ಕಾಸರಗೋಡು: ಕೋವಿಡ್ 19 ಸೋಂಕು ಹೆಚ್ಚಳಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ನಡೆಸಲಾಗುತ್ತಿರುವ ಪ್ರತಿರೋಧ ಚಟುವಟಿಕೆಗಳ ಅಂಗವಾಗಿ, ಕಾಸರಗೋಡು ಜಿಲ್ಲೆಯಲ್ಲಿ 6 ಕಮ್ಯೂನಿಟಿ ಕ್ಲಸ್ಟರ್ ಗಳಿವೆ. ಕಾಸರಗೋಡು ಮಾರುಕಟ್ಟೆ, ಚೆಂಗಳ ಫ್ಯೂನರಲ್ ಕ್ಲಸ್ಟರ್, ಮಂಗಲ್ಪಾಡಿ ಗ್ರಾಮಪಂಚಾಯತ್ ನ ವಾರ್ಡ್ 3, ಮಂಜೇಶ್ವರ ಗ್ರಾಮಪಂಚಾಯತ್ ನ ವಾರ್ಡ್ 11,12,13, ಕುಂಬಳೆ ಗ್ರಾಮಪಂಚಾಯತ್ ನ ವಾರ್ಡ್ 1,12ಗಳು ಜಿಲ್ಲೆಯಲ್ಲಿ ರಚನೆಗೊಂಡ ಕ್ಲಸ್ಟರ್ ಗಳು.
ಕ್ಲಸ್ಟರ್ ಗಳಲ್ಲಿ ಈ ವರೆಗೆ ನಡೆಸಿದ ಫಲಿತಾಂಶಗಳು ಮತ್ತು ಪಾಸಿಟಿವ್ ಫಲಿತಾಂಶಗಳು ಇಂತಿವೆ:
1. ಕಾಸರಗೋಡು ಮಾರುಕಟ್ಟೆ-63., 2. ಚೆಂಗಳ ಫ್ಯೂನರಲ್ ಕ್ಲಸ್ಟರ್-522, 44., 3. ಮಂಗಲ್ಪಾಡಿ ಗ್ರಾಮಪಂಚಾಯತ್ ವಾರ್ಡ್ 3-251,10., 4. ಪ್ರಿಯದರ್ಶಿನಿ ಲ್ಯಾಬ್(ಈಗ ಕ್ಲಸ್ಟರ್ ನಿಂದ ಹೊರತುಪಡಿಸಲಾಗಿದೆ.) 191, 9., 5. ಮಂಜೇಶ್ವರ ಗ್ರಾಮಪಂಚಾಯತ್ ನ ವಾರ್ಡ್ 11,12,13-245, 20., 6. ಕುಂಬಳೆ ಗ್ರಾಮ ಪಂಚಾಯತ್ ನ ವಾರ್ಡ್ 12-204, 24., ಕುಂಬಳೆ ಗ್ರಾಮ ಪಂಚಾಯತ್ ನ ವಾರ್ಡ್ 1-195, 28.


