HEALTH TIPS

ಕೊರೋನಾ: ರಷ್ಯಾ ಹಿಂದಿಕ್ಕಿದ ಭಾರತ, ವಿಶ್ವದಲ್ಲಿ ನಂಬರ್-3 ಸ್ಥಾನ

   
         ನವದೆಹಲಿ: ದೇಶದಲ್ಲಿ ಕೊರೋನಾವೈರಸ್ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಇದೀಗ ಹೆಚ್ಚು ಸೋಂಕಿತ ರಾಷ್ಟ್ರಗಳ ಪೈಕಿ ರಷ್ಯಾ ದೇಶವನ್ನು ಹಿಂದಿಕ್ಕಿ, ವಿಶ್ವದಲ್ಲಿ ದುರ್ದೈವವಶಾತ್ ಮೂರನೇ ಸ್ಥಾನಕ್ಕೇರಿದೆ.
        ಆರೋಗ್ಯ ಸಚಿವಾಲಯದ ಅಧಿಕೃತ ಅಂಕಿಅಂಶಗಳ ಪ್ರಕಾರ, ದೇಶದಲ್ಲಿ ನಿನ್ನೆ ಕೊರೋನಾ ಸೋಂಕಿತರ ಸಂಖ್ಯೆ 6 ಲಕ್ಷದ 85 ಸಾವಿರದ 110ಕ್ಕೆ ಏರಿಕೆಯಾಗಿದ್ದು, ರಷ್ಯಾಗಿಂತಲೂ 1989 ಪಾಸಿಟಿವ್ ಪ್ರಕರಣಗಳು ಹೆಚ್ಚಾಗಿ ವರದಿಯಾಗಿದೆ. ಜಾಗತಿಕ ಮಟ್ಟದಲ್ಲಿ ಅಮೆರಿಕಾದಲ್ಲಿ ಈವರೆಗೂ 29 ಲಕ್ಷದ 36 ಸಾವಿರದ 904 ಪ್ರಕರಣಗಳು ದಾಖಲಾಗಿದ್ದು, ಮೊದಲ ಸ್ಥಾನದಲ್ಲಿದೆ. ಭ್ರಜಿಲ್ ನಲ್ಲಿ 15 ಲಕ್ಷದ 78 ಸಾವಿರದ 376  ಪ್ರಕರಣಗಳು ವರದಿಯಾಗಿದ್ದು, ದ್ವಿತೀಯ ಸ್ಥಾನದಲ್ಲಿದೆ.
       ಪ್ರಸ್ತುತ ದೇಶದಲ್ಲಿ 6 ಲಕ್ಷದ 85 ಸಾವಿರದ 110  ಪ್ರಕರಣಗಳಿದ್ದು, 19,441 ಜನ ಮೃತಪಟ್ಟಿದ್ದಾರೆ. ಈವರೆಗೂ 4 ಲಕ್ಷದ 16 ಸಾವಿರದ 011 ಜನರು ಸೋಂಕಿನಿಂದ ಗುಣಮುಖರಾಗಿದ್ದಾರೆ.

#BigBreaking #COVID19 cases in #India climb to the 3rd highest in the world overtaking #Russia. USA - 29,36,904 Brazil - 15,78,376 India - 6,85,110 Russia - 6,81,251 @XpressOdisha @NewIndianXpress

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries