ತಿರುವಂತಪುರ: ಕೊರೊನಾ ಸೋಂಕು ಕಳೆದ ಮೂರು ದಿನಗಳಿಂದ ರಾಜ್ಯ ವ್ಯಾಪಕವಾಗಿ ಮತ್ತೆ ವ್ಯಾಪಿಸುತ್ತಿದ್ದು, ರೋಗ ಮೂಲಗಳಿಲ್ಲದ ಪ್ರಕರಣ ಹೆಚ್ಚುತ್ತಿರುವುದು ಸಂಶಯಗಳಿಗೆ ಎಡೆಮಾಡಿದೆ.
ರೋಗದ ಮೂಲವನ್ನು ತಿಳಿದಿಲ್ಲದ ರೋಗಿಗಳ ಸಂಖ್ಯೆ ಹೆಚ್ಚುತ್ತಿರುವುದರಿಂದ ಕೇರಳದಲ್ಲಿ ಮತ್ತೆ ಲಾಕ್ ಡೌನ್ ಆಗುವ ಸಾಧ್ಯತೆಯನ್ನು ಎತ್ತಿಹಿಡಿಯುತ್ತಿದೆ. ರಾಜ್ಯದ ಪ್ರಮುಖ ನಗರಗಳಲ್ಲಿ ಸೋಂಕಿತರ ಸಂಖ್ಯೆ ಪ್ರತಿದಿನ ಹೆಚ್ಚುತ್ತಿದೆ. ಕೋವಿಡ್ -19 ನಿನ್ನೆ 225 ಜನರಿಗೆ ದೃಢಪಟ್ಟಿದೆ. ಜೊತೆಗೆ ತಿರುವನಂತಪುರ ಜಿಲ್ಲೆಯ 40 ಸೋಂಕಿತ ಪ್ರಕರಣಗಳಲ್ಲಿ 25 ಮಂದಿಗೆ ಸೋಂಕು ಹೇಗೆ ಉಂಟಾಯಿತೆಂದು ಅರ್ಥವಾಗದ ಸ್ಥಿತಿ ನಿರ್ಮಾಣವಾಗಿದೆ. ಎರ್ನಾಕುಳಂ ಜಿಲ್ಲೆಯಲ್ಲೂ ಇಂತಹದೇ ಸ್ಥಿತಿ ಕಂಡುಬಂದಿದೆ. 42 ಮಂದಿಗಳ ಪೈಕಿ 10 ಮಂದಿಗಳು ಹೇಗೆ ಸೋಂಕಿಗೆ ಒಳಗಾಗಿದ್ದಾರೆಂದು ಸ್ಪಷ್ಟವಾಗಿಲ್ಲ. ಇಂದು ಮತ್ತು ನಾಳೆ ಈ ರೀತಿಯ ಸಂಪರ್ಕ ರೋಗಿಗಳ ಸಂಖ್ಯೆ ಹೆಚ್ಚುವುದೆಂದು ತಜ್ಞರು ಸೂಚನೆ ನೀಡಿದ್ದಾರೆ.
ಶೇ. 90 ನೋಂದಾಯಿತ ವಲಸಿಗರು ಊರಿಗೆ ಮರಳಿದರೆ ಲಾಕ್‍ಡೌನ್ ಅನ್ನು ಮರು ಜಾರಿಗೊಳಿಸಲು ಸರ್ಕಾರ ಚಿಂತಿಸುತ್ತಿದೆ ಎಂದು ವರದಿಗಳು ತಿಳಿಸಿವೆ. ರೋಗದಿಂದ ಬಳಲುತ್ತಿರುವ ಹೆಚ್ಚಿನ ಜನರು ವಿದೇಶದಿಂದ ಬಂದವರು. ಈ ಹಿನ್ನೆಲೆಯಲ್ಲಿಯೇ ಪರೀಕ್ಷೆಯ ಅವಧಿ ಮುಗಿಯುವವರೆಗೂ ಪೂರ್ಣ ಲಾಕ್‍ಡೌನ್ ನಡೆಸಲು ಸರ್ಕಾರ ನಿರ್ಧರಿಸಿದೆ.
ರಾಜಧಾನಿ ಹೆಚ್ಚು ನಿರೀಕ್ಷಣೆಯಲ್ಲಿ:
ಮೂಲವನ್ನು ತಿಳಿಯದ ರೋಗಿಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಜಧಾನಿ ತಿರುವನಂತಪುರ ನಗರ ಸಭಾ ವ್ಯಾಪ್ತಿಯಲ್ಲಿ ಇಂದಿನಿಂದ(ನಿನ್ನೆ ರಾತ್ರಿಯಿಂದಲೇ)ಒಂದು ವಾರಗಳ ತ್ರಿಬಲ್ ಲಾಕ್ ಡೌನ್ ಜಾರಿಗೊಂಡಿದೆ. ಜಾಗರೂಕತೆಯನ್ನು ಪಾಲಿಸಲು ತುರ್ತು ಅಗತ್ಯತೆಗಳನ್ನು ಹೊರತುಪಡಿಸಿ ಇತರ ವ್ಯವಹಾರಕ್ಕೆ ಆಸ್ಪದವಿಲ್ಲ ಎಂದು ಜಿಲ್ಲಾಧಿಕಾರಿ ಹೇಳಿರುವರು. ವೆಲ್ಲನಾಡು ಗ್ರಾಮ ಪಂಚಾಯಿತಿ, ಕಣ್ಣಂಬಳ್ಳಿ ಮತ್ತು ಪಾಲಯಂ ಮಾರುಕಟ್ಟೆಯ ಪಕ್ಕದಲ್ಲಿರುವ ವಾಣಿಜ್ಯ ಪ್ರದೇಶಗಳಲ್ಲಿ ನಿಯಂತ್ರಣವನ್ನು ಬಿಗಿಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹೇಳಿದರು. ಕೋವಿಡ್ 19 ದೃಢಗೊಂಡ ತಿರುವನಂತಪುರಂನ ಪರಿಸ್ಥಿತಿ ಗಂಭೀರವಾಗಿದೆ. ಝೊಮೆಟೋ ಸೇಲ್ಸ್ ಬಾಯ್ ಒಬ್ಬನಿಗೆ ಸೋಂಕು ದೃಢಗೊಂಡ ಬಳಿಕ ಕಂಟೋನ್ಮೆಂಟ್ ಪ್ರದೇಶಗಳನ್ನು ಗುರುತಿಸಿ ಆಹಾರ ಪೂರೈಕೆಯನ್ನು ನಿಲ್ಲಿಸಲಾಗಿದೆ. ಝೊಮೆಟೋ ಡೆಲಿವರಿ ಬಾಯ್ ಮೀನು ಮಾರುಕಟ್ಟೆಯ ಹಿಂದಿನ ಲಾಡ್ಜ್ನಲ್ಲಿ ವಾಸಿಸುತ್ತಿದ್ದನೆಂದು ಗುರುತಿಸಲಾಗಿದೆ.
ಇದಲ್ಲದೆ, ಅವರು ನಗರದ ಅನೇಕ ಪ್ರಮುಖ ಹೋಟೆಲ್‍ಗಳು ಮತ್ತು ಅಪಾರ್ಟ್‍ಮೆಂಟ್‍ಗಳಿಗೆ ಆಹಾರವನ್ನು ಪೂರೈಸಿರುವುದನ್ನು ಪತ್ತೆಹಚ್ಚಲಾಗಿದೆ. ಕ್ಯಾರೆಂಟೈನ್ ನಿವಾಸಿಗಳ ಮನೆಗಳಲ್ಲಿ ಆಹಾರ ವಿತರಣೆಯಿಂದ ಈ ಕಾಯಿಲೆ ಉಂಟಾಗಿರಬಹುದು ಎಂಬುದು ಪ್ರಾಥಮಿಕ ತೀರ್ಮಾನವಾಗಿದೆ.
ಎರ್ನಾಕುಳಂ ನಲ್ಲೂ ರೋಗಿಗಳ ಸಂಖ್ಯೆ ಹೆಚ್ಚಾದರೆ ಟ್ರಿಪಲ್ ಲಾಕ್ ಡೌನ್!:
ಎರ್ನಾಕುಳಂ ಜಿಲ್ಲೆಯಲ್ಲಿ ರೋಗ ನಿಯಂತ್ರಣಕ್ಕೆ ಹೆಚ್ಚಿನ ನಿಬರ್ಂಧಗಳನ್ನು ಜಿಲ್ಲಾಡಳಿತ ಪ್ರಕಟಿಸಿದೆ. ಅಲ್ಲದೆ, ಆಯುಕ್ತ ವಿಜಯ್ ಸಖಾರಿಯ ಅವರು ನಿನ್ನೆ ಕೋವಿಡ್ ಹರಡುವಿಕೆ ಹೆಚ್ಚಾದರೆ ಟ್ರಿಪಲ್ ಲಾಕ್ ಡೌನ್ ಹೇರಲಾಗುವುದೆಂದೂ ಎಂದು ಹೇಳಿದ್ದಾರೆ. ಜಿಲ್ಲೆಯಲ್ಲಿ ಪೆÇಲೀಸ್ ತಪಾಸಣೆ ಬಿಗಿಗೊಳಿಸಲಾಗಿದೆ. ಅನಗತ್ಯ ಸಂಚಾರ ನಿಷೇಧಿಸಲಾಗುತ್ತಿದೆ. ಈವರೆಗೆ ಒಟ್ಟು 20 ಕ್ಕೂ ಹೆಚ್ಚು ಜನರಿಗೆ ದಂಡ ಶುಲ್ಕ ವಿಧಿಸಲಾಗಿದೆ. ತಪಾಸಣೆಯನ್ನು ಬಿಗಿಗೊಳಿಸಲು ಆಯುಕ್ತರು ನಿರ್ಧರಿಸಿದ್ದಾರೆ.
ಸಾಂಕ್ರಾಮಿಕ ರೋಗಗಳ ಅಧಿಸೂಚನೆ ಕಾಯ್ದೆಯನ್ನು ಸರ್ಕಾರ ಬಿಡುಗಡೆ ಮಾಡುವುದೇ?
ರಾಜ್ಯದಲ್ಲಿ ಸಾಂಕ್ರಾಮಿಕ ಕಾನೂನಿನ ಅಧಿಸೂಚನೆಯನ್ನು ಸರ್ಕಾರ ಹೊರಡಿಸುವ ಸೂಚನೆಯೊಂದು ಹೊರಬಿದ್ದಿದೆ. ಸಾರ್ವಜನಿಕ ಸ್ಥಳಗಳಲ್ಲಿ, ಕೆಲಸದ ಸ್ಥಳಗಳಲ್ಲಿ ಮತ್ತು ರಸ್ತೆಯಲ್ಲಿ ಪ್ರಯಾಣಿಸುವ ಜನರು ಮೂಗು ಮತ್ತು ಬಾಯಿಯನ್ನು ಮುಚ್ಚುವ ಮಾಸ್ಕ್ ಧರಿಸಬೇಕು. ಸಾಂಕ್ರಾಮಿಕ ಸುಗ್ರೀವಾಜ್ಞೆಯ ಅಡಿಯಲ್ಲಿ ದಂಡ ವಿಧಿಸಲು ಸಹ ನಿರ್ಧರಿಸಲಾಗಿದೆ.
ಪೂರ್ವ ಲಿಖಿತ ಅನುಮತಿಯಿಲ್ಲದೆ ಧರಣ, ಪ್ರತಿಭಟನೆ, ಮೆರವಣಿಗೆ, ಸಭೆ ಮತ್ತು ಇತರ ಕೂಟಗಳನ್ನು ನಡೆಸಲಾಗುವುದಿಲ್ಲ
ಸಭೆಗಳು ಹತ್ತು ಜನರನ್ನು ಮೀರಬಾರದು.
ಮದುವೆಗಳಲ್ಲಿ ಏಕಕಾಲದಲ್ಲಿ ಗರಿಷ್ಠ 50 ಜನರು ಮಾತ್ರ ಪಾಲ್ಗೊಳ್ಳಬೇಕು
ಮರಣೋತ್ತರ ಸಮಾರಂಭದಲ್ಲಿ 20 ಜನರು ಮಾತ್ರ ಇರಬೇಕು
ಫೇಸ್ ಮಾಸ್ಕ್, ಸ್ಯಾನಿಟೈಜರ್ ಮತ್ತು ಆರು ಅಡಿ ದೂರದ ಅಂತರ ಜನರ ಮಧ್ಯೆ ಕಡ್ಡಾಯ.
ವಾಣಿಜ್ಯ ಸಂಸ್ಥೆಗಳಲ್ಲಿ ನಿಗದಿತ ವೇಳೆ ಗರಿಷ್ಠ 20 ಜನರು ಮಾತ್ರ ಇರಬೇಕು
ಸಾರ್ವಜನಿಕ ಸ್ಥಳಗಳು, ರಸ್ತೆಗಳು ಅಥವಾ ಕಾಲುದಾರಿಗಳಲ್ಲಿ ಉಗುಳಬಾರದು.
ಇತರ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸಂದರ್ಶಕರು ಇ-ಅಲರ್ಟ್‍ಗಳನ್ನು ಸಲ್ಲಿಸಬೇಕು
ಕಳೆದ ಕೆಲವು ದಿನಗಳಿಂದ ಅಂಕಿಅಂಶಗಳನ್ನು ತೆಗೆದುಕೊಂಡರೆ, ಕೇರಳದಲ್ಲಿ ಕೋವಿಡ್ ಬಾಧಿತರ ಸಂಖ್ಯೆಯಲ್ಲಿ ಹೆಚ್ಚಳವಿದೆ. ಕೋವಿಡ್ ಎರಡು ದಿನಗಳಲ್ಲಿ 200 ಕ್ಕೂ ಹೆಚ್ಚು ಜನರನ್ನು ಬಾಧಿಸಿದೆ. ರೋಗವನ್ನು ವರದಿ ಮಾಡುವವರಲ್ಲಿ ಸುಮಾರು 85 ಪ್ರತಿಶತದಷ್ಟು ಜನರು ವಿದೇಶದಿಂದ ಅಥವಾ ಇತರ ರಾಜ್ಯಗಳಿಂದ ಬಂದವರು. ಪ್ರಸ್ತುತ ಪರಿಸ್ಥಿತಿ ಮುಂದುವರಿದರೆ ಕೇರಳ ಮತ್ತೆ ಲಾಕ್ ಡೌನ್ ಆಗಲಿದೆ ಎಂದು ವರದಿಗಳು ತಿಳಿಸಿವೆ.