ಕಾಸರಗೋಡು: ಜಿಲ್ಲೆಯಲ್ಲಿ ಜು.24 ವರೆಗೆ ಮೀನುಗಾರಿಕೆನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿಡಿuvರು. ಈಗಾಗಲೇ ಮೀನುಗಾರಿಕೆಗಾಗಿ ಹೊರಟಿರುವ ಫೈಬರ್ ಬೋಟುಗಳು ತೈಕಡಪ್ಪುರಂ, ಮಂಜೇಶ್ವರ ಪ್ರದೇಶಗಳಸಮುದ್ರ ದಡವನ್ನು ಸೇರಬೇಕು. ಸಣ್ಣ ದೋಣಿಗಳು ಪಳ್ಳಿಕ್ಕರೆ, ಕೀಯೂರು, ತ್ರಿಕನ್ನಾಡು, ಅಜಾನೂರು, ಕುಂಬಳೆ, ಕೊಯಿಪ್ಪಾಡಿ,ಉಪ್ಪಳ, ಆರಿಕ್ಕಾಡಿ, ಕಾಞಂಗಾಡ್ ಮೀನಾಪೀಸ್, ಬೇಕಲ ಪ್ರದೇಶಗಳಲ್ಲಿ ಹಿಂದಿರುಗಿ ಬರಬೇಕು. ಈ ನಿಷೇಧಾಜ್ಞೆ ಹಿಂತೆಗೆತ ಬಗ್ಗೆ ನಂತರ ಸಮಾಲೋಚನೆ ನಡೆಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು. ಕೋವಿಡ್ 19ರ ಹಿನ್ನೆಲೆಯಲ್ಲಿ ಮೀನುಗಾರಿಕೆ ವಯದಲ್ಲಿ ಕಟ್ಟುನಿಟ್ಟು, ಸಂರಕ್ಷಣೆ ಏರ್ಪಡಿಸುವ ನಿಟ್ಟಿನಲ್ಲಿಜಿಲ್ಲಾಧಿಕಾರಿ ಕಚೇರಿಯಲ್ಲಿ ಶನಿವಾರ ನಡೆದ ಮೀನುಗಾರರ ಸಂಘಟನೆಗಳ ಪ್ರತಿನಿಧಿಗಳ ಸಭೆಯಲ್ಲಿ ಈ ತೀರ್ಮಾನಕೈಗೊಳ್ಳಲಾಗಿದೆ. ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅಧ್ಯಕ್ಷತೆ ವಹಿಸಿದ್ದರು.
ಕಾಸರಗೋಡು ಜಿಲ್ಲೆಯಲ್ಲಿ ಜು.24 ವರೆಗೆ ಮೀನುಗಾರಿಕೆ ನಿಷೇಧ-ಜಿಲ್ಲಾಧಿಕಾರಿ
0
ಜುಲೈ 18, 2020