ಕಾಸರಗೋಡು: ಕಾಸರಗೋಡು, ಜಿಲ್ಲೆಯಲ್ಲಿ ಮಂಗಳವಾರ 13 ಮಂದಿಗೆ ಕೊರೊನಾ ವೈರಸ್ ಸೋಂಕು ದೃಢಗೊಂಡಿದೆ. ವಿದೇಶದಿಂದ ಬಂದ 8 ಮಂದಿ, ಬೆಂಗಳೂರಿನಿಂದ ಬಂದ ಇಬ್ಬರಿಗೆ, ಮಂಗಳೂರಿಗೆ ಪ್ರಯಾಣಿಸಿದ್ದ ಇಬ್ಬರಿಗೆ ಹಾಗು ಮಂಗಳೂರಿನಲ್ಲಿ ವಾಸ್ತವ್ಯವಿದ್ದ ಗರ್ಭಿಣಿ ಮಹಿಳೆಗೆ ರೋಗ ಬಾಧಿಸಿದೆ.
ಬಹರೈನ್‍ನಿಂದ ಬಂದ 39 ವರ್ಷದ ಕಾಸರಗೋಡು ನಗರಸಭಾ ನಿವಾಸಿ, ದುಬೈಯಿಂದ ಬಂದ 30 ವರ್ಷದ ಪನತ್ತಡಿ ಪಂಚಾಯತ್ ನಿವಾಸಿ, 52 ವರ್ಷದ ಕಾಂಞಂಗಾಡ್ ನಗರಸಭಾ ನಿವಾಸಿ, ಸೌದಿಯಿಂದ ಬಂದ 41 ವರ್ಷದ ಚೆಂಗಳ ಪಂಚಾಯತ್‍ನಿವಾಸಿ, ಬಹರೈನ್‍ನಿಂದ ಬಂದ 40 ವರ್ಷದ ಮುಳಿಯಾರು ಪಂಚಾಯತ್ ನಿವಾಸಿ, ಸೌದಿಯಿಂದ ಬಂದ 27 ವರ್ಷದ ಮಂಗಲ್ಪಾಡಿ ಪಂಚಾಯತ್ ನಿವಾಸಿ, ಒಂದೇ ಕಾರಿನಲ್ಲಿ ಬೆಂಗಳೂರಿನಿಂದ ತಲುಪಿದ 35 ಮತ್ತು 30 ವರ್ಷದ ಬದಿಯಡ್ಕ ಪಂಚಾಯತ್ ನಿವಾಸಿಗಳು, ಸೌದಿಯಿಂದ ಬಂದ 50 ವರ್ಷದ ಮಧೂರು ಪಂಚಾಯತ್ ನಿವಾಸಿ, 28 ವರ್ಷದ ದೇಲಂಪಾಡಿ ಪಂಚಾಯತ್ ನಿವಾಸಿ, ಮಂಗಳೂರಿಗೆ ದಿನಾ ಹೋಗುತ್ತಿದ್ದ ಚೆಂಗಳ ಗ್ರಾಮ ಪಂಚಾಯತ್‍ನ 35 ವರ್ಷದ ವ್ಯಕ್ತಿ, ಮಂಗಳೂರಿನಲ್ಲಿ ವಾಸಿಸುತ್ತಿದ್ದ ಉದುಮ ಪಂಚಾಯತ್‍ನ 27 ವರ್ಷದ ಗರ್ಭಿಣಿ, ಮಂಗಳೂರಿಗೆ ಪ್ರಯಾಣಿಸಿದ ಚೆಂಗಳ ಪಂಚಾಯತ್‍ನ 47 ವರ್ಷದ ನಿವಾಸಿಗಳಿಗೆ ರೋಗ ಬಾಧಿಸಿದೆ ಎಂದು ಡಿಎಂಒ ಡಾ.ಎ.ವಿ.ರಾಮದಾಸ್ ತಿಳಿಸಿದ್ದಾರೆ.
ಕೇರಳದಲ್ಲಿ 272 ಮಂದಿಗೆ ಸೋಂಕು :
ರಾಜ್ಯದಲ್ಲಿ ಮಂಗಳವಾರ 272 ಮಂದಿಗೆ ಕೊರೊನಾ ವೈರಸ್ ಸೋಂಕು ದೃಢೀಕರಿಸಲಾಗಿದೆ. ಇದೇ ಸಂದರ್ಭದಲ್ಲಿ 111 ಮಂದಿ ರೋಗ ಮುಕ್ತರಾಗಿದ್ದಾರೆಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದ್ದಾರೆ. ರೋಗ ಬಾ„ತರಲ್ಲಿ 157 ಮಂದಿ ವಿದೇಶದಿಂದಲೂ, 38 ಮಂದಿ ಇತರ ರಾಜ್ಯಗಳಿಂದ ಬಂದವರು. ಸಂಪರ್ಕದಿಂದ 68 ಮಂದಿಗೆ ರೋಗ ಬಾಧಿಸಿದೆ. ಹೇಗೆ ರೋಗ ಬಾ„ಸಿತು ಎಂಬ ಕಾರಣ ತಿಳಿಯದ 15 ಪ್ರಕರಣಗಳಿವೆ.
ಕೊಲ್ಲಂ-11, ಪತ್ತನಂತಿಟ್ಟ-12, ಕೋಟ್ಟಯಂ-3, ಆಲಪ್ಪುಳ-18, ಇಡುಕ್ಕಿ-1, ತೃಶ್ಶೂರು-10, ಪಾಲ್ಘಾಟ್-29, ಮಲಪ್ಪುರ-63, ಕಲ್ಲಿಕೋಟೆ-15, ವಯನಾಡು-3, ಕಣ್ಣೂರು-19, ಕಾಸರಗೋಡು-13 ಎಂಬಂತೆ ರೋಗ ಬಾಧಿಸಿದೆ.
ತಿರುವನಂತಪುರ-3, ಕೊಲ್ಲಂ-6, ಪತ್ತನಂತಿಟ್ಟ-19, ಕೋಟ್ಟಯಂ-1, ಎರ್ನಾಕುಳಂ-20, ಇಡುಕ್ಕಿ-1, ತೃಶ್ಶೂರು-6, ಪಾಲ್ಘಾಟ್-23, ಮಲಪ್ಪುರಂ-10, ಕಲ್ಲಿಕೋಟೆ-6, ವಯನಾಡು-3, ಕಣ್ಣೂರು-9 ಎಂಬಂತೆ ರೋಗ ಮುಕ್ತರಾಗಿದ್ದಾರೆ.
ಲಾಕ್ ಡೌನ್ ಉಲ್ಲಂಘನೆ : 16 ಕೇಸುಗಳು : ಲಾಕ್‍ಡೌನ್ ಆದೇಶ ಉಲ್ಲಂಘಿಸಿದ ಆರೋಪದಲ್ಲಿ ಕಾಸರಗೋಡು ಜಿಲ್ಲೆಯಲ್ಲಿ 16 ಕೇಸುಗಳನ್ನು ದಾಖಲಿಸಲಾಗಿದೆ. 27 ಮಂದಿಯನ್ನು ಬಂ„ಸಲಾಗಿದ್ದು, 9 ವಾಹನಗಳನ್ನು ವಶಪಡಿಸಲಾಗಿದೆ. ಕುಂಬಳೆ ಪೆÇಲೀಸ್ ಠಾಣೆಯಲ್ಲಿ 1 ಕೇಸು, ಕಾಸರಗೋಡು 3, ವಿದ್ಯಾನಗರ 2, ಬೇಡಗಂ 1, ಆದೂರು 1, ಮೇಲ್ಪರಂಬ 2, ಬೇಕಲ 2, ಹೊಸದುರ್ಗ 1, ನೀಲೇಶ್ವರ 2, ಚಂದೇರ 1 ಕೇಸುಗಳನ್ನು ದಾಖಲಿಸಲಾಗಿದೆ.
ಈ ಪ್ರಕರಣಗಳಿಗೆ ಸಂಬಂಧಿಸಿ ಕಾಸರಗೋಡು ಜಿಲ್ಲೆಯಲ್ಲಿ ಈ ವರೆಗೆ 3859 ಕೇಸುಗಳನ್ನು ದಾಖಲಿಸಲಾಗಿದೆ. 2968 ಮಂದಿಯನ್ನು ಬಂಧಿಸಲಾಗಿದ್ದು, 1227 ವಾಹನಗಳನ್ನು ವಶಪಡಿಸಲಾಗಿದೆ.
ಮಾಸ್ಕ್ ಧರಿಸದ 184 ಮಂದಿ ವಿರುದ್ಧ ಕೇಸು : ಮಾಸ್ಕ್ ಧರಿಸದೇ ಇದ್ದ ಆರೋಪದಲ್ಲಿ ಕಾಸರಗೋಡು ಜಿಲ್ಲೆಯಲ್ಲಿ 184 ಮಂದಿ ವಿರುದ್ಧ ಕೇಸು ದಾಖಲಿಸಲಾಗಿದೆ. ಈ ಪ್ರಕರಣಗಳಿಗೆ ಸಂಬಂಧಿಸಿ ಕಾಸರಗೋಡು ಜಿಲ್ಲೆಯಲ್ಲಿ ಈ ವರೆಗೆ ಒಟ್ಟು 11228 ಮಂದಿ ವಿರುದ್ಧ ಕೇಸು ದಾಖಲಾಗಿದೆ.



