ತಿರುವನಂತಪುರ: ಮಹಾ ಮಾರಿ ಕೊರೊನಾ ಶುಕ್ರವಾರ ರಾಜ್ಯದಲ್ಲಿ ಮಹಾಘಾತದ ಮಾರುತ ಸೃಷ್ಟಿದೆ. ಕೇರಳದಲ್ಲಿ ಇಂದು 211 ಹೊಸ ಸೋಂಕಿತರನ್ನು ಪತ್ತೆಹಚ್ಚಲಾಗಿದೆ. ಈ ಪೈಕಿ 27 ಮಂದಿಗೆ ಸಂಪರ್ಕ ಮೂಲದಿಂದ ರೋಗ ಹರಡಿರುವುಉದ ಆತಂಕ ಮೂಡಿದೆ. 138 ಮಂದಿ ವಿದೇಶದಿಂದ ಬಂದವರಾಗಿದ್ದರೆ, ಇತರ ರಾಜ್ಯಗಳಿಂದ ಬಂದ 39 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದ್ದಾರೆ.
ಹೆಚ್ಚಿನ ವಿವರಗಳು:ಜಿಲ್ಲಾವಾರು ಮಾಹಿತಿ:
ಮಲಪ್ಪುರಂ 35, ಕೊಲ್ಲಂ 23, ಆಲಪ್ಪುಳ 21, ತ್ರಿಶೂರ್ 21, ಕಣ್ಣೂರು 18, ಎರ್ನಾಕುಲಂ 17, ತಿರುವನಂತಪುರಂ 17, ಪಾಲಕ್ಕಾಡ್ 14, ಕೊಟ್ಟಾಯಂ 14, ಕೋಝಿಕ್ಕೋಡ್ 14, ಕಾಸರಗೋಡು 7, ಪತ್ತನಂತಿಟ್ಟು 7, ಇಡುಕಿ 2, ವಯನಾಡ್ 1 ಮಂದಿಗಳಿಗೆ ವೈರಸ್ ಬಾಧಿಸಿರುವುದು ದೃಢಪಟ್ಟಿದೆ.
ಗುಣಮುಖರಾದವರ ವಿವರ:
ಇಂದು ಒಟ್ಟು 201 ಬಾಧಿತರು ರೋಗಮುಕ್ತರಾಗಿರುವರು. ತಿರುವನಂತಪುರಂ 5, ಪತ್ತನಂತಿಟ್ಟು 29, ಆಲಪ್ಪುಳ 2, ಕೊಟ್ಟಾಯಂ 16, ಎರ್ನಾಕುಲಂ 20, ತ್ರಿಶೂರ್ 5, ಪಾಲಕ್ಕಾಡ್ 68, ಮಲಪ್ಪುರಂ 10, ಕೋಝಿಕ್ಕೋಡ್ 11, ವಯನಾಡ್ 10, ಕಣ್ಣೂರು 13 ಮತ್ತು ಕಾಸರಗೋಡು 12 ಮಂದಿಗಳು ರೋಗಮುಕ್ತರಾದರು. ಆದರೆ ರೋಗದ ಪ್ರಮಾಣ ಹೆಚ್ಚಾಗಿದೆ ಎಂದು ಸಿಎಂ ಹೇಳಿದರು. ನಗರಗಳು ಮತ್ತು ಇತರ ಪ್ರದೇಶಗಳಲ್ಲಿ ರೋಗಿಗಳ ಸಂಖ್ಯೆ ಹೆಚ್ಚುತ್ತಿದೆ. ಕ್ವಾರಂಟೈನ್ ನಲ್ಲಿರುವವರ ವಿರುದ್ಧ ಯಾವುದೇ ತಾರತಮ್ಯ ಮಾಡಬಾರದು ಎಂದರು.
ರಾಜ್ಯದಲ್ಲಿ ಹಾಟ್ ಸ್ಪಾಟ್ಸ್:
ರೋಗಿಗಳ ಸಂಖ್ಯೆ ಹೆಚ್ಚುತ್ತಿರುವ ಕಾರಣ ರಾಜ್ಯದಲ್ಲಿ ಹಾಟ್ ಸ್ಪಾಟ್‍ಗಳು ಹೆಚ್ಚಿಸಲಾಗಿದೆ. 130 ಹಾಟ್ ಸ್ಪಾಟ್‍ಗಳಿವೆ. ತಿರುವನಂತಪುರಂ ಮತ್ತು ಎರ್ನಾಕುಲಂ ಜಿಲ್ಲೆಗಳು ತೀವ್ರ ಪರಿಶೀಲನೆಗೆ ಒಳಗಾಗುತ್ತಿವೆ. ಟ್ರಿಪಲ್ ಲಾಕ್ ಡೌನ್ ಮುಂದುವರಿದ ಮಧ್ಯಂತರದಲ್ಲಿ ಕ್ವಾರಂಟೈನ್ ಬಿಗಿಗೊಳಿಸಲಾಯಿತು. ಪೆÇಲೀಸ್ ನಿಯಂತ್ರಣ ಬಲಗೊಳಿಸಲಾಗಿದೆ. ತಿರುವನಂತಪುರಂ, ಎರ್ನಾಕುಲಂ ನಗರಗಳು ಮತ್ತು ಮಲಪ್ಪುರಂ ಪೆÇನ್ನಾನಿ ತಾಲ್ಲೂಕುಗಳ ಸ್ಥಿತಿ ಗಂಭೀರವಾಗಿದೆ. ಹದಿನಾಲ್ಕು ಜಿಲ್ಲೆಗಳಲ್ಲೂ ರೋಗ ಭೀತಿ ಇನ್ನಷ್ಟು ಇದೆ. ನಗರಗಳು ಮತ್ತು ಹಳ್ಳಿಗಳಲ್ಲಿ ಸೊಳ್ಳೆಗಳಿಂದ ಇತರ ಸಾಂಕ್ರಾಮಿಕ ರೋಗಗಳೂ ಹರಡುತ್ತಿರುವುದು ಕಳವಳ ಮೂಡಿದೆ ಎಂದು ಪಿಣರಾಯಿ ವಿಜಯನ್ ತಿಳಿಸಿರುವರು.
ತಿರುವನಂತಪುರಂ ಜಿಲ್ಲಾ ವಿಜಿಲೆನ್ಸ್:
ಯಾವುದೇ ರೋಗ ಬಾಧಿತರೊಂದಿಗೆ ಸಂಪರ್ಕ ಹೊಂದದೆಯೂ ಸಂಪರ್ಕ ಇಲ್ಲದವರಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ, ರಾಜಧಾನಿ ಮತ್ತೆ ನಿಯಂತ್ರಣಕ್ಕೆ ವಿಧೇಯಗೊಳಿಸಲಾಗಿದೆ. ತಿರುವನಂತಪುರಂ ಜಿಲ್ಲೆಯಲ್ಲಿ ಜಾಗರೂಕತೆ ಇನ್ನಷ್ಟು ಬಿಗಿಯಾಗಿರಬೇಕು ಎಂದು ಸಚಿವ ಕಡನಂಪಳ್ಳಿ ಸುರೇಂದ್ರನ್ ಹೇಳಿದರು. ಅವಶ್ಯಕತೆಗಾಗಿ ಮಾತ್ರ ಜನರು ಮನೆಯಿಂದ ಹೊರಬಂದರೆ ಸಾಕು ಎಂದು ಸಚಿವರು ಎಚ್ಚರಿಸಿದರು. ನಗರ ಅಥವಾ ಜಿಲ್ಲೆಯನ್ನು ಸಂಪೂರ್ಣವಾಗಿ ಮುಚ್ಚುವ ಪರಿಸ್ಥಿತಿ ಇಲ್ಲ ಎಂದು ಸಚಿವರು ಹೇಳಿದರು. ಕೋವಿಡ್ ಸಂತ್ರಸ್ತರ ಸಂಖ್ಯೆ ಹೆಚ್ಚುತ್ತಿರುವ ಕಾರಣ ಜಿಲ್ಲೆಯನ್ನು ಮುಚ್ಚಬಹುದು ಎಂಬ ವರದಿಗಳಿಗೆ ಸಚಿವರು ಪ್ರತಿಕ್ರಿಯಿಸುತ್ತಿದ್ದರು.
ಪೆÇಲೀಸ್ ಅಧಿಕಾರಿಗೆ ಕೋವಿಡ್ ದೃಢ!
ತಿರುವನಂತಪುರಂನ ಠಾಣೆಯೊಂದರ ಪೆÇಲೀಸ್ ಅಧಿಕಾರಿಗೆ ಕೋವಿಡ್ ದೃಢಪಡಿಸಲಾಗಿದೆ. ನಂದವನಂ ಎಆರ್ ಶಿಬಿರದ ಅಧಿಕಾರಿಯೊಬ್ಬರಲ್ಲಿ ಸೋಂಕು ನಿಖರಗೊಂಡಿದೆ. ಆದರೆ ಸೋಂಕಿನ ಮೂಲ ಪತ್ತೆಯಾಗುತ್ತಿಲ್ಲ. ಜು.28 ರಂದು ರೋಗಲಕ್ಷಣಗಳನ್ನು ಗಮನಿಸಿ ಅಧಿಕಾರಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವನೊಂದಿಗೆ ಸಂಪರ್ಕಕ್ಕೆ ಬಂದವರನ್ನು ಪರೀಕ್ಷಿಸಿ ಬಿಡುಗಡೆಮಾಡಲಾಗಿದೆ. ಪೆÇಲೀಸ್ ಅಧಿಕಾರಿಯ ಸಂಪರ್ಕಗಳ ಪಟ್ಟಿಯನ್ನು ಪ್ರಸ್ತುತ ಸಿದ್ಧಪಡಿಸಲಾಗುತ್ತಿದೆ.
ಅತೀ ಎಚ್ಚರಿಕೆಯಲ್ಲಿ ಎರ್ನಾಕುಲಂ ಜಿಲ್ಲೆ:
ಎರ್ನಾಕುಲಂ ಜಿಲ್ಲೆಯಲ್ಲಿ ಗುರುತಿಸಲಾಗದ ಮೂಲಗಳಿಂದ ಹರಡಿರುವ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದು ನಿಯಂತ್ರಣಗಳನ್ನು ಬಿಗಿಗೊಳಿಸಲಾಗುತ್ತಿದೆ. ಚೆಲ್ಲಾನಂ ಮೂಲದ ಅರವತ್ತಾರು ವರ್ಷದ ಮಹಿಳೆಯನ್ನು ನ್ಯುಮೋನಿಯಾದಿಂದ ಎರ್ನಾಕುಳಂ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರು ಚಿಕಿತ್ಸೆ ಪಡೆಯುತ್ತಿರುವ ಎರ್ನಾಕುಳಂ ಜಿಲ್ಲಾ ಆಸ್ಪತ್ರೆಗೆ ವೈದ್ಯರು ಸೇರಿದಂತೆ 72 ಆರೋಗ್ಯ ಕಾರ್ಯಕರ್ತರನ್ನು ಪ್ರಸ್ತುತ ಕ್ವಾರಂಟೈನ್ ಗೆ ಒಳಪಡಿಸಲಾಗಿದೆ. ಕೋವಿಡ್ ರೋಗದ ಮೂಲವನ್ನು ತಿಳಿಯದೆ ಸೋಂಕು ಬಾಧಿತರು ಏರಿಕೆಯಾಗುತ್ತಿರುವ ತಿರುವನಂತಪುರಂನಲ್ಲೂ ಕಟ್ಟೆಚ್ಚರ ವಹಿಸಲಾಗಿದೆ. ಸಾಮಾಜಿಕ ಹರಡುವಿಕೆಯನ್ನು ತಡೆಗಟ್ಟಲು ಹೆಚ್ಚಿನ ಪ್ರದೇಶಗಳನ್ನು ಮುಚ್ಚಲು ಸರ್ಕಾರ ನಿರ್ಧರಿಸಿದೆ.
ರಾಜ್ಯದ ಕೋವಿಡ್ ಒಟ್ಟು ನಿರ್ವಹಣೆ ಹೀಗಿದೆ:
ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಮಧ್ಯೆ ರಾಜ್ಯದಲ್ಲಿ ಕಳವಳಗಳ ತಾರಕಕ್ಕೇರಿದೆ. ಕೋವಿಡ್ ಚಿಕಿತ್ಸೆ, ಸಂಪರ್ಕದಿಂದ ಸೋಂಕು ಆರೋಗ್ಯ ಕಾರ್ಯಕರ್ತರ ಆರೋಗ್ಯ ರಕ್ಷಣೆಗೂ ಸವಾಲಾಗುತ್ತಿದೆ. ಮನೆಗಳು, ಆಸ್ಪತ್ರೆಗಳು ಮತ್ತು ಚಿಕಿತ್ಸೆ ಮತ್ತು ಕ್ವಾರಂಟೈನ್ ಗಳಲ್ಲಿ ಜನರ ಸಂಖ್ಯೆ ಹೆಚ್ಚುತ್ತಿದೆ. ವಿದೇಶದಿಂದ ಹೆಚ್ಚಿನ ಜನರು ರಾಜ್ಯಕ್ಕೆ ಬರುತ್ತಿರುವುದೂ ಭೀತಿಗೆ ಕಾರಣವಾಗುತ್ತಿದೆ. ಇನ್ನಷ್ಟು ವೈರಸ್ ಬಾಧಿತರ ಹೆಚ್ಚಳ ಸಾಧ್ಯತೆಯೂ ಇದೆ. ನಿನ್ನೆ ಕೋವಿಡ್ ಮುಕ್ತರಾದವರು ಹೆಚ್ಚಿದ್ದರು.
ದೇಶದಲ್ಲಿ ಕೋವಿಡ್ ವ್ಯಾಪಕ: m
ಅನೇಕ ರಾಜ್ಯಗಳು, ಅನ್ಲಾಕ್ ರಿಯಾಯಿತಿಗಳನ್ನು ಜಾರಿಗೆ ತರುತ್ತಿರುವುದರಿಂದ, ದೇಶದಲ್ಲಿ ಕೋವಿಡ್ ಸಾವುನೋವುಗಳ ಸಂಖ್ಯೆ ಹೆಚ್ಚುತ್ತಿದೆ. ಮರಣ ಪ್ರಮಾಣವೂ ಹೆಚ್ಚುತ್ತಿದೆ. ಈ ತಿಂಗಳ ಅಂತ್ಯದ ವೇಳೆಗೆ ಕೋವಿಡ್ ಮರಣಗಳ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆಯೆಂದು ತಜ್ಞರು ಹೇಳಿದ್ದಾರೆ. ಶುಕ್ರವಾರ ಸಂಜೆ ವೇಳೆಗೆ, ದೇಶದಲ್ಲಿ 625,544 ಕೊವಿಡ್ ಪ್ರಕರಣಗಳು ವರದಿಯಾಗಿದೆ. ದೇಶದಲ್ಲಿ ಇದುವರೆಗೆ 18,213 ಸಾವುಗಳು ಸಂಭವಿಸಿವೆ. ಮಹಾರಾಷ್ಟ್ರ, ದೆಹಲಿ, ತಮಿಳುನಾಡು, ಗುಜರಾತ್ ಮತ್ತು ಮಧ್ಯಪ್ರದೇಶದಲ್ಲಿ ಕೋವಿಡ್ ಸಾವುನೋವುಗಳ ಸಂಖ್ಯೆ ಹೆಚ್ಚುತ್ತಿದೆ.





