ಕಾಸರಗೋಡು : ಕಾಸರಗೋಡು ಜಿಲ್ಲೆಯಲ್ಲಿ ಕೋವಿಡ್ ಸೋಂಕು ಆರಂಭಗೊಂಡಂದಿನಿಂದ ಈ ವರೆಗೆ ಲಾಕ್‍ಡೌನ್ ಬಂತು, ಅನ್‍ಲಾಕ್ ಬಂತು, ಆದರೂ ಇಂದಿಗೂ ವಿಶ್ರಾಂತಿ ಏನೆಂದೇ ಅರಿಯದೆ ಇನ್ನೂ ಸಕ್ರಿಯವಾಗಿ ಕೋವಿಡ್ ನಿಯಂತ್ರಣ ಕೊಠಡಿ ತೊಡಗಿಕೊಂಡಿದೆ.
ಕೋವಿಡ್ ಸೋಂಕಿನ ಆರಂಭ ಹಂತದಲ್ಲಿ ಅತ್ಯ„ಕ ಬಾ„ತರನ್ನು ಹೊಂದಿದ್ದ ಜಿಲ್ಲೆ ಎಂಬ ಕುಖ್ಯಾತಿಯನ್ನು ಹೊಂದಿದ್ದ ಕಾಸರಗೋಡು, ಪ್ರತಿರೋಧ ಚಟುವಟಿಕೆಗಳಲ್ಲಿ ಮಾದರಿಯೆನಿಸಿರುವುದು ಈಗ ಇತಿಹಾಸದಲ್ಲಿ ಮಹತ್ವಿಕೆ ಪಡೆದ ವಿಚಾರ. ಪೂರ್ಣರೂಪದ ಲಾಕ್‍ಡೌನ್ ಮೂಲಕ ಸೋಂಕು ನಿಯಂತ್ರಣ ಸಾಧ್ಯವಾದ ವೇಳೆ ಈ ಯಶಸ್ಸಿಗೆ ದೊಡ್ಡ ಪಾಲು ಒದಗಿಸಿದ್ದು ಕೊರೊನಾ ಕಂಟ್ರೋಲ್ ರೂಂ ಆಗಿದೆ. ಮೂರೂವರೆ ತಿಂಗಳ ಈ ಅವ„ಯಲ್ಲಿ ನಡೆದ ಪರಿಸ್ಥಿತಿಯ ಹಲವು ರೀತಿಯ ರೂಪಾಂತರಗಳಲ್ಲಿ ಸಂದರ್ಭೋಚಿತ ಚಟುವಟಿಕೆಗಳ ಮೂಲಕ ಕಾಸರಗೋಡು ಕೊರೊನಾ ನಿಯಂತ್ರಣ ಕೊಠಡಿ ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದ್ದು, ಈಗಲೂ ಅದೇ ಛಾಪಿನೊಂದಿಗೆ ಮುಂದುವರಿಯುತ್ತಿದೆ.
ಕಾಸರಗೋಡು ಜಿಲ್ಲಾಧಿಕಾರಿ ಕಚೇರಿಯ ಜಿಲ್ಲಾ ದುರಂತ ನಿವಾರಣೆ ಪ್ರಾ„ಕಾರದ ವ್ಯಾಪ್ತಿಯಲ್ಲಿ ಮಾ.16ರಂದು ಕೊರೊನಾ ನಿಯಂತ್ರಣ ಕೊಠಡಿ ತನ್ನ ಚಟುವಟಿಕೆ ಆರಂಭಿಸಿತ್ತು. ಜಿಲ್ಲಾ„ಕಾರಿ ಡಾ.ಡಿ.ಸಜಿತ್ ಬಾಬು ಅವರ ಪ್ರತ್ಯಕ್ಷ ಮೇಲ್ನೋಟದಲ್ಲಿ 24 ತಾಸುಗಳೂ ಈ ಕೊಠಡಿ ಚಟುವಟಿಕೆ ನಡೆಸುತ್ತಾ ಬಂದಿದೆ. ಮೊದಲ ಹಂತದಲ್ಲಿ 13 ಮಂದಿ ವಿವಿಧ ಪಾಳಿಗಳಲ್ಲಿ (ಶಿಫ್ಟ್) ಕಾರ್ಯಪ್ರವೃತ್ತ್ತರಾಗಿದ್ದರು. ಐಟಿ ಸ್ಕೂಲ್‍ನಿಂದ 7 ಮಂದಿ ಶಿಕ್ಷಕರು, ಕಂದಾಯ ವಿಭಾಗದಿಂದ ಇಬ್ಬರು ಸಿಬ್ಬಂದಿಗಳು, ಸಮಾಜ ಸುರಕ್ಷಾ ಮಿಷನ್‍ನಿಂದ ಮೂವರು ಸಿಬ್ಬಂದಿಗಳು, ಶಿಕ್ಷಣ ಡೆಪ್ಯೂಟಿ ಡೈರೆಕ್ಟರೇಟ್‍ನಿಂದ ಒಬ್ಬರು ಎಂಬಂತೆ ಇಲ್ಲಿ ಕರ್ತವ್ಯ ನಡೆಸುತ್ತಿದ್ದಾರೆ.
ರೂಟ್ ಮ್ಯಾಪ್ ನೊಂದಿಗೆ ಆರಂಭ : ಆರಂಭದ ಹಂತದಲ್ಲಿ ಕೋವಿಡ್ ಸೋಂಕು ಬಾಧಿತರ ರೂಟ್ ಮ್ಯಾಪ್ ಸಿದ್ಧಪಡಿಸುವ ಮೂಲಕ ಕೋವಿಡ್ ಕಂಟ್ರೋಲ್ ರೂಂ ಚಟುವಟಿಕೆಗೆ ತೊಡಗಿತ್ತು. ಮಾ.17ರಂದು ಕಾಸರಗೋಡು ಜಿಲ್ಲೆಯಲ್ಲಿ ಮೊದಲ ರೂಟ್ ಮ್ಯಾಪ್ ಸಿದ್ಧಗೊಂಡಿತ್ತು. ರಾಜ್ಯದಲ್ಲಿ ಲಾಕ್‍ಡೌನ್ ಆದೇಶ ಜಾರಿಗೊಂಡ ಮೇಲೆ (ಮಾ.26 ರಿಂದ) ರೂಟ್ ಮ್ಯಾಪ್ ತಯಾರಿಸುವ ಕಾಯಕ ನಿಲುಗಡೆಗೊಂಡಿತ್ತು. ಲಾಕ್‍ಡೌನ್ ಅವ„ಯಲ್ಲಿ ಸಂಕಷ್ಟ ಅನುಭವಿಸುವ ಮಂದಿಗೆ ಸಹಾಯ ಒದಗಿಸುವುದು ನಂತರದ ದೌತ್ಯವಾಗಿತ್ತು. ಆಹಾರ, ಔಷಧ ವಿತರಣೆ, ಪ್ರಯಾಣ ಪಾಸ್ ಒದಗಿಸುವುದು ಮೊದಲಾದವುಗಳಿಗೆ ಈ ವೇಳೆ ಆದ್ಯತೆ ನೀಡಲಾಗಿತ್ತು. ಲಾಕ್‍ಡೌನ್ ಅವ„ಯಲ್ಲಿ ಹೊತ್ತಿನ ಆಹಾರಕ್ಕೂ ತತ್ವಾರ ಅನುಭವಿಸುತ್ತಿದ್ದ ಮಂದಿಗೆ ಭೋಜನ ಪೂರೈಕೆ ಮಾಡುವ ಚಟುವಟಿಕೆ ವ್ಯಾಪಕವಾಗಿ ನಡೆದಿತ್ತು. ಅದರಲ್ಲೂ ಇತರ ರಾಜ್ಯಗಳ ಕಾರ್ಮಿಕರಿಗೆ ಆದ್ಯತೆ ನೀಡಲಾಗಿತ್ತು. ಆಹಾರ, ಔಷಧ ಅಗತ್ಯವಿರುವವರು ಸಂಪರ್ಕ ನಡೆಸಲು ಮೂರು ದೂರವಾಣಿ ನಂಬ್ರ ಮೂಲಕ ಸಂಪರ್ಕಿಸಬಹುದಾದ ಸೌಲಭ್ಯ ಏರ್ಪಡಿಸಲಾಗಿತ್ತು. ಭೋಜನ ಸಿದ್ಧತೆಗೆ ವಾರ್ಡ್ ಸದಸ್ಯರನ್ನು, ಸಮುದಾಯ ಅಡುಗೆ ಮನೆಗಳನ್ನು ಸದ್ಬಳಕೆ ನಡೆಸಲಾಯಿತು. ಎಲ್.ಐ.ಸಿ.ಯ, ಪೆÇಲೀಸರ ಸಹಕಾರದೊಂದಿಗೆ ರೋಗಿಗಳಿಗೆ ಔಷಧ ವಿತರಣೆ ನಡೆಸಲಾಗಿತ್ತು. ಮಾ.26ರಂದು ಆರಂಭಗೊಂಡ ಈ ಚಟುವಟಿಕೆ ಬೇಡಿಕೆದಾರರಿಲ್ಲದೇ ಇರುವ ಕಾರಣ ಮೇ 6 ರಂದು ನಿಲುಗಡೆ ಮಾಡಲಾಯಿತು. ಈ ಅವ„ಯಲ್ಲಿ 1972 ಮಂದಿ ಕಂಟ್ರೋಲ್ ರೂಂಗೆ ಆಹಾರಕ್ಕಾಗಿ ಕರೆಮಾಡಿದ್ದರು ಮತ್ತು ಪೂರ್ಣ ರೂಪದ ಫಲ ಪಡೆದಿದ್ದರು. ಔಷಧಕ್ಕಾಗಿ 113 ಮಂದಿ ಸಹಾಯ ಪಡೆದಿದ್ದರು.
ಲಾಕ್‍ಡೌನ್ ಅವಧಿಯಲ್ಲಿ ವ್ಯಾಪಾರಿಗಳು, ಅನಿವಾರ್ಯ ಸೇವೆ ವಲಯದಲ್ಲಿ ಸೇರ್ಪಡೆಗೊಂಡವರು, ಸ್ವಯಂಸೇವಕರಿಗೆ ಸಂದರ್ಭೋಚಿತವಾಗಿ ಪಾಸ್ ಒದಗಿಸಲಾಗಿತ್ತು. ಅಗತ್ಯ ಸೇವೆ, ರಖಂ ವಿತರಕರು, ವ್ಯಾಪಾರಿಗಳು, ರೋಗಿಗಳು ಹೀಗೆ 4 ವಿಭಾಗಗಳಲ್ಲಿ ಪಾಸ್ ವಿತರಣೆ ನಡೆಸಲಾಗಿತ್ತು. ಅನಿವಾರ್ಯ ಪರಿಸ್ಥಿತಿ ಇದ್ದವರಿಗೆ ಪಾಸ್ ಪಡೆಯುವ ನಿಟ್ಟಿನಲ್ಲಿ ಮೂರು ದೂರವಾಣಿ ಸಂಖ್ಯೆಗಳನ್ನು ಪ್ರಕಟಿಸಲಾಗಿತ್ತು. ಮಾ.25ರಂದು ಮೊದಲ ಪಾಸ್ ಮಂಜೂರು ಮಾಡಲಾಗಿತ್ತು. ಲಾಕ್‍ಡೌನ್ ಆದೇಶದಲ್ಲಿ ಸಡಿಲಿಕೆ ನಡೆಸಿದ ನಂತರ ಮೇ 16ರಂದು ಪಾಸ್ ವಿತರಣೆ ನಿಲುಗಡೆ ಮಾಡಲಾಗಿತ್ತು. ಅರ್ಜಿದಾರರ ಮಾಹಿತಿ ಪಾಸ್ ಒದಗಿಸುವ ನಿಟ್ಟಿನಲ್ಲಿ ತಾಲೂಕುಗಳಿಗೆ ಹಸ್ತಾಂತರಿಸಲಾಗುತ್ತಿತ್ತು. ಈ ಅವ„ಯಲ್ಲಿ ಒಟ್ಟು 5849 ಮಂದಿ ಅರ್ಜಿ ಸಲ್ಲಿಸಿದ್ದು, 5582 ಮಂದಿಗೆ ಪಾಸ್ ಮಂಜೂರು ಮಾಡಲಾಗಿತ್ತು. ಅಗತ್ಯ ಸೇವೆಗಳಿಗೆ 2518 ಪಾಸ್, ರಖಂ ವ್ಯಾಪಾರಿಗಳಿಗೆ 943 ಪಾಸ್, ಇತರ ವ್ಯಾಪಾರಿಗಳಿಗೆ 1955, ರೋಗಿಗಳಿಗೆ 166 ಪಾಸ್ ವಿತರಿಸಲಾಗಿತ್ತು.
ನಿತ್ಯ ಸುಮಾರು 1800 ಕರೆಗಳು : ಮೊದಲ ಹಂತದಿಂದಲೇ ಕೋವಿಡ್ ಸಂಬಂಧ ಸಾರ್ವಜನಿಕರ ಎಲ್ಲ ರೀತಿಯ ಸಂದೇಹಗಳಿಗೆ ಉತ್ತರ ನೀಡುವ ಹೊಣೆಗಾರಿಕೆ ಕಂಟ್ರೋಲ್ ರೂಂ ನಿರ್ವಹಿಸಿಕೊಂಡು ಬಂದಿದೆ. ಮೂರು ದೂರವಾಣಿ ನಂಬ್ರ ಮೂಲಕ ಮಿನಿಷಕ್ಕೆ ಮೂರು ಕರೆಗಳು ಬರುತ್ತಿದ್ದುವು. ಈ ಮೂಲಕ ದಿನಂಪ್ರತಿ ಸುಮಾರು 1800 ಕರೆಗಳು ಈ ಕೊಠಡಿಗೆ ಬರುತ್ತಿದ್ದುವು. ವ್ಯಾಪಾರಿ ಸಂಸ್ಥೆಗಳನ್ನು ತೆರೆಯಬಹುದೇ, ಯಾವೆಲ್ಲ ದಿನಗಳಲ್ಲಿ ರಿಯಾಯಿತಿ ಇದೆ, ಔಷಧ ಲಭ್ಯತೆಗೆ ಹಾದಿಯೇನು, ಪಾಸ್ ಪಡೆಯುವ ವಿಧಾನ ಹೇಗೆ, ಕಂಟೈನ್ ಮೆಂಟ್ ಝೋನ್‍ಗಳು ಯಾವುವು ಇತ್ಯಾದಿ ಪ್ರಶ್ನೆಗಳಿಗೆ ಇಲ್ಲಿ ಉತ್ತರ ನೀಡಲಾಗುತ್ತಿತ್ತು. ಇತರ ಇಲಾಖೆಗಳ ಸಹಾಯ ಅಗತ್ಯವಿದ್ದರೆ ಸಂಬಂಧಪಟ್ಟ ಅ„ಕಾರಿಗಳಿಗೆ ಮಾಹಿತಿ ನೀಡಲಾಗುತ್ತಿತ್ತು.
ದೇಶದಲ್ಲಿ ಲಾಕ್‍ಡೌನ್ ಆದೇಶದಲ್ಲಿ ಸಡಿಲಿಕೆ ನಡೆಸಿದ ನಂತರ ಇತರ ರಾಜ್ಯಗಳಿಂದ ಕೇರಳೀಯರು ಊರಿಗೆ ಮರಳಲು ತೊಡಗಿರುವ ವೇಳೆ ಮೊದಲ ಹಂತ ಆರಂಭಗೊಂಡಿದೆ. ಕೋವಿಡ್ 19 ಜಾಗ್ರತಾ ಪೆÇೀರ್ಟಲ್‍ನಲ್ಲಿ ಪಾಸ್‍ಗಾಗಿ ನೋಂದಣಿ ನಡೆಸುವವರ ನಂತರದ ಪ್ರಕ್ರಿಯೆಗಳನ್ನು ಕೋವಿಡ್ ನಿಯಂತ್ರಣ ಕೊಠಡಿಯಲ್ಲಿ ನಿಯಂತ್ರಿಸಲಾಗುತ್ತದೆ. ಹೆಚ್ಚುವರಿ ದಂಡನಾ„ಕಾರಿ, ಉಪ ಜಿಲ್ಲಾ„ಕಾರಿ ಪಾಸ್ ಮಂಜೂರಾತಿಗೆ ಅಗತ್ಯದ ಕಾರಣದ ಬಗ್ಗೆ ತಪಾಸಣೆ ನಡೆಸುತ್ತಾರೆ. ಅರ್ಜಿದಾರರಿಗೆ ಸಂದೇಹಗಳಿದ್ದಲ್ಲಿ ಕಂಟ್ರೋಲ್ ರೂಂನಲ್ಲಿ ಪರಿಹರಿಸಲಾಗುತ್ತದೆ.


