HEALTH TIPS

ಕೋವಿಡ್ 19 ವ್ಯಾಪಕತೆ: ಬಾರ್ಬರ್ ಶಾಪ್‍ಗಳನ್ನು ಪರಿಶೀಲಿಸಲು ಆಗ್ರಹ

 
           ಕಾಸರಗೋಡು: ಕೋವಿಡ್ ಹರಡುವುದನ್ನು ತಡೆಯುವುದಕ್ಕಿರುವ ಮುಂಜಾಗ್ರತೆ ನಿರ್ದೇಶಗಳನ್ನು ಎಲ್ಲರೂ ಪಾಲಿಸುತ್ತಿದ್ದಾರೆಯೇ ಎಂದು ಔದ್ಯೋಗಿಕವಾಗಿ ಪರಿಶೀಲಿಸಬೇಕೆಂದು ಕೇರಳ ಸ್ಟೇಟ್ ಬಾರ್ಬರ್ - ಬ್ಯೂಟೀಷ್ಯನ್ ಅಸೋಸಿಯೇಶನ್ ಜಿಲ್ಲಾ ಸಮಿತಿ ಆಗ್ರಹಿಸಿದೆ.
        ಕ್ವಾರಂಟೈನ್‍ನಲ್ಲಿರುವವರು ಕೆಲವು ಸ್ಥಳಗಳಲ್ಲಿ ಬಾರ್ಬರ್ ಅಂಗಡಿಗಳಿಗೆ ತಲುಪುತ್ತಿರುವುದಾಗಿಯೂ ಜಿಲ್ಲಾ ಕಾರ್ಯದರ್ಶಿ ಆರ್.ರಮೇಶನ್ ತಿಳಿಸಿದ್ದಾರೆ. ಅನ್ಯರಾಜ್ಯ ಕಾರ್ಮಿಕರು ನಡೆಸುವ ಅಂಗಡಿಗಳಲ್ಲಿ ಹ್ಯಾಂಡ್‍ವಾಶ್, ಕೈತೊಳೆಯಲಿರುವ ವ್ಯವಸ್ಥೆ, ಸ್ಯಾನಿಟೈಸರ್ ಉಪಯೋಗಿಸುವುದಿಲ್ಲ. ಕೆಲಸದ ವೇಳೆ ಮಾಸ್ಕ್ ಧರಿಸುವುದಿಲ್ಲ, ರಿಜಿಸ್ಟರ್ ಮಾಡದವರೂ ಇದ್ದಾರೆ ಎಂದವರು ತಿಳಿಸಿದರು.
       ಬಾರ್ಬರ್ ಶಾಪ್‍ಗಳ ತ್ಯಾಜ್ಯವನ್ನು ಜೈವಿಕ ಗೊಬ್ಬರಕ್ಕಾಗಿ ಕೊಂಡು ಹೋಗಲಾಗುತ್ತದೆ. ಕೆಲವರು ತ್ಯಾಜ್ಯಗಳನ್ನು ಪಾಳುಬಾವಿಯಲ್ಲಿ, ರಸ್ತೆ ಬದಿಗಳಲ್ಲಿ, ಚರಂಡಿಗಳಲ್ಲಿ ಉಪೇಕ್ಷಿಸುತ್ತಿರುವುದಾಗಿಯೂ ಅವರು ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪರಿಸರ ಶುಚೀಕರಣ, ಕೋವಿಡ್ ಹರಡುವುದನ್ನು ತಡೆಯಲು ಬಾರ್ಬರ್ ಶಾಪ್‍ಗಳಿಗೆ ಸಂಬಂ„ಸಿ ಕಠಿಣ ಪರಿಶೀಲನೆ ಖಚಿತಪಡಿಸಬೇಕೆಂದು ಅವರು ಪ್ರಕಟನೆಯಲ್ಲಿ ಆಗ್ರಹಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries