ಕಾಸರಗೋಡು: ವಿಶೇಷ ಚೇತನರಿಗಾಗಿ ತ್ರಿಚಕ್ರ ವಾಹನದ ವಿತರಣೆ ಕಾಸರಗೋಡು ಜಿಲ್ಲಾ ಪಂಚಾಯತ್‍ನಲ್ಲಿ ನಡೆಯಿತು.
ದೈಹಿಕ-ಮಾನಸಿಕ ಸಮಸ್ಯೆ ಎದುರಿಸುತ್ತಿರುವವರ ಜಿಲ್ಲಾ ಮಟ್ಟದ ಕ್ರಿಯಾ ಯೋಜನೆ ಅಂಗವಾಗಿ ಈ ಕಾರ್ಯಕ್ರಮ ಜರುಗಿತು. ಜಿಲ್ಲಾ ಪಂಚಾಯತ್‍ನ ವಿಶೇಷ ಚೇತನ ಸೌಹಾರ್ದ ಯೋಜನೆಯಲ್ಲಿ ಅಳವಡಿಸಿ ವಿಶೇಷ ಚೇತನರ ಯಾತ್ರಾ ಸೌಲಭ್ಯ ಸುಧಾರಿತಗೊಳಿಸುವ ನಿಟ್ಟಿನಲ್ಲಿ ಈ ಕ್ರಮ ಕೈಗೊಂಡಿದ್ದು, 28 ಮಂದಿಗೆ ಹೆಚ್ಚುವರಿ ಚಕ್ರ ಅಳವಡಿಸಿರುವ ಸ್ಕೂಟರ್‍ಗಳ ವಿತರಣೆ ನಡೆಸಲಾಗಿದೆ. 79 ಸಾವಿರ ರೂ. ಬೆಲೆಯ ಸ್ಕೂಟರ್‍ಗಳನ್ನು ಈ ಮೂಲಕ ನೀಡಲಾಗಿದೆ. ಈ ಯೋಜನೆ ಪ್ರಕಾರ ವಿಶೇಷ ಚೇತನರ ಸೌಹಾರ್ದ ಭವನ, ಗೂಡಂಗಡಿ, ಉಪಕರಣಗಳು ಇತ್ಯಾದಿಗಳ ಲಭ್ಯತೆಯ ಸೌಲಭ್ಯವೂ ಇದೆ.
ಸಮಾರಂಭದಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ಎ.ಜಿ.ಸಿ.ಬಶೀರ್ ಅವರು ವಿಶೇಷ ಚೇತನರಿಗೆ ತ್ರಿಚಕ್ರ ವಾಹನದ ವಿತರಣೆ ನಡೆಸಿದರು. ಸ್ಥಾಯೀ ಸಮಿತಿ ಅಧ್ಯಕ್ಷೆ ಎ.ಪಿ.ಉಷಾ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಮುಖ್ಯ ಅತಿಥಿಯಾಗಿದ್ದರು. ಜಿಲ್ಲಾ ಸಾಮಾಜಿಕ ನ್ಯಾಯ ಅಧಿಕಾರಿ ಜೋಸೆಫ್ ರೆಬೆಲ್ಲೋ ವರದಿ ವಾಚಿಸಿದರು. ಜಿಲ್ಲಾ ಪಂಚಾಯತ್ ಸದಸ್ಯರು ಉಪಸ್ಥಿತರಿದ್ದರು. ಜಿಲ್ಲಾ ಪಂಚಾಯತ್ ಕಾರ್ಯದರ್ಶಿ ಪಿ.ನಂದಕುಮಾರ್ ಸ್ವಾಗತಿಸಿದರು. ಕಿರಿಯ ವರಿಷ್ಠಾಧಿಕಾರಿ ಪಿ.ವಿ.ಭಾಸ್ಕರನ್ ವಂದಿಸಿದರು.