ಕಾಸರಗೋಡು: ಶ್ರೀಮದ್ ಎಡನೀರು ಮಠಾಧೀಶ ಶ್ರೀಕೇಶವಾನಂದ ಭಾರತೀ ಶ್ರೀಗಳ 60ನೇ ವರ್ಷದ ಚಾತುರ್ಮಾಸ್ಯ ವ್ರತಾನುಷ್ಠಾನ ವ್ಯಾಸ ಪೂರ್ಣಿಮ ದಿನವಾದ ಭಾನುವಾರ ಶ್ರೀಮಠದಲ್ಲಿ ಸಾಂಪ್ರದಾಯಿಕ ಶ್ರದ್ದಾ ಭಕ್ತಿಗಳೊಂದಿಗೆ ಆರಂಭಗೊಂಡಿತು.
ಭಾನುವಾರ ಬೆಳಿಗ್ಗೆ ಶ್ರೀವ್ಯಾಸ ಪೂಜೆ, ಗಣ ಹವನ, ದಕ್ಷಿಣಾಮೂರ್ತಿ ಹವನ, ಗೋಪಾಲಕೃಷ್ಣ ಹವನ ಹಾಗೂ ಶ್ರೀಧನ್ವಂತರೀ ಹವನಗಳು ನಡೆಯಿತು. ಸಪ್ಟಂಬರ್ 2ರ ವರೆಗೆ ಚಾತುರ್ಮಾಸ್ಯ ವ್ರತಾನುಷ್ಠಾನ ಕಾರ್ಯಕ್ರಮಗಳು ವಿಧಿವಿಧಾನಗಳೊಂದಿಗೆ ನಡೆಯಲಿದೆ. ಕೋವಿಡ್ ನಿಯಂತ್ರಣದ ಹಿನ್ನೆಲೆಯಲ್ಲಿ ಇತರ ಸಾಂಸ್ಕøತಿಕ ಕಾರ್ಯಕ್ರಮಗಳು ನೆರವೇರುವುದಿಲ್ಲ ಎಂದು ಮಠದ ಪ್ರಕಟಣೆ ತಿಳಿಸಿದೆ.



