ಕಾಸರಗೋಡು: ಕಾಸರಗೋಡು ಜಿಲ್ಲೆಯ ಶಿಕ್ಷಣ ಇಲಾಖೆಯಲ್ಲಿ ಲೈಬ್ರರಿಯನ್ ಗ್ರೇಡ್ 4 (ಕನ್ನಡ ಮಾಧ್ಯಮ ಕ್ಯಾಟಗರಿ ನಂಬ್ರ 437/2014) ಹುದ್ದೆಯ ನೇಮಕಾತಿಗಾಗಿ 2016 ಜೂ.6ರಂದು ಜಾರಿಗೆ ಬಂದ ರ್ಯಾಂಕ್ ಪಟ್ಟಿಯ ಕಾಲಾವಧಿ 2019 ಜೂ.5ರಂದು ಕೊನೆಗೊಂಡಿರುವ ಹಿನ್ನೆಲೆಯಲ್ಲಿ 2019 ಜೂ.7ರಂದು ರ್ಯಾಂಕ್ ಪಟ್ಟಿ ರದ್ದುಗೊಳಿಸಲಾಗಿದೆ ಎಂದು ಲೋಕಸೇವಾ ಆಯೋಗ ತಿಳಿಸಿದೆ.