ಕಾಸರಗೋಡು: ಜಿಲ್ಲೆಯ ಮೊದಲ ಕೋವಿಡ್ ಮೃತ ವ್ಯಕ್ತಿಯಾದ ಮೊಗ್ರಾಲ್‍ಪುತ್ತೂರು ಕೋಟ್ಟಕುನ್ನು ನಿವಾಸಿ ಬಿ.ಎಂ.ಅಬ್ದುಲ್ ರಹಿಮಾನ್(55) ಅವರ ಸಾವು ಕೊರೊನಾದಿಂದಾಗಿದೆ ಎಂದು ದೃಢೀಕರಿಸಲಾಗಿದ್ದರೂ, ಕಾಸರಗೋಡಿನ ಯಾದಿಯಲ್ಲಿ ಅವರನ್ನು ಸೇರ್ಪಡೆ ಕೂಡದು ಎಂದು ಆರೋಗ್ಯ ಇಲಾಖೆ ಅಭಿಪ್ರಾಯಪಟ್ಟಿದೆ.
ಕರ್ನಾಟಕದ ಹುಬ್ಬಳ್ಳಿಯಲ್ಲಿ ವ್ಯಾಪಾರಿಯಾಗಿದ್ದ ಅವರು ಹೃದಯ ಸಂಬಂಧವಾದ ರೋಗದಿಂದ ಬಳಲುತ್ತಿದ್ದರು. ಹುಬ್ಬಳ್ಳಿಯಲ್ಲಿ ಜ್ವರ ಬಂದುದರಿಂದ ಅವರನ್ನು ಕಾರಿನಲ್ಲಿ ಜು.6 ರಂದು ಕಾಸರಗೋಡಿಗೆ ಕರೆ ತರಲಾಗಿತ್ತು. ಜು.7 ರಂದು ಮುಂಜಾನೆ 3.30 ಕ್ಕೆ ತಲಪಾಡಿ ಚೆಕ್‍ಪೆÇೀಸ್ಟ್‍ಗೆ ತಲುಪಿದ್ದರು. ಅಲ್ಲಿಂದ ಇನ್ನೊಂದು ಕಾರಿನಲ್ಲಿ ಊರಿಗೆ ಬರುತ್ತಿದ್ದಂತೆ ರಸ್ತೆ ಮಧ್ಯೆ ಜ್ವರ ಉಲ್ಬಣಗೊಂಡಿತು. ಇದರಿಂದಾಗಿ ಅವರನ್ನು ಜನರಲ್ ಆಸ್ಪತ್ರೆಗೆ ತರುತ್ತಿದ್ದಂತೆ ಸಾವು ಸಂಭವಿಸಿತ್ತು.
ಜನರಲ್ ಆಸ್ಪತ್ರೆಯಲ್ಲಿ ನಡೆಸಿದ ಟ್ರೂನಾಟ್ ಟೆಸ್ಟ್‍ನಲ್ಲಿ ಕೋವಿಡ್ ದೃಢಗೊಂಡಿತ್ತು. ಆ ಬಳಿಕ ಮತ್ತೆ ಗಂಟಲ ದ್ರವ ತೆಗೆದು ಪೆರಿಯ ಕೇಂದ್ರೀಯ ವಿಶ್ವವಿದ್ಯಾಲಯದ ಲ್ಯಾಬ್‍ನಲ್ಲಿ ನಡೆಸಿದ ಪರೀಕ್ಷೆಯಲ್ಲೂ ಪಾಸಿಟಿವ್ ಆಗಿತ್ತು. ಮೃತರು ಕಾಸರಗೋಡಿನಲ್ಲಿ ಚಿಕಿತ್ಸೆ ಪಡೆಯದಿರುವುದರಿಂದ ಅವರನ್ನು ಇಲ್ಲಿನ ಯಾದಿಯಲ್ಲಿ ಸೇರ್ಪಡೆಗೊಳಿಸಿಲ್ಲ.


