HEALTH TIPS

ಮಹಾಮಾರಿಯ ಕುಟಿಲ ಆರ್ಭಟ-ಇಂದು ಮತ್ತಷ್ಟು ಏರಿಕೆ-ರಾಜ್ಯದಲ್ಲಿ 339 ಸೋಂಕು ಪತ್ತೆ-ಕಾಸರಗೋಡು : 11 ಮಂದಿಗೆ ಸೋಂಕು ದೃಢ

   
        ಕಾಸರಗೋಡು: ರಾಜ್ಯದಲ್ಲಿ ಕೊರೊನಾ ಆರ್ಭಟ ಮಿತಿ ಮೀರಿದ್ದು ಗುರುವಾರ ಒಂದೇ ದಿನ 339 ಪ್ರಕರಣ ದೃಢಪಟ್ಟಿದೆ. ಕಾಸರಗೋಡು ಜಿಲ್ಲೆಯಲ್ಲಿ ಗುರುವಾರ 11 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ. 15 ಮಂದಿಗೆ ಕೋವಿಡ್ ನೆಗೆಟಿವ್ ಆಗಿದೆ. 8 ಮಂದಿ ವಿದೇಶಗಳಿಂದ, ಮೂವರು ಇತರ ರಾಜ್ಯಗಳಿಂದ ಬಂದವರು ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು. 
         ವಿದೇಶದಿಂದ ಆಗಮಿಸಿದವರು : ಯು.ಎ.ಇ.ಯಿಂದ ಬಂದಿದ್ದ ಪಳ್ಳಿಕ್ಕರೆ ಪಂಚಾಯತ್‍ನ 53 ವರ್ಷದ ನಿವಾಸಿ, ಮಂಜೇಶ್ವರ ಪಂಚಾಯತ್‍ನ 28 ವರ್ಷದ ನಿವಾಸಿ, ಚೆಮ್ನಾಡ್ ಪಂಚಾಯತ್‍ನ 37, 28 ವರ್ಷದ ನಿವಾಸಿಗಳು, ಕುವೈತ್‍ನಿಂದ ಆಗಮಿಸಿದ್ದ 30 ವರ್ಷದ ನಿವಾಸಿ, ಚೆಂಗಳ ಪಂಚಾಯತ್‍ನ 35 ವರ್ಷದ ನಿವಾಸಿ,    ಸೌದಿಯಿಂದ ಬಂದಿದ್ದ ಬಳಾಲ್ ಪಂಚಾಯತ್‍ನ 30 ವರ್ಷದ ನಿವಾಸಿ, ಖತಾರ್‍ನಿಂದ ಆಗಮಿಸಿದ್ದ ಕಾಸರಗೋಡು ನಗರಸಭೆ ವ್ಯಾಪ್ತಿಯ 52 ವರ್ಷದ ನಿವಾಸಿಗೆ ಸೋಂಕು ಖಚಿತವಾಗಿದೆ.
          ಇತರ ರಾಜ್ಯಗಳಿಂದ ಬಂದವರು : ಬೆಂಗಳೂರಿನಿಂದ ಆಗಮಿಸಿದ್ದ ಈಸ್ಟ್ ಏಳೇರಿ ಪಂಚಾಯತ್‍ನ 29 ವರ್ಷದ ನಿವಾಸಿ, ಮಹಾರಾಷ್ಟ್ರದಿಂದ ಬಂದಿದ್ದ ಕುಂಬಳೆ ಪಂಚಾಯತ್‍ನ 52 ವರ್ಷದ ನಿವಾಸಿ, ಮಂಗಳೂರಿನಿಂದ ಆಗಮಿಸಿದ್ದ ಬೆಳ್ಳೂರು ಪಂಚಾಯತ್‍ನ 35 ವರ್ಷದ ನಿವಾಸಿ ರೋಗ ಬಾಧಿತರು. 
           ಕೋವಿಡ್ ನೆಗೆಟಿವ್ ಆದವರು : ಪಡನ್ನಕ್ಕಾಡ್ ಕೋವಿಡ್ ಚಿಕಿತ್ಸಾ ಕೇಂದ್ರದಲ್ಲಿ ದಾಖಲಾಗಿದ್ದ, ನೀಲೇಶ್ವರ ನಗರಸಭೆಯ 34 ವರ್ಷದ ನಿವಾಸಿ, ಮಂಗಲ್ಪಾಡಿ ಪಂಚಾಯತ್‍ನ 52, 30 ವರ್ಷದ ನಿವಾಸಿಗಳು, ವರ್ಕಾಡಿ ಪಂಚಾಯತ್‍ನ 37 ವರ್ಷದ ನಿವಾಸಿ, ಕಾಂಞಂಗಾಡ್ ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಅಜಾನೂರು ಪಂಚಾಯತ್‍ನ 25 ವರ್ಷದ ನಿವಾಸಿ, ಕೋಡೋಂ ಬೇಳೂರು ಪಂಚಾಯತ್‍ನ 27 ವರ್ಷದ ನಿವಾಸಿ, ಅಂಜರಕಂಡಿ ಕೋವಿಡ್ ಚಿಕಿತ್ಸಾ ಕೇಂದ್ರದಲ್ಲಿ ದಾಖಲಾಗಿದ್ದ ಅಜಾನೂರು ಪಂಚಾಯತ್‍ನ 47 ವರ್ಷದ ನಿವಾಸಿ, ಕಣ್ಣೂರು ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಕುಂಬಳೆ ಪಂಚಾಯತ್‍ನ 36 ವರ್ಷದ ನಿವಾಸಿ, ಉಕ್ಕಿನಡ್ಕ ಕಾಸರಗೋಡು ಮೆಡಿಕಲ್ ಕಾಲೇಜಿನಲ್ಲಿ ದಾಖಲಾಗಿದ್ದ ಕುಂಬಳೆ ಪಂಚಾಯತ್‍ನ 28 ವರ್ಷದ ನಿವಾಸಿ, ವಲಿಯಪರಂಬ ಪಂಚಾಯತ್‍ನ 48, 23, 50 ವರ್ಷದ ನಿವಾಸಿಗಳು, ಮಂಜೇಶ್ವರ ಪಂಚಾಯತ್‍ನ 43 ವರ್ಷದ ನಿವಾಸಿ, ಉದಯಗಿರಿ ಸಿ.ಎಫ್.ಎಲ್.ಟಿ.ಸಿ.ಯಲ್ಲಿ ದಾಖಲಾಗಿದ್ದ ಬೆಳ್ಳೂರು ಪಂಚಾಯತ್‍ನ 34 ವರ್ಷದ ನಿವಾಸಿ, ಪನತ್ತಡಿ ಪಂಚಾಯತ್‍ನ 37 ವರ್ಷದ ನಿವಾಸಿ ಗುಣಮುಖರಾದವರು.
ಕಾಸರಗೋಡು ಜಿಲ್ಲೆಯಲ್ಲಿ 6670 ಮಂದಿ ನಿಗಾದಲ್ಲಿದ್ದಾರೆ. ಮನೆಗಳಲ್ಲಿ 6190 ಮಂದಿ, ಸಾಂಸ್ಥಿಕ ನಿಗಾದಲ್ಲಿ 480 ಮಂದಿ ಇದ್ದಾರೆ. ಗುರುವಾರ ನೂತನವಾಗಿ 297 ಮಂದಿ ನಿಗಾದಲ್ಲಿ  ಪ್ರವೇಶಿಸಿದ್ದಾರೆ. 455 ಮಂದಿ ಗುರುವಾರ ತಮ್ಮ ನಿಗಾ ಅವ„ ಪೂರ್ಣಗೊಳಿಸಿದ್ದಾರೆ. 317 ಮಂದಿಯ ಸ್ಯಾಂಪಲ್ ತಪಾಸಣೆಗೆ ಕಳುಹಿಸಲಾಗಿದೆ. 1001 ಮಂದಿಯ ಫಲಿತಾಂಶ ಇನ್ನೂ ಲಭಿಸಿಲ್ಲ.
                        ಕೇರಳದಲ್ಲಿ 339 ಮಂದಿಗೆ ಸೋಂಕು :
      ಕೇರಳ ರಾಜ್ಯದಲ್ಲಿ ಗುರುವಾರ 339 ಮಂದಿಗೆ ಕೊರೊನಾ ವೈರಸ್ ಸೋಂಕು ದೃಢಗೊಂಡಿದೆ. ಇದೇ ವೇಳೆ 149 ಮಂದಿ ಗುಣಮುಖ ರಾಗಿದ್ದಾರೆಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದ್ದಾರೆ. ವಿದೇಶದಿಂದ ಬಂದ 117, ಇತರ ರಾಜ್ಯಗಳಿಂದ ಬಂದ 74 ಮಂದಿಗೆ ಹಾಗು ಸಂಪರ್ಕದಿಂದ 133 ಮಂದಿಗೆ ರೋಗ ಬಾಧಿಸಿದೆ. 7 ಮಂದಿಗೆ ರೋಗಕ್ಕೆ ಕಾರಣ ಕಂಡುಕೊಳ್ಳಲು ಸಾಧ್ಯವಾಗಿಲ್ಲ.
         ತಿರುವನಂತಪುರ-95, ಮಲಪ್ಪುರ-55, ಪಾಲ್ಘಾಟ್-50, ತೃಶ್ಶೂರು-27, ಆಲಪ್ಪುಳ-22, ಇಡುಕ್ಕಿ-20, ಎರ್ನಾಕುಳಂ-12, ಕಾಸರಗೋಡು-11, ಕೊಲ್ಲಂ-10, ಕಲ್ಲಿಕೋಟೆ-8, ಕೋಟ್ಟಯಂ-7, ವಯನಾಡು-7, ಪತ್ತನಂತಿಟ್ಟ-7, ಕಣ್ಣೂರು-8 ಎಂಬಂತೆ ರೋಗ ಬಾಧಿಸಿದೆ.
         ತಿರುವನಂತಪುರ-9, ಕೊಲ್ಲಂ-10, ಪತ್ತನಂತಿಟ್ಟ-7, ಆಲಪ್ಪುಳ-7, ಕೋಟ್ಟಯಂ-8, ಇಡುಕ್ಕಿ-8, ಕಣ್ಣೂರು-16, ಎರ್ನಾಕುಳಂ-15, ತೃಶ್ಶೂರು-29, ಪಾಲ್ಘಾಟ್-17, ಮಲಪ್ಪುರಂ-6, ಕಲ್ಲಿಕೋಟೆ-1, ವಯನಾಡು-3, ಕಾಸರಗೊಡು-13 ಎಂಬಂತೆ ರೋಗ ಮುಕ್ತರಾಗಿದ್ದಾರೆ. ಕೇರಳದಲ್ಲಿ ಇದು ವರೆಗೆ 6534 ಮಂದಿಗೆ ರೋಗ ಬಾಧಿಸಿದ್ದು, ಪ್ರಸ್ತುತ 2795 ಚಿಕಿತ್ಸೆ ಪಡೆಯುತ್ತಿದ್ದಾರೆ. 
                 ಲಾಕ್‍ಡೌನ್ ಉಲ್ಲಂಘನೆ : 9 ಕೇಸುಗಳು : ಲಾಕ್‍ಡೌನ್  ಉಲ್ಲಂಘಿಸಿದ ಆರೋಪದಲ್ಲಿ ಕಾಸರಗೋಡು ಜಿಲ್ಲೆಯಲ್ಲಿ 9 ಕೇಸುಗಳನ್ನು ದಾಖಲಿಸಲಾಗಿದೆ. 12 ಮಂದಿಯನ್ನು ಬಂಧಿಸಲಾಗಿದ್ದು, ಒಂದು ವಾಹನವನ್ನು ವಶಪಡಿಸಲಾಗಿದೆ. ಮಂಜೇಶ್ವರ ಠಾಣೆಯಲ್ಲಿ 1 ಕೇಸು, ವಿದ್ಯಾನಗರ 1, ಆದೂರು 1, ಬೇಕಲ 1, ಅಂಬಲತ್ತರ 1, ಹೊಸದುರ್ಗ 2, ಚಂದೇರ 1, ರಾಜಪುರಂ 1 ಕೇಸು ದಾಖಲಿಸಲಾಗಿದೆ.
      ಈ ಮೂಲಕ ಈ ಪ್ರಕರಣಗಳಿಗೆ ಸಂಬಂಧಿಸಿ ಕಾಸರಗೋಡು ಜಿಲ್ಲೆಯಲ್ಲಿ ದಾಖಲಾದ ಕೇಸುಗಳ ಸಂಖ್ಯೆ 2993 ಆಗಿದೆ. 3912 ಮಂದಿಯನ್ನು ಬಂಧಿಸಲಾಗಿದ್ದು, 1244 ವಾಹನಗಳನ್ನು ವಶಪಡಿಸಲಾಗಿದೆ.
         ಮಾಸ್ಕ್ ಧರಿಸದ 208 ಮಂದಿ ವಿರುದ್ಧ ಕೇಸು : ಮಾಸ್ಕ್ ಧರಿಸದೇ ಇದ್ದ ಆರೋಪದಲ್ಲಿ ಕಾಸರಗೋಡು ಜಿಲ್ಲೆಯಲ್ಲಿ 208 ಮಂದಿ ವಿರುದ್ಧ ಕೇಸು ದಾಖಲಿಸಲಾಗಿದೆ. ಈ ಪ್ರಕರಣಗಳಿಗೆ ಸಂಬಂಧಿಸಿ ಈ ವರೆಗೆ ಕಾಸರಗೋಡು ಜಿಲ್ಲೆಯಲ್ಲಿ ದಾಖಲಾದ ಕೇಸುಗಳ ಸಂಖ್ಯೆ 11616 ಏರಿಕೆಯಾಗಿದೆ. 
               ಮೃತ ವ್ಯಕ್ತಿಗೆ ಪಾಸಿಟಿವ್ ದೃಢ : ಮೊಗ್ರಾಲ್‍ಪುತ್ತೂರು ಕೋಟ್ಟಕುನ್ನು ನಿವಾಸಿ ಬಿ.ಎಂ.ಅಬ್ದುಲ್ ರಹಿಮಾನ್(55) ಅವರ ಸಾವು ಕೊರೊನಾದಿಂದಾಗಿದೆ ಎಂದು ದೃಢೀಕರಿಸಲಾಗಿದ್ದರೂ, ಕಾಸರಗೋಡಿನ ಯಾದಿಯಲ್ಲಿ ಅವರನ್ನು ಸೇರ್ಪಡೆ ಕೂಡದು ಎಂದು ಆರೋಗ್ಯ ಇಲಾಖೆ ಅಭಿಪ್ರಾಯಪಟ್ಟಿದೆ.
        ಕರ್ನಾಟಕದ ಹುಬ್ಬಳ್ಳಿಯಲ್ಲಿ ವ್ಯಾಪಾರಿಯಾಗಿದ್ದ ಅವರು ಹೃದಯ ಸಂಬಂಧವಾದ ರೋಗದಿಂದ ಬಳಲುತ್ತಿದ್ದರು. ಹುಬ್ಬಳ್ಳಿಯಲ್ಲಿ ಜ್ವರ ಬಂದುದರಿಂದ ಅವರನ್ನು ಕಾರಿನಲ್ಲಿ ಜು.6 ರಂದು ಕಾಸರಗೋಡಿಗೆ ಕರೆ ತರಲಾಗಿತ್ತು. ಜು.7 ರಂದು ಮುಂಜಾನೆ 3.30 ಕ್ಕೆ ತಲಪಾಡಿ ಚೆಕ್‍ಪೆÇೀಸ್ಟ್‍ಗೆ ತಲುಪಿದ್ದರು. ಅಲ್ಲಿಂದ ಇನ್ನೊಂದು ಕಾರಿನಲ್ಲಿ ಊರಿಗೆ ಬರುತ್ತಿದ್ದಂತೆ ರಸ್ತೆ ಮಧ್ಯೆ ಜ್ವರ ಉಲ್ಬಣಗೊಂಡಿತು. ಇದರಿಂದಾಗಿ ಅವರನ್ನು ಜನರಲ್ ಆಸ್ಪತ್ರೆಗೆ ತರುತ್ತಿದ್ದಂತೆ ಸಾವು ಸಂಭವಿಸಿತ್ತು.
        ಜನರಲ್ ಆಸ್ಪತ್ರೆಯಲ್ಲಿ ನಡೆಸಿದ ಟ್ರೂನಾಟ್ ಟೆಸ್ಟ್‍ನಲ್ಲಿ ಕೋವಿಡ್ ದೃಢಗೊಂಡಿತ್ತು. ಆ ಬಳಿಕ ಮತ್ತೆ ಗಂಟಲ ದ್ರವ ತೆಗೆದು ಪೆರಿಯ ಕೇಂದ್ರೀಯ ವಿಶ್ವವಿದ್ಯಾಲಯದ ಲ್ಯಾಬ್‍ನಲ್ಲಿ ನಡೆಸಿದ ಪರೀಕ್ಷೆಯಲ್ಲೂ ಪಾಸಿಟಿವ್ ಆಗಿತ್ತು. ಮೃತರು ಕಾಸರಗೋಡಿನಲ್ಲಿ ಚಿಕಿತ್ಸೆ ಪಡೆಯದಿರುವುದರಿಂದ ಅವರನ್ನು ಇಲ್ಲಿನ ಯಾದಿಯಲ್ಲಿ ಸೇರ್ಪಡೆಗೊಳಿಸಿಲ್ಲ.

                 
                             

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries