ಕಾಸರಗೋಡು: ಸತ್ಯಸಾಯಿ ಟ್ರಸ್ಟ್ ಎಣ್ಮಕಜೆ ಗ್ರಾಮದಲ್ಲಿ ಈಗಾಗಲೇ ನಿರ್ಮಿಸಿರುವ 36 ಮನೆಗಳನ್ನು ಈಗಾಗಲೇ ಗುರುತಿಸಲ್ಪಟ್ಟ ಅರ್ಹರಿಗೆ ಹಸ್ತಾತರಿಸಿ ಬಾಕ್ಕುಳಿದ 9 ಕುಟುಂಬಗಳ ಸಹಿತ 42 ಮನೆಗಳಿಗೆ ಅರ್ಹರನ್ನು ಗುರುತಿಸಲಾಗಿದೆ.
ಸಮಯ ಪರಿಧಿಯಲ್ಲಿ ಕೊಡಲ್ಪಟ್ಟ ಮನೆಗಳಿಗೆ ಆಗಮಿಸಿ ವಾಸಿಸದ ಫಲಾನುಭವಿಗಳಿಗೆ ವಿವರಣೆ ನೀಡಲು ಪತ್ರ ಕಳಿಸಿಕೊಡುವ ಆಯಾ ತಹಶೀಲ್ದಾರರಿಗೆ ಸೂಚನೆ ನೀಡಲಾಗಿದೆ.
ಪತ್ರ ಸ್ವೀಕರಿಸಿದ ಒಂದು ತಿಂಗಳೊಳಗೆ ಫಲಾನುಭವಿಯು ನಿಗದಿಪಡಿಸಿದ ಜಮೀನಿನಲ್ಲಿ ಶಾಶ್ವತವಾಗಿ ನೆಲಸಬೇಕು. ಇಲ್ಲದಿದ್ದಲ್ಲಿ ಅವರಿಗೆ ನೀಡಲಾದ ಭೂಹಕ್ಕು, ನಕ್ಷೆಗಳನ್ನು ರದ್ದುಗೊಳಿಸಲಾಗುವುದೆಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ನೀರು ಮತ್ತು ವಿದ್ಯುತ್ ಸಂಪರ್ಕಗಳು ಲಭ್ಯವಾಗಲು ಆಯಾ ಗ್ರಾಹಕನೇ ಆಯಾ ಕಚೇರಿಗಳಿಗೆ ಅರ್ಜಿಸಲ್ಲಿಸಬೇಕು ಎಂದು ಕಂದಾಯ ಅಧಿಕಾರಿಗಳು ತೀರ್ಮಾನಿಸಿ ತಿಳಿಸಿರುವರು. ಸಫಲಯಂ ಯೋಜನೆಯ ಪ್ರಕಾರ ವೆಳ್ಳರಿಕುಂಡ್ ತಾಲ್ಲೂಕಿನ ಪರಪ್ಪ ಗ್ರಾಮದಲ್ಲಿ ವಸತಿ
ನಿರ್ಮಾಣ ಕಾರ್ಯಗಳು ನವೆಂಬರ್ 23 ರಿಂದ ಪ್ರಾರಂಭವಾಗಲಿದೆ ಎಂದು ಸತ್ಯ ಸತ್ಯಸಾಯಿ ಟ್ರಸ್ಟ್ ಕಾರ್ಯನಿರ್ವಾಹಕ ನಿರ್ದೇಶಕರು ಮಾಹಿತಿ ನೀಡಿರುವರು.





