ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಶುಕ್ರವಾರ 7 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ. 13 ಮಂದಿಗೆ ಕೋವಿಡ್ ನೆಗೆಟಿವ್ ಆಗಿದೆ. ಪಾಸಿಟಿವ್ ಆದ ಎಲ್ಲರೂ ವಿದೇಶಗಳಿಂದ ಆಗಮಿಸಿದವರು ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು.
ದುಬಾಯಿಯಿಂದ ಆಗಮಿಸಿದ್ದ ಪಳ್ಳಿಕ್ಕರೆ ಗ್ರಾಮ ಪಂಚಾಯತ್‍ನ 60 ಮತ್ತು 25 ವರ್ಷದ ನಿವಾಸಿಗಳು, ಕುವೈತ್ ನಿಂದ ಬಂದಿದ್ದ ಕಾಂಞಂಗಾಡ್ ನಗರಸಭೆ ವ್ಯಾಪ್ತಿಯ 38 ವರ್ಷದ ನಿವಾಸಿ, ಖತಾರ್‍ನಿಂದ ಬಂದಿದ್ದ ಪುಲ್ಲೂರು-ಪೆರಿಯ ಪಂಚಾಯತ್‍ನ 27 ವರ್ಷದ ನಿವಾಸಿ, ಮಸ್ಕತ್‍ನಿಂದ ಆಗಮಿಸಿದ್ದ ಅಜಾನೂರು ಪಂಚಾಯತ್‍ನ 31 ವರ್ಷದ ನಿವಾಸಿ, ಒಮಾನ್‍ನಿಂದ ಬಂದಿದ್ದ ಚೆಮ್ನಾಡ್ ಪಂಚಾಯತ್‍ನ 55 ವರ್ಷದ ನಿವಾಸಿ, ಸೌದಿ ಅರೆಬಿಯಾದಿಂದ ಬಂದಿದ್ದ ಮಂಗಲ್ಪಾಡಿ ಪಂಚಾಯತ್‍ನ 29 ವರ್ಷದ ನಿವಾಸಿ ಇವರಿಗೆ ಕೋವಿಡ್ ಸೋಂಕು ಖಚಿತವಾಗಿದೆ.
ಉಕ್ಕಿನಡ್ಕ ಕಾಸರಗೋಡು ಮೆಡಿಕಲ್ ಕಾಲೇಜಿನಲ್ಲಿ ದಾಖಲಾಗಿದ್ದ, ಮೀಂಜ ಪಂಚಾಯತ್‍ನ 58 ವರ್ಷದ ನಿವಾಸಿ, ಮಂಗಲ್ಪಾಡಿ ಪಂಚಾಯತ್‍ನ 7 ವರ್ಷದ ಬಾಲಕ, ಕಾರಡ್ಕ ಪಂಚಾಯತ್‍ನ 39 ವರ್ಷದ ನಿವಾಸಿ, ಪಳ್ಳಿಕ್ಕರೆ ಪಂಚಾಯತ್‍ನ 38 ವರ್ಷದ ನಿವಾಸಿ, ಚೆಂಗಳ ಪಂಚಾಯತ್‍ನ 30,44 ವರ್ಷದ ನಿವಾಸಿಗಳು, ಪಡನ್ನಕ್ಕಾಡ್ ಕೋವಿಡ್ ಚಿಕಿತ್ಸಾ ಕೇಂದ್ರದಲ್ಲಿ ದಾಖಲಾಗಿದ್ದ ಅಜಾನೂರು ಪಂಚಾಯತ್‍ನ 25 ವರ್ಷದ ನಿವಾಸಿ, ನೀಲೇಶ್ವರ ನಗರಸಭೆ ವ್ಯಾಪ್ತಿಯ 42 ವರ್ಷದ ನಿವಾಸಿ, ಮಂಗಲ್ಪಾಡಿ ಪಂಚಾಯತ್‍ನ 44 ವರ್ಷದ ಮಹಿಳೆ, ಪಡನ್ನ ಪಂಚಾಯತ್‍ನ 58 ವರ್ಷದ ನಿವಾಸಿ, ವರ್ಕಾಡಿ ಪಂಚಾಯತ್‍ನ 26 ವರ್ಷದ ನಿವಾಸಿ, ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ದಾಖಲಾಗಿದ್ದ ಅಜಾನೂರು ಪಂಚಾಯತ್‍ನ 47 ವರ್ಷದ ನಿವಾಸಿ ಗುಣಮುಖರಾದವರು.
ಕಾಸರಗೋಡು ಜಿಲ್ಲೆಯಲ್ಲಿ 6901 ಮಂದಿ ನಿಗಾದಲ್ಲಿದ್ದಾರೆ. ಮನೆಗಳಲ್ಲಿ 6556, ಸಾಂಸ್ಥಿಕ ನಿಗಾದಲ್ಲಿ 345 ಮಂದಿ ಇದ್ದಾರೆ. ನೂತನವಾಗಿ 335 ಮಂದಿ ನಿಗಾದಲ್ಲಿ ದಾಖಲಾಗಿದ್ದಾರೆ. 292 ಮಂದಿಯ ಸ್ಯಾಂಪಲ್ ತಪಾಸಣೆಗೆ ಕಳುಹಿಸಲಾಗಿದೆ. 526 ಮಂದಿಯ ಫಲಿತಾಂಶ ಲಭಿಸಲು ಬಾಕಿಯಿದೆ. 531 ಮಂದಿ ಶುಕ್ರವಾರ ತಮ್ಮ ನಿಗಾ ಅವಧಿಪೂರ್ಣಗೊಳಿಸಿದ್ದಾರೆ.
ಮಾಸ್ಕ್ ಧರಿಸದ 183 ಮಂದಿ ವಿರುದ್ಧ ಕೇಸು : ಮಾಸ್ಕ್ ಧರಿಸದೇ ಇದ್ದ ಆರೋಪದಲ್ಲಿ ಕಾಸರಗೋಡು ಜಿಲ್ಲೆಯಲ್ಲಿ 183 ಕೇಸುಗಳನ್ನು ದಾಖಲಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ಜಿಲ್ಲೆಯಲ್ಲಿ ಈ ವರೆಗೆ ಒಟ್ಟು 10260 ಕೇಸುಗಳನ್ನು ದಾಖಲಿಸಲಾಗಿದೆ.
ಲಾಕ್‍ಡೌನ್ ಉಲ್ಲಂಘನೆ : 13 ಕೇಸು ದಾಖಲು : ಲಾಕ್‍ಡೌನ್ ಆದೇಶ ಉಲ್ಲಂಘಿಸಿದ ಆರೋಪದಲ್ಲಿ ಕಾಸರಗೋಡು ಜಿಲ್ಲೆಯಲ್ಲಿ 13 ಕೇಸುಗಳನ್ನು ದಾಖಲಿಸಲಾಗಿದೆ. 17 ಮಂದಿಯನ್ನು ಬಂ„ಸಲಾಗಿದ್ದು, 3 ವಾಹನಗಳನ್ನು ವಶಪಡಿಸಲಾಗಿದೆ. ಮಂಜೇಶ್ವರ ಪೆÇಲೀಸ್ ಠಾಣೆಯಲ್ಲಿ 1 ಕೇಸು, ಕಾಸರಗೋಡು 1, ವಿದ್ಯಾನಗರ 1, ಆದೂರು 1, ಬದಿಯಡ್ಕ 1, ಮೇಲ್ಪರಂಬ 2, ಬೇಕಲ 1, ಅಂಬಲತ್ತರ 1, ವೆಳ್ಳರಿಕುಂಡ್ 1, ಚಿತ್ತಾರಿಕಲ್ 2, ರಾಜಪುರಂ 1 ಕೇಸುಗಳು ದಾಖಲಾಗಿವೆ. ಈ ಪ್ರಕರಣಗಳಿಗೆ ಸಂಬಂಧಿಸಿ ಕಾಸರಗೋಡು ಜಿಲ್ಲೆಯಲ್ಲಿ ಈ ವರೆಗೆ ದಾಖಲಿಸಿದ ಕೇಸುಗಳ ಸಂಖ್ಯೆ 2912 ಆಗಿದೆ. 3756 ಮಂದಿಯನ್ನು ಬಂಧಿಸಲಾಗಿದ್ದು, 1201 ವಾಹನಗಳನ್ನು ವಶಪಡಿಸಲಾಗಿದೆ.
ಕ್ವಾರಂಟೈನ್ ನಲ್ಲಿದ್ದ ಯುವಕನಿಗೆ ಕೋವಿಡ್ ಬಾಧಿಸಿಲ್ಲ : ಕ್ವಾರಂಟೈನ್‍ನಲ್ಲಿದ್ದಾಗ ಕಾಸರಗೋಡಿನ ವಸತಿ ಗೃಹವೊಂದರಲ್ಲಿ ಸಾವಿಗೀಡಾದ ಉತ್ತರ ಪ್ರದೇಶ ನಿವಾಸಿ ಬಂಟಿ(25)ಗೆ ಕೋವಿಡ್ ರೋಗ ಬಾ„ಸಿಲ್ಲ ಎಂದು ಖಚಿತಗೊಂಡಿದೆ. ಸಾವಿಗೀಡಾದ ಬಂಟಿಯ ಗಂಟಲ ದ್ರವ ಪರೀಕ್ಷೆಯಲ್ಲಿ ತಿಳಿದು ಬಂದಿದೆ.






