HEALTH TIPS

ಕೋವಿಡ್ 19: ಟ್ರೂನಾಟ್ ಟೆಸ್ಟ್ ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಆರಂಭ


              ಕಾಸರಗೋಡು: ಕೋವಿಡ್-19 ಸೋಂಕು ಸಂಬಂಧ ಎರಡೇ ತಾಸುಗಳಲ್ಲಿ ಸ್ಯಾಂಪಲ್ ತಪಾಸಣೆಯ ಫಲಿತಾಂಶ ಅರಿಯಬಲ್ಲ ಟ್ರೂನಾಟ್ ಟೆಸ್ಟ್ ಕಾಸರಗೋಡು ಸರ್ಕಾರಿ ಜನರಲ್ ಆಸ್ಪತ್ರೆಯಲ್ಲಿ ಆರಂಭಗೊಂಡಿದೆ. ಇನ್ನು ಮುಂದೆ ಶಂಕಿತರ ಸ್ಯಾಂಪಲ್ ತಪಾಸಣೆಯ ಫಲಿತಾಂಶಕ್ಕಾಗಿ ಈ ಹಿಂದಿನಂತೆ ಕಾದು ಕುಳಿತುಕೊಳ್ಳಬೇಕಾಗಿಲ್ಲ.ಇಬ್ಬರು ಇರುವ ಮೂರು ಬ್ಯಾಚ್ ತಪಾಸಣೆಯ ಮೂಲಕ 6 ಮಂದಿಯ ತಪಾಸಣೆ ಪ್ರತಿದಿ ನಡೆಸಬಹುದಾಗಿದೆ.ಈ ನಿಟ್ಟಿನಲ್ಲಿ ಎರಡು ಯಂತ್ರಗಳ ಚಟುವಟಿಕೆ ಆಸ್ಪತ್ರೆಯಲ್ಲಿ ನಡೆಯುತ್ತಿದೆ. ಗಂಟಲ ದ್ರವವನ್ನು ಸಂಗ್ರಹಿಸಿ ತಪಾಸಣೆಗೆ ಒಳಪಡಿಸಲಾಗುತ್ತದೆ. ದಾಖಲಾತಿ ಪಡೆದ ರೋಗಿಗಳೂ, ಗಂಭೀರ ಸ್ಥಿತಿಯಲ್ಲಿರುವ ರೋಗಿಗಳಿಗೂ, ಮೃತದೇಹದ ಸ್ಯಾಂಪಲ್ ತಪಾಸಣೆಯೂ ಈ ತಾಂತ್ರಿಕತೆಯ ಮೂಲಕ ಸಾಧ್ಯವಾಗಲಿದೆ.
         ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಜೂ.27ರಂದು ಟೆಸ್ಟ್ ನ ಟ್ರಯಲ್ ರನ್ ನಡೆಸಲಾಗಿತ್ತು. ಟ್ರಯಲ್ ಅವಧಿಯಲ್ಲಿ ಪಡೆದಿದ್ದ ಸ್ಯಾಂಪಲ್ ತಪಾಸಣೆಯ ಫಲಿತಾಂಶ ನೆಗೆಟಿವ್ ಆಗಿತ್ತು. ದಾಖಲಾತಿ ಚಿಕಿತ್ಸೆ ಪಡೆಯುತ್ತಿರುವ ಮೂವರು ರೋಗಿಗಳ ಸ್ಯಾಪಲ್ ಈ ವೇಳೆತಪಾಸಣೆಗೊಳಪಡಿಸಲಾಗಿದೆ. ಇವರ ಫಲಿತಾಂಶ ನೆಗೆಟಿವ್ ಆಗಿದೆ ಎಂದು ಆಸ್ಪತ್ರೆಯ ವರಿಷ್ಠಾಧಿಕಾರಿ ಡಾ.ಕೆ.ಕೆ.ರಾಜಾರಾಮ ತಿಳಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries