ಕಾಸರಗೋಡು: ಕೋವಿಡ್ -19 ಮಂಗಳೂರಿಂದ ಕಾಸರಗೋಡಿಗೆ ವಿಸ್ತರಿಸುತ್ತಿದೆಯೇ ಎಂಬ ಶಂಕೆ ಮೂಡಿಬಂದಿದೆ. ಎರಡು ದಿನಗಳಲ್ಲಿ ಎಂಟು ಜನರಿಗೆ ರೋಗ ಹರಡಿರುವುದು ಮಂಗಳೂರಿಂದ ಎಂದು ಗುರುತಿಸಲಾಗಿದೆ. ಫಲಿತಾಂಶಗಳಿಂದ ತಿಳಿದುಬರುವಂತೆ ಹೆಚ್ಚಿನವರು ಮಂಜೇಶ್ವರಂ ತಾಲ್ಲೂಕಿನವರು ಎಂಬುದು ಆತಂಕಕಾರಿ.
ಶನಿವಾರ ರೋಗ ಪತ್ತೆಯಾದವರಲ್ಲಿ ಇಬ್ಬರು ಕಾರು ಮತ್ತು ಇನ್ನೊಬ್ಬರು ಬೈಕ್ ಮೂಲಕ ಮಂಗಳೂರಿಗೆ ಪ್ರಯಾಣಿಸಿದವರಾಗಿದ್ದಾರೆ. ಈ ಪೈಕಿ ಬೈಕ್ ಸವಾರ ಮಂಗಲ್ಪಾಡಿಯ 24 ರ ಹರೆಯದ ಸವಾರನಾಗಿದ್ದು ಜ್ವರದಿಂದ ಶನಿವಾರ ರಾತ್ರಿ ಜೊಲ್ಲನ್ನು ಆಸ್ಪತ್ರೆಗೆ ಕಳುಹಿಸಲಾಗಿದೆ. ಅಲ್ಲದೆ ರೋಗ ಪರೀಕ್ಷಿಸಲಾದ ಮಹಿಳೆಯೊಬ್ಬರು ತನ್ನ ಕಾರಿನಲ್ಲಿ ಪ್ರತಿನಿತ್ಯ ಮಂಗಳೂರಿಗೆ ಪ್ರಯಾಣಿಸುವವರಾಗಿದ್ದು ಇವರ ಪತಿಗೆ ಎರಡು ದಿನಗಳ ಹಿಂದೆ ರೋಗ ಪತ್ತೆಯಾಗಿತ್ತು. ಅವರೂ ಪ್ರತಿದಿನ ಕಾರಿನಲ್ಲಿ ಮಂಗಳೂರಿಗೆ ಹೋಗುತ್ತಿದ್ದರು. ಕೆಲವೊಮ್ಮೆ, ಅವರ ಪತ್ನಿ ಕಾರಿನಲ್ಲಿರುತ್ತಿದ್ದರು. ಇದೀಗ ಮಹಿಳೆಯ ಜೊಲ್ಲು ಪರೀಕ್ಷೆಯ ವಿಧಿ ಇಂದು ಬರುವ ಸಾಧ್ಯತೆ ಇದೆ. ಅವರು ಮಂಗಳೂರಿನಿಂದ ಸೋಂಕಿಗೆ ಒಳಗಾಗಿದ್ದಾರೋ ಅಥವಾ ಅವರ ಪತಿಯ ಸಂಪರ್ಕದ ಮೂಲಕವೋ ಎಂಬುದು ಸ್ಪಷ್ಟವಾಗಿಲ್ಲ. ಕಾರು ಮತ್ತು ಬೈಕ್‍ನಲ್ಲಿ ಪ್ರಯಾಣಿಸಿದ ಮೂವರು ಸಂಪರ್ಕ ಪಟ್ಟಿಯಲ್ಲಿ ಸೇರುವ ಸಾಧ್ಯತೆ ಹೆಚ್ಚು ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.
ಜೂನ್ 29 ರಂದು ಪಿಕ್ ಅಫ್ ವ್ಯಾನ್ ಮೂಲಕ ಮಂಗಳೂರಿಗೆ ಬಂದಿದ್ದ ಮುಳಿಯಾರ್ ನಿವಾಸಿ 35 ಮತ್ತು 30 ವರ್ಷದ ಒಡಹುಟ್ಟಿದವರು, 22 ರ ಹರೆಯದ ಮಂಜೇಶ್ವರದ ನಿವಾಸಿ, ಮೀಂಜ ಪಂಚಾಯತಿ ವ್ಯಾಪ್ತಿಯ 41 ವರ್ಷದ ವ್ಯಕ್ತಿಗಳಿಗೆ ರೋಗನಿರ್ಣಯ ಮಾಡಲಾಗಿದೆ. ಜೂನ್ 30 ರಂದು ಮಂಗಳೂರಿಂದ ಆಗಮಿಸಿದ 41 ವರ್ಷದ ಮೀಂಜ ಪಂಚಾಯತಿ ನಿವಾಸಿ ಮತ್ತು ವರ್ಕಾಡಿ ಪಂಚಾಯತ್‍ನ 13 ವರ್ಷದ ಬಾಲಕ ಕೂಡ ಅನಾರೋಗ್ಯಕ್ಕೆ ಒಳಗಾಗಿದ್ದಾರೆ.


