ತಿರುವನಂತಪುರ: ಎರ್ನಾಕುಳಂ ನ ಕಂಟೋನ್ಮೆಂಟ್ ವಲಯದಲ್ಲಿ ಮಲೆಯಾಳ ಚಲನಚಿತ್ರ ತಾರೆಯರ ಸಂಘಟನೆಯಾದ "ಅಮ್ಮ"ದ ಸಭೆಯೊಂದು ಸ್ಟಾರ್ ಹೋಟೆಲೊಂದರಲ್ಲಿ ಭಾನುವಾರ ಆಯೋಜನೆಗೊಂಡಿತು. ಸಭೆಯ ಬಗ್ಗೆ ಮಾಹಿತಿ ಪಡೆದ ಪೆÇಲೀಸರು ಸಭೆಯನ್ನು ಮುಂದೂಡಬೇಕು, ಕಾರಣಕ್ಕೂ ಈ ವಲಯದಲ್ಲಿ ಸಭೆ ನಡೆಸಕೂಡದೆಂದು ಆದೇಶ ನೀಡಿದ ಘಟನೆ ನಡೆದಿದೆ. ಪೆÇಲೀಸರ ಆದೇಶದ ಹಿನ್ನೆಲೆಯಲ್ಲಿ ಸಭೆಯನ್ನು ಮುಂದೂಡಲಾಯಿತೆಂದು ತಿಳಿದುಬಂದಿದೆ.
ಕೊಚ್ಚಿಯ ಹಾಲಿಡೇ ಇನ್ ನಲ್ಲಿ ಭಾನುವಾರ ಸಭೆ ಆಯೋಜಿಸಲಾಗಿತ್ತು. ಸಭೆಯ ಬಳಿಕ ಅಪರಾಹ್ನ 3 ಕ್ಕೆ ಸಭೆಯ ನಿರ್ಧಾರಗಳನ್ನು ಮಾಧ್ಯಮಗಳಿಗೆ ತಿಳಿಸಲಾಗುವುದೆಂದು ಅಮ್ಮ ಸಂಘಟನೆನೆ ಪ್ರಕಟಣೆಯಲ್ಲಿ ತಿಳಿಸಿತ್ತು. ಆದರೆ ಕಂಟೈನ್‍ಮೆಂಟ್ ವಲಯದಲ್ಲಿ ಸಭೆ ನಡೆಸಲಾಗುತ್ತಿದೆ ಎಂಬ ಸುದ್ದಿ ತಿಳಿದ ಕೊಚ್ಚಿ ಮೇಯರ್ ಸೌಮಿನಿ ಜೈನ್ ಅವರು ಬೇರೆಡೆಗೆ ಸಭೆ ಸ್ಥಳಾಂತರಿಸುವಂತೆ ತಿಳಿಸಿದ್ದರು. ಆದರೆ ಇದಕ್ಕೆ ಸಮ್ಮತರಿಸದ ಅಮ್ಮ ಸಂಘಟನೆ ಸಭೆಯನ್ನು ಮುಂದೂಡಿತು ಎಂದು ಮೂಲಗಳಿಂದ ತಿಳಿದುಬಂದಿದೆ.
ಹೋಟೆಲ್ ನೆಡುಂಬಾಶ್ಚೇರಿ ವಿಮಾನ ನಿಲ್ದಾಣದಿಂದ ಬರುವವರಿಗೆ ಕ್ಯಾರೆಂಟೈನ್ ಕೇಂದ್ರವಾಗಿಯೂ ಕಾರ್ಯವೆಸಗುತ್ತಿದೆ ಎಂದು ಕೊಚ್ಚಿ ಪುರಸಭೆ ತಿಳಿಸಿದೆ.


