HEALTH TIPS

New Updates:ವಿಶ್ವದಾದ್ಯಂತ ಕೊರೋನಾ ಸ್ಫೋಟ: 1.11 ಕೋಟಿಗೆ ಏರಿದ ಸೋಂಕಿತರ ಸಂಖ್ಯೆ, 5.23 ಲಕ್ಷ ಮಂದಿ ಬಲಿ

     ಜಿನಿವಾ: ವಿಶ್ವದಾದ್ಯಂತ ಕೊರೋನಾ ಸ್ಫೋಟಗೊಂಡಿದ್ದು, ಸೋಂಕಿತರ ಸಂಖ್ಯೆ 11,190,678ಕ್ಕೆ ಏರಿಕೆಯಾಗಿದೆ ಎಂದು ಜಾನ್ ಹಾಪ್ಕಿನ್ಸ್ ವಿಶ್ವವಿದ್ಯಾಲಯ ಮಾಹಿತಿ ನೀಡಿದೆ.

   ವಿಶ್ವ ವಿವಿಧ ರಾಷ್ಟ್ರಗಳನ್ನು ಎಡೆಬಿಡದೆ ಕಾಡುತ್ತಿರುವ ಮಹಾಮಾರಿ ವೈರಸ್ ಈ ವರೆಗೂ 523,613 ಮಂದಿಯನ್ನು ಬಲಿಪಡೆದುಕೊಂಡಿದೆ. ವೈರಸ್ ಮಟ್ಟ ಹಾಕಲು ಇಡೀ ವಿಶ್ವವೇ ಇದೀಗ ಕಂಗಾಲಾಗುವಂತೆ ಮಾಡಿದೆ. 11,190,678 ಮಂದಿ ಸೋಂಕಿತರ ಪೈಕಿ ಈ ವರೆಗೂ 6,297,610 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, ಇನ್ನೂ 4,363,955 ಮಂದಿ ಸೋಂಕಿನಿಂದ ಬಳಲುತ್ತಿದ್ದಾರೆ. 

     ಅಮೆರಿಕಾ ಒಂದು ರಾಷ್ಟ್ರದಲ್ಲಿಯೇ 129,275 ಮಂದಿ ಸಾವನ್ನಪ್ಪಿದ್ದು, ಬ್ರೆಜಿಲ್ ನಲ್ಲಿ ಸೋಂಕಿತರ ಸಂಖ್ಯೆ 1,496,858ಕ್ಕೆ ತಲುಪಿದ್ದು, 61,884 ಮಂದಿ ಬಲಿಯಾಗಿದ್ದಾರೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries