HEALTH TIPS

ಕಾಸರಗೋಡು ಜಿಲ್ಲೆಯಲ್ಲಿ ಕಟ್ಟುನಿಟ್ಟು ಬಿಗಿಗೊಳಿಸಿದ ಪೆÇಲೀಸರು: ಆದೇಶ ಉಲ್ಲಂಘಿಸುವವರ ವಿರುದ್ಧ ಕಾನೂನು ಕ್ರಮ: ಎಸ್ಪಿ


                    ಕಾಸರಗೋಡು: ಜಿಲ್ಲೆಯಲ್ಲಿ ಪೆÇಲೀಸರು ಕಟ್ಟುನಿಟ್ಟು ಬಿಗಿಗೊಳಿಸಿದ್ದಾರೆ.  ಕೋವಿಡ್ ಸೋಂಕಿನ ಸಾಮೂಹಿಕ ಹರಡುವಿಕೆ ತಲೆದೋರಿರುವ ಹಿನ್ನೆಲೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಸಹಿತ ಕಟ್ಟುನಿಟ್ಟು ಆದೇಶಗಳನ್ನು ಸಾರ್ವಜನಿಕರು ಕಡ್ಡಾಯವಾಗಿ ಪಾಲಿಸಬೇಕು. ಉಲ್ಲಂಘಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಡಿ.ಶಿಲ್ಪಾ ಎಚ್ಚರಕೆ ನೀಡಿದ್ದಾರೆ.
                                     ಮಂಜೇಶ್ವರದಲ್ಲಿ ಹೆಚ್ಚುವರಿ ಕಟ್ಟುನಿಟ್ಟು:
           ಸಂಪರ್ಕ ಮೂಲಕ ಕೋವಿಡ್ ಸೋಂಕು ತಗುಲಿರುವ ಹಿನ್ನೆಲೆಯಲ್ಲಿ ಮಂಜೇಶ್ವರ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ಹೆಚ್ಚುವರಿ ಕಟ್ಟುನಿಟ್ಟು ಏರ್ಪಡಿಸಲಾಗಿದೆ. ಪೇಟೆ ಪ್ರದೇಶಗಳಲ್ಲಿ ಅನಿವಾರ್ಯ ಸಾಮಾಗ್ರಿಗಳ ಅಂಗಡಿಗಳು ಮಾತ್ರ ಬೆಳಗ್ಗೆ 11 ರಿಂದ ಸಂಜೆ 5 ಗಂಟೆ ವರೆಗೆ ತೆರದು ಕಾರ್ಯಾಚರಿಸಲು ಅನುಮತಿಯಿದೆ. ಆದೇಶ ಉಲ್ಲಂಘಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು.
                    ಅಂಗಡಿಗಳಲ್ಲಿ 5 ಮಂದಿಗಿಂತ ಹೆಚ್ಚು ನಿಷೇಧ:
      ಕಾಸರಗೋಡು ಜಿಲ್ಲೆಯಲ್ಲಿ ಅಂಗಡಿಗಳು ಸಹಿತ ವ್ಯಾಪರ ಕೇಂದ್ರಗಳಲ್ಲಿ 5 ಕ್ಕಿಂತ ಅಧಿಕ ಮಂದಿ ಏಕಕಾಲಕ್ಕೆ ಇರಕೂಡದು. ಗ್ರಾಹಕರು ಗರಿಷ್ಠ ಮಟ್ಟದಲ್ಲಿ ನಿಗದಿ ಪಡಿಸಲಾದ (ಮಾರ್ಕ್ ಮಾಡಲಾದ) ರೀತಿ ಸಾಲಾಗಿ ನಿಂತು ಸಾಮಾಜಿಕ ಅಂತರ ಕಾಯ್ದುಕೊಂಡು ಸಾಮಾಗ್ರಿ ಖರೀದಿಸಬೇಕು. ಅಂಗಡಿಗಳಲ್ಲಿ ಸಾನಿಟೈಸರ್ ಸೌಲಭ್ಯ ಇರಿಸಲು ಮಾಲೀಕ ಗಮನಹರಿಸಬೇಕು. ಸಾರ್ವಜನಿಕ ಪ್ರದೇಶಗಳಲ್ಲಿ ಮತ್ತು ನೌಕರಿ ನಡೆಸುವ ಕೇಂದ್ರಗಳಲ್ಲಿ ಮಾಸ್ಕ್ ಧರಿಸಬೇಕು. ಕಾರ್ಯಕ್ರಮಗಳಲ್ಲಿ ಭಾಗವಹಿಸುವವರು ಸಾಮಾಜಿಕ ಅಂತರ ಪಾಲಿಸಬೇಕು. ವಿವಾಹ ಸಮಾರಂಭಗಳಲ್ಲಿ 50 ಮಂದಿಗಿಂತ ಅಧಿಕ ಜನ ಸೇರಕೂಡದು. ಮಾಸ್ಕ್ ಧರಿಸುವುದು, ಸಾನಿಟೈಸರ್ ಬಳಸಿ ಕೈತೊಳೆಯುವುದು, ಸಾಮಾಜಿಕ ಅಂತರ ಪಾಲನೆ ಸಮಾರಂಭಗಳಲ್ಲಿ ಕಡ್ಡಾಯಗೊಳಿಸಲಾಗಿದೆ.
                      ಉಗುಳು ನಿಷೇಧ:
       ರಸ್ತೆಯಲ್ಲಿ, ಕಾಲ್ನಡಿಗೆ ಹಾದಿಯಲ್ಲಿ ಉಗುಳಕೂಡದು. ಪೂರ್ವ ಅನುಮತಿ ಪಡೆದು ಮಾತ್ರ ಮೆರವಣಿಗೆ, ಮುಷ್ಕರ ಇತ್ಯಾದಿ ನಡೆಸಬೇಕು. ಇಲ್ಲೂ ಸಾಮಾಜಿಕ ಅಂತರ ಪಾಲನೆ ಸಹಿತ ಕಟ್ಟುನಿಟ್ಟು ಪಾಲಿಸಬೇಕು. ಫುಟ್ ಬಾಲ್, ಕ್ರಿಕೆಟ್, ವಾಲಿಬಾಲ್ ಸಹಿತ ಕ್ರೀಡೆಗಳನ್ನು ಪೂರ್ಣರೂಪದಲ್ಲಿ ನಿಷೇಧಿಸಲಾಗಿದೆ. ಈ ಆದೇಶಗಳನ್ನು ಉಲ್ಲಂಘಿಸುವವರ ವಿರುದ್ಧ 10 ಸಾವಿರ ರೂ.ವರೆಗೆ ದಂಡ ಮತ್ತು 2 ವರ್ಷ ವರೆಗಿನ ಸೆರೆಮನೆ ವಾಸ ವಿಧಿಸಬಹುದಾಗಿದೆ.
     ಕಂಟೈ ನ್ಮೆಂಟ್ ಝೋನ್ ಗಳಲ್ಲಿ ಸಾರ್ವಜನಿಕ ಸಮಾರಂಭಗಳನ್ನು ನಡೆಸಕೂಡದು. ಈ ಪ್ರದೇಶಗಳಿಗೆ ಹೊರಗಡೆಯಿಂದ ಜನ ಬರವುದು, ವಸತಿ ಹೂಡುವುದು ಸಲ್ಲದು. ಇಲ್ಲಿನ ಜನ ಬೇರೆಗೆ ತೆರಳುವುದೂ ಕೂಡದು. ಸಾರ್ವಜನಿಕ ಪ್ರದೇಶಗಳಲ್ಲಿ ಜನ ಗುಂಪು ಸೇರಬಾರದು. ಅನಿವಾರ್ಯ ಸಾಮಾಗ್ರಿಗಳ ಅಂಗಡಿಗಳಲ್ಲಿ, ಮೆಡಿಕಲ್ ಶಾಪ್ ಗಳಲ್ಲಿ 5 ಕ್ಕಿಂತ ಅಧಿಕ ಜನ ಏಕಕಾಲಕ್ಕೆ ಸೇರಕೂಡದು ಎಂದು ತಿಳಿಸಲಾಗಿದೆ.
      ಕೆಲವೆಡೆ ಮನೆಗಳಲ್ಲಿ, ಸಾಂಸ್ಥಿಕ ನಿಗಾ ಕೇಂದ್ರಗಳಲ್ಲಿ ದಾಖಲಾಗಿರುವವರು ಹೊರಗಡೆ ಬರುವುದು, ಸಂಚಾರ ನಡೆಸುವುದು ಗಮನಕ್ಕೆ ಬಂದಿದೆ.ಈ ರೀತಿ ಆದೇಶ ಉಲ್ಲಂಘನೆ ನಡೆಸುವವರ ವಿರುದ್ಧ ಅಂಟುರೋಗ ನಿಯಂತ್ರಣ ಕಾಯಿದೆ ಸಹಿತ ಕಾನೂನು ಕ್ರಮ ಕೈಗೊಳ್ಳಲಾಗುವುದು.   
                ರಸ್ತೆ ಬದಿ ಲಾರಿ ನಿಲುಗಡೆಗೆ ನಿರ್ಬಂಧ: 
     ಇತರ ರಾಜ್ಯಗಳಿಂದ ಸರಕು ಹೇರಿಕೊಂಡು ಬರುವ ಲಾರಿಗಳ ಸಹಿತ ವಾಹನಗಳನ್ನು ರಸ್ತೆ ಬದಿ ನಿಲ್ಲಿಸಕೂಡದು. ಹೋಟೆಲ್ ಗಳಲ್ಲಿ ಆಹಾರವನ್ನು ಪಾರ್ಸೆಲ್ ಆಗಿ ಮಾತ್ರ ನೀಡಬೇಕು. ಆರಾಧನಾಲಯಗಳಲ್ಲಿ ದೈಹಿಕ ಅಂತರ ಕಾಯ್ದುಕೊಳ್ಳಬೇಕು. ಇತರ ರಾಜ್ಯಗಳ ಕಾರ್ಮಿಕರು ಕಾಸರಗೋಡು ಜಿಲ್ಲೆಗೆ ಆಗಮಿಸಿದರೆ ಕಡ್ಡಾಯವಾಗಿ 14 ದಿನಗಳ ಕಾಲ ಕ್ವಾರೆಂಟೈನ್ ನಲ್ಲಿ ರಬೇಕು. ಅದಕ್ಕಿರುವ ಸೌಲಭ್ಯ ಗುತ್ತಿಗೆದಾರರು ಒದಗಿಸಬೇಕು.
               ದೂರು ಸಲ್ಲಿಕೆಗೆ ಆನ್ ಲೈನ್ ಸೌಲಭ್ಯ:
    ಸಾರ್ವಜನಿಕರು ಈ-ಮೇಲ್ ಸಹಿತ ಆನ್ ಲೈನ್ ಮೂಲಕ ಪೆÇಲೀಸರಿಗೆ ದೂರು ಸಲ್ಲಿಸಬಹುದು. ಬೇಕಲ, ರಾಣಿಪುರ, ಪೆÇಸಡಿಗುಂಪೆ ಸಹಿತ ಪ್ರವಾಸಿ ತಾಣಗಳನ್ನು ಜು.31 ವರೆಗೆ ತೆರೆಯಲು ಅನುಮತಿಯಿಲ್ಲ ಎಂದು ಪೆÇಲೀಸರು ಆದೇಶಿಸಿದ್ದಾರೆ.                           
                       ಹೋಂ ಕ್ವಾರೆಂಟೈನ್ ಉಲ್ಲಂಘನೆ: ಓರ್ವನ ವಿರುದ್ಧ ಕೇಸು:
     ಹೋಂ ಕ್ವಾರೆಂಟೈನ್ ಉಲ್ಲಂಘನೆ ನಡೆಸಿದ ಆರೋಪದಲ್ಲಿ ಬಂದಡ್ಕ ಮಾಣಿಮೂಲೆ ನಿವಾಸಿ ಶ್ರೀಧರನ್ ಎಂಬಾತನ ವಿರುದ್ಧ ಪೆÇಲೀಸರು ಕೇಸು ದಾಖಲಿಸಿದರು. ಸುಳ್ಯದಲ್ಲಿ ನೌಕರಿ ನಡೆಸುತ್ತಿದ್ದ ಇವರು ಊರಿಗೆ ಮರಳಿದ ನಂತರ ಕ್ವಾರೆಂಟೈನ್ ನಲ್ಲಿ ಇರುವಂತೆ ಆದೇಶಿಸಲಾಗಿತ್ತು. ಆದರೆ ಇವರು ಈ ಆದೇಶ ಉಲ್ಲಂಘಿಸಿ ಹೊರಬರುತ್ತಿರುವುದು ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಪೆÇಲೀಸರು ತನಿಖೆ ಆರಂಭಿಸಿದ್ದರು. ಬಂದಡ್ಕ ಪೇಟೆಯಲ್ಲಿ ಇವರನ್ನು ಪೆÇಲೀಸರು ವಶಕ್ಕೆ ತೆಗೆದುಕೊಂಡು ಕೇಸು ದಾಖಲಿಸಿದ್ದಾರೆ. ಇವರನ್ನು ಈಗ ಸಾಂಸ್ಥಿಕ  ಕ್ವಾರೆಂಟೈನ್ ಗೆ ದಾಖಲಿಸಲಾಗಿದೆ ಎಂದು ಕಾಸರಗೋಡು ಡಿ.ವೈ.ಎಸ್.ಪಿ. ಪಿ.ಪಿ.ಬಾಲಕೃಷ್ಣನ್ ನಾಯರ್ ತಿಳಿಸಿರುವರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries