HEALTH TIPS

2021 ಫೆಬ್ರವರಿ ವೇಳೆಗೆ ಭಾರತದಲ್ಲಿ ಪ್ರತಿ ದಿನ 2.87 ಲಕ್ಷ ಕೊರೋನಾ ಸೋಂಕು: ಬೆಚ್ಚಿ ಬೀಳಿಸುವಂತಿದೆ ಎಂಐಟಿ ವರದಿ!

 
               ನವದೆಹಲಿ: ಭಾರತದಲ್ಲಿ ಫೆಬ್ರವರಿ 2021 ರ ವೇಳೆಗೆ ದಿನವೊಂದಕ್ಕೆ 2.87 ಲಕ್ಷ ಕೊರೋನಾ ವೈರಸ್ ಪ್ರಕರಣಗಳು ಪತ್ತೆಯಾಗುವ ಸಂಭವವಿದೆ ಎಂದು ಅಮೆರಿಕ ಮೂಲದ ಮ್ಯಾಸಚೂಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎಂಐಟಿ) ಸಂಶೋಧಕರು ಎಚ್ಚರಿಸಿದ್ದಾರೆ.
         ಸಾಂಕ್ರಾಮಿಕ ರೋಗ ಪ್ರಸರಣದ ಹರಡುವಿಕೆಯ ಅಂದಾಜು ಮಾಡಲು ಸಾಂಕ್ರಾಮಿಕ ರೋಗಶಾಸ್ತ್ರಜ್ಞರು ಬಳಕೆ ಮಾಡುವ ಪ್ರಮಾಣಿತ ಗಣಿತ ಮಾದರಿ SEIR (Susceptible, Exposed, Infectious, Recovered) ಯನ್ನು ಬಳಕೆ ಮಾಡಿಕೊಂಡು ಸಂಶೋಧಕರು ಈ ವರದಿ ಪ್ರಕಟಿಸಿದ್ದಾರೆ.
      ಎಂಐಟಿಯ ಸ್ಲೋನ್ ಸ್ಕೂಲ್ ಆಫ್ ಮ್ಯಾನೇಜ್ಮೆಂಟ್ ನ ಹಝೀರ್ ರಹಮಂದಾದ್, ಟಿವೈ ಲಿಮ್ ಮತ್ತು ಜಾನ್ ಸ್ಟರ್ಮನ್ ಅವರು ಸಂಶೋಧನಾ ತಂಡದಲ್ಲಿದ್ದು 2021 ರ ಮೇ ವೇಳೆಗೆ ಕೊರೋನಾ ಲಸಿಕೆ ಲಭ್ಯವಾಗದೇ ಇದ್ದಲ್ಲಿ ಜಾಗತಿಕವಾಗಿ ಕೊರೋನಾ ಸಂಖ್ಯೆ 25 ಕೋಟಿ ದಾಟಲಿದೆ ಎಂದು ವಿಶ್ಲೇಷಿಸಿದ್ದಾರೆ. ಒಂದು ವೇಳೆ ಲಸಿಕೆ ಲಭ್ಯವಾಗದೇ ಇದ್ದರೆ 2021 ರ ಫೆಬ್ರವರಿ ವೇಳೆಗೆ ಭಾರತ ದಿನಂಪ್ರತಿ 2.87 ಲಕ್ಷ ಪ್ರಕರಣಗಳ ಮೂಲಕ ವಿಶ್ವದಲ್ಲೇ ಅತಿ ಹೆಚ್ಚು ಸಂಖ್ಯೆಯನ್ನು ಹೊಂದಿದ ರಾಷ್ಟ್ರವಾಗಲಿದೆ ನಂತರದ ಸ್ಥಾನದಲ್ಲಿ ಅಮೆರಿಕ ( ದಿನವೊಂದಕ್ಕೆ 95,000 ಪ್ರಕರಣಗಳು) ದಕ್ಷಿಣ ಆಫ್ರಿಕಾ (21,000 ಪ್ರಕರಣಗಳು) ಇರಾನ್ (17,000 ಪ್ರಕರಣಗಳು ದಿನಕ್ಕೆ) ದಾಖಲಿಸಲಿವೆ ಎಂದು ಸಂಶೋಧಕರು ಎಚ್ಚರಿಸಿದ್ದಾರೆ.
      ರೋಗ ಪ್ರಸರಣದ ಏರಿಕೆಗೆ ಸಂಶೋಧಕರು ಮೂರು ಸಂದರ್ಭಗಳನ್ನು ಪರಿಗಣಿಸಿದ್ದಾರೆ.
      1. ಈಗಿನ ಸೋಂಕು ಟೆಸ್ಟಿಂಗ್ ರೇಟ್ ಹಾಗೂ ಅದರ ಪ್ರತಿಕ್ರಿಯೆ
      2. ಜುಲೈ.1, 2020 ರ ವೇಳೆಗೆ ಟೆಸ್ಟಿಂಗ್ ಪ್ರಮಾಣವನ್ನು ಶೇ.01 ರಷ್ಟು ಏರಿಕೆ ಮಾಡಿದರೆ...
      3. ಟೆಸ್ಟಿಂಗ್ ನಲ್ಲಿ ಯಥಾಸ್ಥಿತಿ ಇದ್ದು ಓರ್ವ ಮನುಷ್ಯ 8 ಜನರಿಗೆ ಸೋಂಕು ಹರಡಿದರೆ ಏನಾಗಬಹುದು ಎಂಬುದರ ಲೆಕ್ಕಾಚಾರವನ್ನೂ ಸಂಶೋಧಕರು ಅಂದಾಜಿಸಿದ್ದಾರೆ.
         ಮೊದಲನೆಯ ಸಂದರ್ಭದಲ್ಲಿ ಸಂಶೋಧಕರ ಪ್ರಕಾರ 84 ದೇಶಗಳಿಂದ ಒಟ್ಟಾರೆ ಕೊರೋನಾ ಪ್ರಕರಣಗಳು 1.55 ಬಿಲಿಯನ್ ಗೆ ಏರಿಕೆಯಾಗಲಿದೆ. ಎರಡನೆ ಸಂದರ್ಭದ ಪ್ರಕಾರ ಒಂದು ವೇಳೆ ಟೆಸ್ಟಿಂಗ್ ನ್ನು ಪ್ರತಿ ದಿನ ಶೇ.1 ರಷ್ಟು ಏರಿಕೆ ಮಾಡಿದರೆ ಈ ದೇಶಗಳಲ್ಲಿ ಪ್ರಕರಣದ ಸಂಖ್ಯೆ 1.37 ಬಿಲಿಯನ್ ಗೆ ಏರಿಕೆಯಾಗಲಿದೆ. ಎರಡೂ ಸಂದರ್ಭಗಳಲ್ಲಿ ಸೆಪ್ಟೆಂಬರ್-ನವೆಂಬರ್ ವೇಳೆಗೆ ಅತ್ಯಂತ ಹೆಚ್ಚು ಹೊರೆಯಾಗಲಿದೆ ಎಂದು ಸಂಶೋಧಕರು ಹೇಳಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries