HEALTH TIPS

ಕೋವಿಡ್ ನಿಯಂತ್ರಣಕ್ಕೆ ವರ್ಷಗಳು ಬೇಕು-ಕೇರಳದಲ್ಲಿ ಸಾಮಾಜಿಕ ಹರಡುವಿಕೆ ಇದೆ- ಐಎಂಎ ಅಧ್ಯಕ್ಷ


          ತಿರುವನಂತಪುರ: ಕೇರಳದಲ್ಲಿ ಕೋವಿಡ್ ಸಮುದಾಯ ಮಟ್ಟದಲ್ಲಿ ಹರಡುತ್ತಿರುವುದು ಖಾತ್ರಿಯಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಘ (ಐಎಂಎ) ರಾಜ್ಯ ಅಧ್ಯಕ್ಷ ಅಬ್ರಹಾಂ ವರ್ಗೀಸ್ ಸೂಚನೆ ನೀಡಿದ್ದಾರೆ. ರಾಜ್ಯದಲ್ಲಿ ಕೋವಿಡ್ ಹರಡುವುದು ಗಂಭೀರವಾಗಿದೆ ಮತ್ತು ಅದನ್ನು ನಿಯಂತ್ರಿಸಲು ವರ್ಷಗಳೇ ತೆಗೆದುಕೊಳ್ಳುತ್ತದೆ ಎಂದು ಅವರು ಭಾನುವಾರ ಸುದ್ದಿ ಮಾಧ್ಯಮಗಳೊಂದಿಗೆ ಮಾಹಿತಿ ನೀಡಿದರು.
        'ಪರಿಸ್ಥಿತಿಯ ಇಷ್ಟೊಂದು ವ್ಯಾಪಕತೆಗೆ  ಮುಖ್ಯ ಕಾರಣವೆಂದರೆ ಗುರುತಿಸಲಾಗದ ಕೋವಿಡ್‍ನ ಸಕಾರಾತ್ಮಕ ಪ್ರಕರಣಗಳು ಹೆಚ್ಚಾಗುತ್ತಿರುವುದಾಗಿದೆ. ಪ್ರಸ್ತುತ ಸುಮಾರು 70 ಪ್ರಕರಣಗಳು ಗುರುತಿಸಲಾಗದ ಮೂಲದಿಂದ ಬಂದವುಗಳಾಗಿವೆ. ಇನ್ನೊಂದೆಡೆ ಯಾವುದೇ ರೋಗಲಕ್ಷಣಗಳಿಲ್ಲದ ಜನರಿಗೆ ಕೋವಿಡ್ ರೋಗ ಕಂಡುಬರುತ್ತಿರುವುದು ಗಾಬರಿಗೂ ಕಾರಣವಾಗುತ್ತಿದೆ ಎಂದಿರುವರು. ಕೋವಿಡ್ ರೋಗಿಗಳೊಂದಿಗೆ ಸಂಪರ್ಕವಿಲ್ಲದ ಆರೋಗ್ಯ ಕಾರ್ಯಕರ್ತರಲ್ಲೂ ಇದೀಗ ಕೊರೊನಾ ಅಪ್ಪಳಿಸುತ್ತಿದೆ. ಹೊರ ರಾಜ್ಯಗಳಿಗೆ ಕೇರಳದಿಂದ ತೆರಳಿದವರಿಗೆ ಅಲ್ಲಿ ತೆರಳಿದ ಬಳಿಕ ಕೊರೊನಾ ವೈರಸ್ ಕಂಡುಬಂದಿರುವುದು ಸಮುದಾಯ ಹರಡುವಿಕೆಯನ್ನು ಎತ್ತಿತೋರಿಸುತ್ತಿದೆ ಎಂದು ಅವರು ತಿಳಿಸಿರುವರು.
     ರಾಜ್ಯದಲ್ಲಿ ಈ ಹಿಂದೆ ಜಲ ಪ್ರವಾಹ, ನಿಫಾ ವೈರಸ್ ಧಾಳಿಗಳ ಸಂದರ್ಭ ಅಗತ್ಯದ ಕ್ರಮಗಳಿಂದ ನಿಯಂತ್ರಣಗಳನ್ನು ಮಾಡಿದ್ದರಿಂದ ದೊಡ್ಡ ಮಟ್ಟಿನ ಜೀವಹಾನಿಗಳುಂಟಾಗಿರಲಿಲ್ಲ. ಆದರೆ ಕೋವಿಡ್ ವೈರಸ್ ಅತಿ ನೂತನವಾದುದಾಗಿದ್ದು ಅದರ ನಿಯಂತ್ರಣಕ್ಕೆ ಹೊಸ ದಾರಿಗಳನ್ನು ಕಾಣಲಾಗುತ್ತಿದೆ. ಆದರೆ ಇನ್ನಷ್ಟು ಸಮಯಗಳು ಕೊರೊನಾ ನಿಯಂತ್ರಣಕ್ಕೆ ಬೇಕಾಗಬಹುದು. ಈ ಹಿನ್ನೆಲೆಯಲ್ಲಿ ಲಾಕ್ ಡೌನ್ ಮಾತ್ರ ಈಗಿರುವ ಕೊನೆಯ ಮಾರ್ಗವಾಗಿದೆ. ಬೇರೆ ಆಯ್ಕೆ ಇಲ್ಲದಿದ್ದರೆ ಲಾಕ್ ಡೌನ್‍ಗೆ ಮತ್ತೆ ಹೋಗಬೇಕಾಗುತ್ತದೆ. ಈಗ ನೀಟಿರುವ ನಿಯಂತ್ರಣ ಸಡಿಲಿಕೆಯಿಂದ ಜನರು ಅಗತ್ಯದ ಪಾಠ ಕಲಿಯುತ್ತಿಲ್ಲ. ಇದರಿಂದ ಪರಿಸ್ಥಿತಿ ತುಂಬಾ ಜಟಿಲವಾಗುತ್ತಿರುವುದು ವೇದ್ಯವಾಗುತ್ತಿದೆ. ಪ್ರಸ್ತುತ ಪರಿಸ್ಥಿತಿಯ ಗಂಭೀರತೆಯನ್ನು ಅರ್ಥಮಾಡಿಕೊಂಡರೆ ಮಾತ್ರ ಜನರು ಯಶಸ್ವಿಯಾಗ ಗೆಲ್ಲಬಹುದು ಎಂದು ಅಬ್ರಹಾಂ ವರ್ಗೀಸ್ ಹೇಳಿರುವರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries