HEALTH TIPS

ಸಮರಸ ಆರೋಗ್ಯ ಸಮೃದ್ದಿ: ಜೀವ-ಜೀವನ ದರ್ಶನ-ಭಾಗ:8-ಬರಹ:ಡಾ.ಪ್ರಸನ್ನ ನರಹರಿ


                            ಮುಂದುವರಿದ ಭಾಗ-08
        ಆದರೆ ಈಗ ಸ್ಟೀರೋಡ್ ತೆಗೆದುಕೊಂಡು ಅಭ್ಯಾಸವಾದ ಫಂಗಸ್ ಮೇಲೆ ವಿವರಿಸಿದ ಈ ಔಷಧಿಯಲ್ಲಿ ಗುಣವಾಗುವುದಿಲ್ಲ. ಆದುದರಿಂದ ಈಗ ವೈದ್ಯರುಗಳು ಹೊಸತಾದ ದುಬಾರಿ ಮಾತ್ರೆಗಳನ್ನು ಕೊಡಬೇಕಾಗುತ್ತದೆ. ಪರಿಸ್ಥಿತಿ ಈ ಮಟ್ಟಕ್ಕೆ ಬಂದಿರುವುದು ದುರ್ದೈವ. ಟರ್ಬಿನಾಫಿವ್ ಎಂಬ ಮಾತ್ರೆ ಈಗ ಲಭ್ಯವಿದೆ. ಇದು 30 ದಿನಗಳ ಔಷಧಿಗೆ ಸುಮಾರು ರೂ.500 ರಿಂದ 800ರ ವರೆಗೆ ವೆಚ್ಚವಾಗುತ್ತದೆ. ಈ ಎಲ್ಲ ಮಾತ್ರೆಗಳನ್ನು ರೋಗಿಗಳ ದೇಹದ ತೂಕಕ್ಕೆ ಅನುಸಾರ ಕೊಡಬೇಕಾಗುತ್ತದೆ. 250 ಮಿ.ಗ್ರಾಂ. ನಂತೆ 45 ದಿನಗಳ ವರೆಗೆ ಈ ಔಷಧಿ ಕೊಡಬೇಕಾಗುತ್ತದೆ.
      ಬೇರೆಬೇರೆ ಔಷಧಿ ಕಂಪೆನಿಗಳು ಬೇರೆಬೇರೆ ದರದಲ್ಲಿ ಮಾರಾಟ ಮಾಡುತ್ತಾರೆ. ಆದರೆ ಕ್ರಮೇಣ ಈ ಔಷಧಿಯಲ್ಲಿ ತುಂಬಾ ಜನರಿಗೆ ರೋಗ ಗುಣವಾಗದೆ ಮನೆಯ ಎಲ್ಲಾ ಸದಸ್ಯರಿಗೂ ಈ ರೋಗ ಹರಡಲಾರಂಭಿಸಿತು. ಇದಕ್ಕೆ ಡ್ರಗ್ ರೆಸಿಸ್ಟೆನ್ಸ್ ಎನ್ನಲಾಗುತ್ತದೆ. ಡ್ರಗ್ ರೆಸಿಸ್ಟೆನ್ಸ್ ಎಂದರೆ ಕೊಡಲ್ಪಟ್ಟ ಔಷಧಿಯು ಆ ಫಂಗಸ್ ನಿವಾರಣೆಗೆ ಫಲಕಾರಿಯಾಗದೆ ಇರುವುದಾಗಿದೆ. ಫಂಗಸ್ ಗಳು ನಮ್ಮ ದೇಹದ ಆಕಾರವನ್ನು ಆಗಾಗ ಬದಲಾಯಿಸುವ ಕಾರಣ ಕೊಟ್ಟ ಔಷಧಿಯು ಅದಕ್ಕೆ ಹಿಡಿಸುವುದಿಲ್ಲ. ಇದರಿಂದಾಗಿ ಇಟ್ರಕೊನಜೋಲ್ ಎಂಬ ಔಷಧಿಯನ್ನು ಕೊಡಬೇಕಾಗಿ ಬರುತ್ತದೆ. ಈ ಔಷಧಿಯನ್ನು ಬೇರೆಬೇರೆ ಔಷಧಿ ಕಂಪೆನಿಗಳು ವ್ಯತಿರಿಕ್ತ ಬೆಲೆಯಲ್ಲಿ ಮಾರಾಟಗೈಯ್ಯುತ್ತದೆ. ಒಂದು ಮಾತ್ರೆಗೆ ರೂ. 12 ರಿಂದ 82 ರೂ. ಗಳ ವರೆಗೆ ಮಾರಾಟ ಮಾಡಲಾಗುತ್ತಿದೆ. 100 ಎಂ.ಜಿ. ಮತ್ತು 200 ಎಂಜಿ ನ ರೂಪದಲ್ಲಿ ಇದು ಲಭ್ಯವಿದೆ. ಕೆಲವರಿಗೆ ಕಡಿಮೆ ದರದ ಔಷಧಿಯಲ್ಲಿ ಗುಣವಾದರೆ ಇನ್ನು ಕೆಲವರಿಗೆ ರೂ.82ರ ಮಾತ್ರೆಗಳನ್ನೇ ಕೊಡಬೇಕಾಗುತ್ತದೆ. ಅಂದರೆ 50 ಕೆ ಜಿ ತೂಕದವರಿಗೆ ರೂ.800 ರಿಂದ 4000 ದ ವರೆಗೆ ಇರುವ ಮಾತ್ರೆಯನ್ನು ಕೊಡಬೇಕಾಗುತ್ತದೆ. ಮನೆಯ ಎಲ್ಲಾ ಸದಸ್ಯರು ಈ ಔಷಧಿಯನ್ನು ತೆಗೆದುಕೊಳ್ಳುವಾಗ ಅವರ ಆರ್ಥಿಕ ಅವಸ್ಥೆ ಊಹಾತೀತ!
     
                                ಬರಹ: ಡಾ.ಪ್ರಸನ್ನಾ ನರಹರಿ.ಕಾಸರಗೋಡು. ಖ್ಯಾತ ಚರ್ಮ-ಲೈಂಗಿಕ ರೋಗ ತಜ್ಞರು.
                                            ನಿರ್ದೇಶಕಿ ಐಎಡಿ ಕಾಸರಗೋಡು.
                         ನಾಳೆಗೂ ಮುಂದುವರಿಯುವುದು.........................       

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries