಆನಂತರವೂ ಒಂದು ತಿಂಗಳಿಗಿಂತ ಕೊಂಚ ಹೆಚ್ಚಿನ ಸಮಯದಲ್ಲಿ ಕ್ಲಿನಿಕಲ್ ಹಂತ ಮುಗಿದು ಲಸಿಕೆ ಬಳಕೆಗೆ ಸಿಗುವುದಾದರೂ ಹೇಗೆ ಎಂಬುದು ತಜ್ಞರ ಪ್ರಶ್ನೆ. ಜತೆಗೆ, ಕ್ಲಿನಿಕಲ್? ಟ್ರಯಲ್?ಗೆ ಯಾವ ಆಧಾರದಲ್ಲಿ ಸಂಸ್ಥೆಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ ಎಂಬುದಕ್ಕೆ ಉತ್ತರವೇ ಇಲ್ಲ ಎಂದಿದ್ದಾರೆ.
         ಸಾಮಾನ್ಯವಾಗಿ ಸಾವಿರಾರು ಜನರ ಮೇಲೆ ನಡೆಸಲಾಗುವ ಮೊದಲ ಹಂತಕ್ಕೆ 1-2 ವರ್ಷಕ್ಕೆ, ಎರಡನೇ ಹಂತಕ್ಕೂ ಇಷ್ಟೇ ಜನರ ಮೇಲೆ 2-3 ವರ್ಷ ಹಾಗೂ ಮೂರನೇ ಹಂತದಲ್ಲಿ 20ರಿಂದ 30 ಸಾವಿರ ಜನರ ಮೇಲೆ 3-4 ವರ್ಷಗಳವರೆಗೆ ಲಸಿಕೆಯ ಪ್ರಯೋಗ ನಡೆಸಲಾಗುತ್ತದೆ. ಎಷ್ಟೇ ವೇಗವಾಗಿ ಸಾಗಿದರೂ ಒಂದೂವರೆ ವರ್ಷದಿಂದ 2 ವರ್ಷ ಬೇಕು ವಿಶ್ವಸಂಸ್ಥೆಯೂ ಹೇಳುತ್ತದೆ.
        ಜುಲೈ 7ರೊಳಗಾಗಿ ಕ್ಲಿನಿಕಲ್ ಟ್ರಯಲ್ ಗೆ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಿ, ಇಲ್ಲದಿದ್ದರೆ ನಿರ್ಲಕ್ಷ್ಯವನ್ನು ಗಂಭೀರವಾಗಿ ಪರಿಗಣಿಸಲಾಗುತ್ತದೆ ಎಂದು ಐಸಿಎಂಆರ್ ಹೇಳಿರುವುದು ಯಾರಿಗೆ? ಕ್ರಮ ಕೈಗೊಳ್ಳುವವರು ಯಾರು? ಇದೇನು ಬೆದರಿಕೆ ಪತ್ರವೇ ಎಂದು ತಜ್ಞರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries