ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಭಾನುವಾರ 28 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ. ಇವರಲ್ಲಿ 10 ಮಂದಿ ವಿದೇಶಗಳಿಂದ, 11 ಮಂದಿ ಇತರ ರಾಜ್ಯಗಳಿಂದ ಆಗಮಿಗಿಸಿದವರು ಎಂದು ಜಿಲ್ಲಾ ವೈದ್ಯಾಧಿಕಾರಿ ಎ.ವಿ.ರಾಮದಾಸ್ ತಿಳಿಸಿದರು.
ಇತರ ರಾಜ್ಯಗಳಿಂದ ಬಂದವರು : ಮಹಾರಾಷ್ಟ್ರದಿಂದ ಆಗಮಿಸಿದ್ದ ಮಂಗಲ್ಪಾಡಿ ಪಂಚಾಯತ್‍ನ 51 ವರ್ಷದ ನಿವಾಸಿ, ಎಣ್ಮಕಜೆ ಪಂಚಾಯತ್‍ನ 36 ವರ್ಷದ ಕಾಟುಕುಕ್ಕೆ ನಿವಾಸಿ, ಬೆಂಗಳೂರಿನಿಂದ ಆಗಮಿಸಿದ್ದ ಮೊಗ್ರಾಲ್ ಪುತ್ತೂರು ಪಂಚಾಯತ್‍ನ 47 ವರ್ಷದ ನಿವಾಸಿ, ಮಂಜೇಶ್ವರ ಪಂಚಾಯತ್‍ನ 43 ಮತ್ತು 42 ವರ್ಷದ ನಿವಾಸಿಗಳು, ಮಂಗಳೂರಿನಿಂದ ಬಂದಿದ್ದ ಮೀಂಜ ಪಂಚಾಯತ್ ನ 41 ವರ್ಷದ ನಿವಾಸಿ, ಮಧೂರು ಪಂಚಾಯತ್‍ನ 40 ವರ್ಷದ ನಿವಾಸಿ, ಕಾಸರಗೋಡು ನಗರಸಭೆ ವ್ಯಾಪ್ತಿಯ 53 ವರ್ಷದ ನಿವಾಸಿ, ಮುಳಿಯಾರು ಪಂಚಾಯತ್‍ನ 30 ಮತ್ತು 35 ವರ್ಷದ ನಿವಾಸಿ ಸಹೋದರರು, ಮಂಜೇಶ್ವರ ಪಂಚಾಯತ್‍ನ 47 ವರ್ಷದ ನಿವಾಸಿ, ಎರ್ನಾಕುಲಂನಿಂದ ಆಗಮಿಸಿದ್ದ ಕುಂಬಳೆ ಪಂಚಾಯತ್‍ನ 24 ವರ್ಷದ ನಿವಾಸಿಗೆ ಸೋಂಕು ಖಚಿತಗೊಂಡಿದೆ. ಟ್ಯಾಕ್ಸಿ ಚಾಲಕ 24 ವರ್ಷದ ಕುಂಬಳೆ ಪಂಚಾಯತ್ ನಿವಾಸಿ, ಸಾಮಾಜಿಕ ಅಡುಗೆ ಕೋಣೆಯಲ್ಲಿ ದುಡಿದಿದ್ದ 47 ವರ್ಷದ ಮಂಜೇಶ್ವರ ಪಂಚಾಯತ್ ನಿವಾಸಿ ಮಹಿಳೆ, 44 ವರ್ಷದ ಮೀಂಜ ಪಂಚಾಯತ್ ನಿವಾಸಿ ಮಹಿಳೆಗೆ ಸಂಪರ್ಕದಿಂದ ಸೋಂಕು ತಗಲಿದೆ.
ವಿದೇಶಗಳಿಂದ ಆಗಮಿಸಿದವರು : ಶಾರ್ಜಾದಿಂದ ಬಂದಿದ್ದ ಅಜಾನೂರು ಪಂಚಾಯತ್‍ನ 64 ವರ್ಷದ ನಿವಾಸಿ, ಪುಲ್ಲೂರು-ಪೆರಿಯ ಪಂಚಾಯತ್‍ನ 39 ವರ್ಷದ ನಿವಾಸಿ, ದುಬಾಯಿಯಿಂದ ಆಗಮಿಸಿದ್ದ ಅಜಾನೂರು ಪಂಚಾಯತ್‍ನ 39 ವರ್ಷದ ನಿವಾಸಿ, ಮಂಗಲ್ಪಾಡಿ ಪಂಚಾಯತ್‍ನ 23 ವರ್ಷದ ನಿವಾಸಿ, ಕುಂಬಳೆ ಪಂಚಾಯತ್‍ನ 33 ವರ್ಷದ ನಿವಾಸಿ, ಕುವೈತ್ ನಿಂದ ಬಂದಿದ್ದ ಪಳ್ಳಿಕ್ಕರೆ ನಿವಾಸಿ 64 ವರ್ಷದ ನಿವಾಸಿ, ಖತಾರ್ ನಿಂದ ಆಗಮಿಸಿದ್ದ ಮಂಗಲ್ಪಾಡಿ ಪಂಚಾಯತ್‍ನ 43 ವರ್ಷದ ನಿವಾಸಿಗಳಿಗೆ ಸೋಂಕು ಪಾಸಿಟಿವ್ ಆಗಿದೆ.
ಸಂಪರ್ಕದಿಂದ ಸೋಂಕು ತಗುಲಿದವರು : ಸಂಪರ್ಕದಿಂದ ವರ್ಕಾಡಿ ಪಂಚಾಯತ್‍ನ 13 ವರ್ಷದ ಬಾಲಕನಿಗೆ, ಮಂಜೇಶ್ವರ ಪಂಚಾಯತ್‍ನ 21 ವರ್ಷದ ಮಹಿಳೆಗೆ, ವರ್ಕಾಡಿ ಪಂಚಾಯತ್ ನ 21 ವರ್ಷದ ಮಹಿಳೆ, ಪೈವಳಿಕೆ ಪಂಚಾಯತ್‍ನ 26 ವರ್ಷದ ಮಹಿಳೆಗೆ ಸೋಂಕು ತಗುಲಿದೆ. ಕಾಸರಗೋಡು ಜಿಲ್ಲೆಯಲ್ಲಿ 7230 ಮಂದಿ ನಿಗಾದಲ್ಲಿದ್ದಾರೆ. ಮನೆಗಳಲ್ಲಿ 6902 ಮಂದಿ, ಸಾಂಸ್ಥಿಕ ನಿಗಾದಲ್ಲಿ 328 ಮಂದಿ ಇದ್ದಾರೆ. ನೂತನವಾಗಿ ರವಿವಾರ 736 ಮಂದಿ ನಿಗಾದಲ್ಲಿ ದಾಖಲಾಗಿದ್ದಾರೆ. 326 ಮಂದಿ ತಮ್ಮನಿಗಾ ಅವ„ ಪೂರ್ಣಗೊಳಿಸಿದ್ದಾರೆ. 13808 ಮಂದಿಯ ಸ್ಯಾಂಪಲ್ ತಪಾಸಣೆಗೆ ಕಳುಹಿಸಲಾಗಿದೆ. ರವಿವಾರ 345 ಮಂದಿಯ ಸ್ಯಾಂಪಲ್ ತಪಾಸಣೆಗೆ ಕಳುಹಿಸಲಾಗಿದೆ.
ಕೇರಳದಲ್ಲಿ 225 ಮಂದಿಗೆ ಸೋಂಕು :
ರಾಜ್ಯದಲ್ಲಿ ಭಾನುವಾರ 225 ಮಂದಿಗೆ ಕೊರೊನಾ ವೈರಸ್ ಸೋಂಕು ದೃಢಗೊಂಡಿದೆ ಎಂದು ಆರೋಗ್ಯ ಸಚಿವೆ ಕೆ.ಕೆ.ಶೈಲಜ ಅವರು ತಿಳಿಸಿದ್ದಾರೆ. ಇದರಲ್ಲಿ 117 ಮಂದಿ ವಿದೇಶದಿಂದಲೂ, 57 ಮಂದಿ ಇತರ ರಾಜ್ಯಗಳಿಂದಲೂ ಬಂದವರು. 38 ಮಂದಿಗೆ ಸಂಪರ್ಕದಿಂದ ಕೊರೊನಾ ವೈರಸ್ ಬಾಧಿಸಿದೆ.
ಪಾಲ್ಘಾಟ್-29. ಕಾಸರಗೋಡು-28, ತಿರುವನಂತಪುರ-27, ಮಲಪ್ಪುರಂ-26, ಕಣ್ಣೂರು-25, ಕಲ್ಲಿಕೋಟೆ-20, ಆಲಪ್ಪುಳ-13, ಎರ್ನಾಕುಳಂ-12, ತೃಶ್ಶೂರು-12, ಕೊಲ್ಲಂ-10, ಕೋಟ್ಟಯಂ-8, ಇಡುಕ್ಕಿ-6, ವಯನಾಡು-6, ಪತ್ತನಂತಿಟ್ಟ-3 ಎಂಬಂತೆ ರೋಗ ಬಾ„ಸಿದೆ.
ಕಣ್ಣೂರು ಜಿಲ್ಲೆಯಲ್ಲಿ 7 ಮಂದಿ ಡಿಎಸ್‍ಸಿ ಜವಾನರಿಗೂ, 2 ಮಂದಿ ಸಿಐಎಸ್‍ಎಫ್ ಜವಾನರಿಗೂ, ತೃಶ್ಶೂರು ಜಿಲ್ಲೆಯಲ್ಲಿ ಇಬ್ಬರು ಬಿಎಸ್‍ಎಫ್ ಸಿಬಂದಿಗಳಿಗೂ, ಇಬ್ಬರು ಶಿಪ್ ಕ್ರೂವಿಸ್ ಸಿಬ್ಬಂದಿಗಳಿಗೂ ರೋಗ ಬಾಧಿಸಿದೆ.
ಚಿಕಿತ್ಸೆ ಪಡೆಯುತ್ತಿದ್ದ 126 ಮಂದಿ ಗುಣಮುಖರಾಗಿದ್ದಾರೆ.
ಕೊಲ್ಲಂ-31, ಮಲಪ್ಪುರ-28, ತೃಶ್ಶೂರು-12, ತಿರುವನಂತಪುರ-11 (ಒಬ್ಬರು ಆಲಪ್ಪುಳ), ಪತ್ತನಂತಿಟ್ಟ-10(ಒಬ್ಬರು ಆಲಪ್ಪುಳ), ಎರ್ನಾಕುಳಂ-10(ಇಬ್ಬರು ಕೋಟ್ಟಯಂ, ಒಬ್ಬರು ಪಾಲ್ಘಾಟ್), ಪಾಲ್ಘಾಟ್07, ವಯನಾಡು-6, ಕಲ್ಲಿಕೋಟೆ-5, ಕೋಟ್ಟಯಂ-3, ಕಣ್ಣೂರು-3 ಎಂಬಂತೆ ರೋಗ ಮುಕ್ತರಾಗಿದ್ದಾರೆ.
ಪ್ರಸ್ತುತ 2228 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 3174 ಮಂದಿ ಗುಣಮುಕ್ತರಾಗಿದ್ದಾರೆ.




