ಮುಳ್ಳೇರಿಯ: ಅರಣ್ಯ ಇಲಾಖೆ ಕಾಸರಗೋಡು ಡಿವಿಶನ್ ಕಾಸರಗೋಡು ರೇಂಜ್ ವ್ಯಾಪ್ತಿಯಲ್ಲಿ ವನ ಮಹೋತ್ಸವ-2020ಗೆ ಚಾಲನೆ ನೀಡಲಾಯಿತು.
ಕಾಸರಗೋಡು ರೇಂಜ್ ವ್ಯಾಪ್ತಿಯ ಪರಪ್ಪ ಸೆಕ್ಷನ್ ನಲ್ಲಿ ನಡೆದ ಕಾರ್ಯಕ್ರಮ ವಿಭಾಗೀಯ ಅರಣ್ಯ ಅಧಿಕಾರಿ ಅನೂಪ್ ಕುಮಾರ್ ಪಿ.ಕೆ ಅಧ್ಯಕ್ಷತೆಯಲ್ಲಿ ನಡೆಯಿತು. ಪರಿಸರ ಮರು ನಿರ್ಮಾಣ ವಲಯ ಘೋಷಣೆ ಮತ್ತು ಜಿಲ್ಲಾ ಮಟ್ಟದ ಉದ್ಘಾಟನೆ ನೆರವೇರಿಸಿ ದೇಲಂಪಾಡಿ ಪಂಚಾಯಿತಿ ಅಧ್ಯಕ್ಷ ಎ.ಮುಸ್ತಫ ಹಾಜಿ ಮಾತನಾಡಿ ಏಕ ವೃಕ್ಷ ತೋಟದಿಂದ ವೈವಿಧ್ಯತೆಯೆಡೆಗೆ ಸಾಗುವ ಅರಣ್ಯ ಇಲಾಖೆಯ ಪರಿವರ್ತನೆಯ ಮೆಟ್ಟಿಲು ಇದಾಗಲಿ ಎಂದು ಈ ಸಂದರ್ಭದಲ್ಲಿ ಅವರು ಹಾರೈಸಿದರು.
ಕಾಸರಗೋಡು ಸಾಮಾಜಿಕ ಅರಣ್ಯ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಅಜಿತ್ ಕೆ.ರಾಮನ್ ಮುಖ್ಯ ಭಾಷಣ ಮಾಡಿ ವನ ಮಹೋತ್ಸವದ ಪ್ರತಿಜ್ಞೆ ಬೋಧಿಸಿದರು. ವಾರ್ಡ್ ಸದಸ್ಯ ಎ.ಸುಹೈಬ್, ಕಾಸರಗೋಡು ರೇಂಜ್ ಸಾಮಾಜಿಕ ಅರಣ್ಯ ಅಧಿಕಾರಿ ಅಬ್ದುಲ್ಲಾ ಕುಂಜಿಪರಂಬತ್ತ್, ಡೆಪ್ಯುಟಿ ರೇಂಜ್ ಅರಣ್ಯ ಅಧಿಕಾರಿ ಬಿ.ವಿ. ರಾಜಗೋಪಾಲನ್ ಶುಭ ಹಾರಸಿ ಮಾತನಾಡಿದರು.
ಬೀಟ್ ಫಾರೆಸ್ಟ್ ಅಧಿಕಾರಿ ಫರ್ಜಾನಾ ಮಜೀದ್ ಯೋಜನೆಯ ಕುರಿತು ವಿವರಿಸಿದರು.ರೇಂಜ್ ಫಾರೆಸ್ಟ್ ಅಧಿಕಾರಿ ಎನ್.ಅನಿಲ್ ಕುಮಾರ್ ಸ್ವಾಗತಿಸಿ ವನ ಮಹೋತ್ಸವದ ಪ್ರಾಧಾನ್ಯತೆ ವಿವರಿಸಿ ವನ ಮಹೋತ್ಸವದ ಭಾಗವಾಗಿ ಕಾಸರಗೋಡು ರೇಂಜ್ ವ್ಯಾಪ್ತಿಯಲ್ಲಿ ನಡೆಯಲಿರುವ ವಿವಿಧ ಕಾರ್ಯಕ್ರಮಗಳ ಮಾಹಿತಿ ನೀಡಿದರು.ವಿಭಾಗೀಯ ಅರಣ್ಯ ಅಧಿಕಾರಿ ಎನ್.ವಿ.ಸತ್ಯನ್ ವಂದಿಸಿದರು.
ವನಮಹೋತ್ಸವ 2020 ಭಾಗವಾಗಿ ಪರಪ್ಪ ಸೆಕ್ಷನ್ ರಕ್ಷಿತಾರಣ್ಯದಲ್ಲಿನ 1956 ತೇಗು ಮರಗಳಿರುವ 16 ಹೆಕ್ಟೇರ್ ಭೂ ಪ್ರದೇಶದಲ್ಲಿ ಏಕವೃಕ್ಷ ತೋಟದಿಂದ ಜೈವ ಸಂಪನ್ನತೆಯೆಡೆಗೆ ಎಂಬ ಲಕ್ಷ್ಯದ ಸಾಕ್ಷಾತ್ಕಾರ ಕ್ಕಾಗಿ ಕಾಸರಗೋಡು ರೇಂಜ್ ಸಾಮಾಜಿಕ ಅರಣ್ಯ ವಿಭಾಗ ಅಭಿವೃದ್ಧಿಪಡಿಸಿದ ಸ್ಥಳೀಯ ಫಲವೃಕ್ಷಗಳು ಸೇರಿದಂತೆ ವಿವಿಧ ಸಸ್ಯಗಳನ್ನು ನೆಟ್ಟು ಬೆಳೆಸಲಾಗುವುದು.
ಮುಸ್ತಫಾ ಹಾಜಿ ಹಲಸಿನ ಗಿಡ ನೆಡುವುದರ ಮೂಲಕ ಈ ಯೋಜನೆಯನ್ನು ಉದ್ಘಾಟಿಸಿದರು.ಕುಟುಂಬಶ್ರೀ ಕಾರ್ಯಕರ್ತೆಯರು, ಸಾರ್ವಜನಿಕರು, ಅರಣ್ಯ ಇಲಾಖೆ ಅಧಿಕಾರಿಗಳು ಕೋವಿಡ್ -19 ಮಾರ್ಗಸೂಚಿಗಳನ್ನು ಅನುಸರಿಸಿ ಹಲಸು, ಹುಳಿ, ಮತ್ತಿತರ ವಿವಿಧ ಜಾತಿಯ ಸಸಿಗಳನ್ನು ನೆಟ್ಟರು.
ಮಣ್ಣು ಮತ್ತು ಜಲ ಸಂರಕ್ಷಣೆಯ ಭಾಗವಾಗಿ ಯೋಜನಾ ಪ್ರದೇಶದಲ್ಲಿ ಲಭಿಸಿದ ಕಾಡು ಪೆÇದೆ ಕಳೆ ಮುಳ್ಳುಗಳನ್ನು ಉಪಯೋಗಿಸಿ ಬಾಹ್ಯರೇಖೆ ರೇಖೆಗೆ ಸಮಾನಾಂತರವಾಗಿ ತಡೆ ನಿರ್ಮಿಸಿ ಕಾಡಿನ ಮೂಲಕ ಹರಿದೋಡುವ ಮಳೆ ನೀರನ್ನು ತಡೆದು ಇಂಗಿಸುವುದನ್ನು ಖಾತ್ರಿಪಡಿಸಲಾಗುತ್ತಿದೆ.
ರೇಂಜ್ ಫಾರೆಸ್ಟ್ ಅಧಿಕಾರಿ ಎನ್. ಅನಿಲ್ ಕುಮಾರ್, ವಿಭಾಗ ಅರಣ್ಯ ಅಧಿಕಾರಿಗಳಾದ ಎನ್.ವಿ.ಸತ್ಯನ್, ಒ.ಸುರೇಂದ್ರನ್, ಆರ್.ಬಾಬು, ಕೆ.ಜಯಕುಮಾರನ್, ಕೆ.ಎನ್. ರಮೇಶ್, ಎಂ.ಪಿ.ರಾಜು, ಕೆ.ಸುನೀಲ್ ಕುಮಾರ್, ಬೀಟ್ ಫಾರೆಸ್ಟ್ ಅಧಿಕಾರಿಗಳಾದ ನಿತಿನ್ ಚಂದ್ರನ್ ವಿ., ಯೂಸುಫ್ ಎಂ.ಕೆ, ರಾಜೇಶ್ ಕೆ., ಬಿಂದು ವಿ., ಉಮ್ಮರ್ ಫಾರೂಕ್ ಕೆ.ಎಂ. ಫರ್ಸಾನಾ ಮತ್ತು ನರಸಿಂಹ.ಕೆ. ನೇತೃತ್ವ ವಹಿಸಿದರು.





