HEALTH TIPS

ಜ್ವರ ಮಾತ್ರವೇ ಕೋವಿಡ್-19 ಸೋಂಕಿನ ಪ್ರಧಾನ ಲಕ್ಷಣವಲ್ಲ: ದೆಹಲಿ ಏಮ್ಸ್ ವರದಿ

   
           ನವದೆಹಲಿ: ಕೇವಲ ಜ್ವರ ಮಾತ್ರವೇ ಕೊರೋನಾ ಸೋಂಕಿನ ಪ್ರಧಾನ ಲಕ್ಷಣ ಅಲ್ಲವೇ ಅಲ್ಲ ಎಂದು ವೈದ್ಯರ ತಂಡವೊಂದು ಹೇಳಿದೆ.
         ಈ ಬಗ್ಗೆ ದೆಹಲಿ ಏಮ್ಸ್ ಆಸ್ಪತ್ಪೆಯ ನುರಿತ ವೈದ್ಯರ ತಂಡ ರೋಗಿಗಳ ಅಧ್ಯಯನ ಮಾಡಿ ವರದಿ ನೀಡಿದೆ. ಈ ವರದಿಯಲ್ಲಿ ಕೇವಲ ಜ್ವರ ಮಾತ್ರವೇ ಕೊರೋನಾ ಸೋಂಕಿನ ಪ್ರಧಾನ ಲಕ್ಷಣ ಅಲ್ಲವೇ ಅಲ್ಲ ಎಂದು ಹೇಳಲಾಗಿದೆ. ದೆಹಲಿ ಏಮ್ಸ್ ಆಸ್ಪತ್ರೆಯ 29 ಮಂದಿ ವೈದ್ಯರು ಈ ಅಧ್ಯಯನದಲ್ಲಿ  ಬಳಸಿಕೊಳ್ಳಲಾಗಿತ್ತು. ಈ ಪೈಕಿ ಮಾರ್ಚ್ 23 ರಿಂದ ಏಪ್ರಿಲ್ 15ರವರೆಗಿನ ರೋಗಿಗಳ ಡಾಟಾವನ್ನು ಬಳಕೆ ಮಾಡಲಾಗಿದೆ. 144 ರೋಗಿಗಳಲ್ಲಿ ಶೇ.93ರಷ್ಟು ಮಂದಿ ಪುರುಷರಿದ್ದು, 10 ಮಂದಿ ವಿದೇಶಿಗರಾಗಿದ್ದಾರೆ.
             ಈ ವರದಿಯಲ್ಲಿ ಶೇ.17ರಷ್ಟು ಮಂದಿಗೆ ಮಾತ್ರ ಜ್ವರ ಕಾಣಿಸಿಕೊಂಡಿತ್ತು. ಚೀನಾದಲ್ಲಿ ಶೇ.44 ರಷ್ಟು ಮಂದಿಯಲ್ಲಿ ಜ್ವರ ಇತ್ತು. ಶೇ.88ರಷ್ಟು ಮಂದಿಗೆ ಆಸ್ಪತ್ರೆಯಲ್ಲಿ ದಾಖಲಾದ ಬಳಿಕ ಜ್ವರ ಕಾಣಿಸಿಕೊಂಡಿತ್ತು. ಕೆಲವರಲ್ಲಿ ಸಣ್ಣ ಪ್ರಮಾಣದ ಉಸಿರಾಟದ ತೊಂದರೆ, ಕಫ, ಗಂಟಲಿನಲ್ಲಿ ಕಿರಿಕಿರಿ ರೀತಿಯ ಸಣ್ಣ  ಪ್ರಮಾಣದ ಲಕ್ಷಣಗಳೂ ಕೂಡ ಇರಬಹುದು. ಶೇ.44 ರಷ್ಟು ಮಂದಿಗೆ ಯಾವುದೇ ಲಕ್ಷಣಗಳಿಲ್ಲ. ಈ ಲಕ್ಷಣವಿಲ್ಲದವರು ಮತ್ತಷ್ಟು ಸೋಂಕನ್ನು ಹರಡುವ ಎಲ್ಲಾ ಸಾಧ್ಯತೆ ಇರುತ್ತದೆ. 144 ಮಂದಿ ರೋಗಿಗಳಲ್ಲಿ ನಾಲ್ಕು ಮಂದಿಯಲ್ಲಿ ಅಂದರೆ ಶೇ.2.8ರಷ್ಟು ಮಂದಿಯ ಪರಿಸ್ಥಿತಿ ಚಿಂತಾಜನಕವಾಗಿತ್ತು. ದಾಖಲಾಗುವ  ಸಂದರ್ಭದಲ್ಲಿ ಕೇವಲ 16 ಮಂದಿಗೆ ಮಾತ್ರ ಜ್ವರವಿತ್ತು ಎಂದು ಹೇಳಿದ್ದಾರೆ.
       ಈ ಅಧ್ಯಯನ ವಯಸ್ಸಿನ ಮೇಲೆ ನಿರ್ಧರಿತವಾಗಿಲ್ಲ, ಇದರಲ್ಲಿ ಎಲ್ಲಾ ವಯಸ್ಸಿನವರೂ ಇದ್ದರು. ಅಧ್ಯಯನ ನಡೆದ 144 ರೋಗಿಗಳ ಪೈಕಿ ಇಬ್ಬರು ಸಾವನ್ನಪ್ಪಿದ್ದಾರೆ. ಮೃತರಲ್ಲಿ ಅತಿಯಾದ ಸೋಂಕು ಕಾಣಿಸಿಕೊಂಡಿತ್ತು. ರೋಗಿಗಳಿಗೆ ಪ್ಯಾರಾಸಿಟಮೋಲ್, ವಿಟಮಿನ್ ಸಿ, ಅ್ಯಂಟಿ ಹಿಸ್ಟಮೈನ್ಸ್  ನೀಡಲಾಗಿತ್ತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries