ಮುಳ್ಳೇರಿಯ: ಜಾಗತಿಕ ಮಹಾಮಾರಿ ಕೊರೊನಾ ಕೋವಿಡ್ 19 ರ ನಿಯಂತ್ರಣಕ್ಕಾಗಿ ಸಂಪೂರ್ಣ ದೇಶ ಲಾಕ್ ಡೌನ್ ಘೋಷಣೆಯಾದಂದಿನಿಂದ ತೊಂದರೆ ಗೊಳಪಟ್ಟವರಲ್ಲಿ ದೈವ ಪಾತ್ರಿಗಳು ಅಗ್ರಪಂಕ್ತಿಯಲ್ಲಿರುವರು.
ಏಪ್ರಿಲ್, ಮೇ ತಿಂಗಳು ಇವರ ಬಹುದೊಡ್ಡ ಕುಟುಂಬ ನಿರ್ವಹಣೆಗೆ ಶೇಕಡಾ 90 ಪ್ರತಿಶತ ಆದಾಯ ತರುವ ತಿಂಗಳು.
ಆದರೆ ಲಾಕ್ ಡೌನ್ ನಿಂದಾಗಿ ಎಲ್ಲಾ ದೈವ0ಕೆಟ್ಟು ಮಹೋತ್ಸವಗಳು, ವಿವಿಧ ತರವಾಡುಗಳ ವಾರ್ಷಿಕ ಕೋಲಗಳು ರದ್ದುಗೊಂಡ ಹಿನ್ನಲೆಯಲ್ಲಿ ಈ ಒಂದೇ ಕಸುಬು ನೆಚ್ಚಿಕೊಂಡಿರುವ ದೈವ ಪಾತ್ರಿಗಳ ಬದುಕು ಸಂಪೂರ್ಣ ಡೋಲಾಯಮಾನವಾಗಿದೆ.
ಈ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು ಪ್ರಸಿದ್ಧ ತರವಾಡು ಮಲ್ಲ ಪೂಜಂಗೋಡಿನ ಶ್ರೀ ಮಾಞಳಮ್ಮ ವಿಷ್ಣುಮೂರ್ತಿ ಕೊರತ್ತಿಯಮ್ಮ ಯಾದವ ತರವಾಡು ಇದರ ನೇತೃತ್ವದಲ್ಲಿ ಶ್ರೀ ತರವಾಡಿನ ದೈವಪಾತ್ರಿಗಳಿಗೆ, ದೈವ ಚಾಕರಿಕಾರರಿಗೆ, ಧವಸ-ಧಾನ್ಯಗಳ ಸಹಿತ 20 ವಿವಿಧ ರೀತಿಯ ಸಾಮಗ್ರಿಗಳ ವಿಶೇಷ ಕಿಟ್ ಗಳನ್ನು ವಿತರಿಸಲಾಯಿತು.
ತರವಾಡಿನಲ್ಲಿ ನಡೆದ ಸರಳ ಸಮಾರಂಭದಲ್ಲಿ ತರವಾಡಿನ ರಕ್ಷಾಧಿಕಾರಿ ನಿವೃತ್ತ ಜಿಲ್ಲಾ ವಿದ್ಯಾಧಿಕಾರಿ ವೇಣುಗೋಪಾಲ ಎಡನೀರು, ಪ್ರಧಾನ ಕಾರ್ಯದರ್ಶಿ ಬಾಲಕೃಷ್ಣ ಬಜ ನೆಟ್ಟಣಿಗೆ, ಖಜಾಂಚಿ ಅಚ್ಚುತ ಪದ್ಮಾರ್, ಸದಸ್ಯರುಗಳಾದ ನಾರಾಯಣ ಮಣಿಯಾಣಿ ಮಲ್ಲ, ಪ್ರಭಾಕರ್ ಅಡೂರು, ಚಂದ್ರನ್ ಪುಂಜಂಗೋಡು ಮೊದಲಾದವರು ಉಪಸ್ಥಿತರಿದ್ದರು.





