ತಿರುವನಂತಪುರ: ತಿರುವನಂತಪುರದಲ್ಲಿ ವ್ಯಾಪಕ ಪ್ರಮಾಣದಲ್ಲಿ ಕೋವಿಡ್ ಕೊರೊನಾ ವೈರಸ್ ವ್ಯಾಪಕತೆಯನ್ನು ಮನಗಂಡು ಇಂದು ರಾತ್ರಿಯಿಂದಲೇ ಅನ್ವಯವಾಗುವಂತೆ ತಿರುವನಂತಪುರ ಕಾರ್ಪೋರೇಶನ್ ವ್ಯಾಪ್ತಿಯಲ್ಲಿ ಒಂದು ವಾರಗಳ ಟ್ರಿಪಲ್ ಲಾಕ್ ಡೌನ್ ಜಾರಿಗೊಳಿಸಲಾಗಿದೆ.
ಐಎಂಎ ನಿರ್ದೇಶಾನುಸಾರ ಭಾನುವಾರ ರಾತ್ರಿ ಸರ್ಕಾರ ಇಂತಹ ತುರ್ತು ನಿರ್ಣಯ ಕೈಗೊಂಡಿದ್ದು ಇಂದು ತಿರುವನಂತಪುರ ನಗರದಲ್ಲಿ 17 ಕ್ಕಿಂತಲೂ ಮಿಕ್ಕಿದ ಬಾಧಿತರ ಮೂಲ ತಿಳಿಯದಿರುವುದು ತೀವ್ರ ಕಳವಳಕ್ಕೆ ಕಾರಣವಾಗಿದೆ.
ರಾಜ್ಯದ ಇತರ ಜಿಲ್ಲೆಗಳ ಸ್ಥಿತಿಯೂ ಶೋಚನೀಯತೆಯತ್ತ ಸಾಗುವ ಸೂಚನೆ ಇದ್ದು ಸೋಮವಾರ ಉನ್ನತ ಅಧಿಕಾರಿಗಳ ಸಭೆ ನಡೆಯುವುದು. ಕೆಲವೊಮ್ಮೆ ರಾಜ್ಯಾದ್ಯಂತ ಮತ್ತೆ ಲಾಕ್ ಡೌನ್ ಸಾಧ್ಯತೆಯನ್ನೂ ತಳ್ಳುವಂತಿಲ್ಲ ಎಂದು ಅಧಿಕೃತ ಮೂಲಗಳು ತಿಳಿಸಿವೆ.


