ಕಾಸರಗೋಡು: ಕೋವಿಡ್ ವರದಿಗೆ ಸಂಬಂಧಿಸಿ ಮಂಗಳವಾರ ಕಾಸರಗೋಡಿನ ಪಾಲಿಗೆ ಅಮಂಗಲಕರವಾಗಿ ಬದಲಾಗಿದ್ದು ಇಂದು ಕೋವಿಡ್ ದೃಢಪಟ್ಟ 40 ಮಂದಿಗಳಲ್ಲಿ 37 ಮಂದಿಗೂ ಸಂಪರ್ಕದ ಮೂಲಕ ಸೋಂಕು ಬಾಧಿಸಿರುವುದು ತೀವ್ರ ಆತಂಕಕ್ಕೆ ಕಾರಣವಾಗಿದೆ. ಇವರಲ್ಲಿ ಮೂವರು ಆರೋಗ್ಯ ಕಾರ್ಯಕರ್ತರು, ಮೂವರ ಸಂಪರ್ಕ ಮೂಲ ಪತ್ತೆಯಾಗಿಲ್ಲ. ಇತರ ಬಾಧಿತರಲಲಿ ಇಬ್ಬರು ವಿದೇಶದಿಂದ, ಒಬ್ಬರು ಕರ್ನಾಟಕದಿಂದ ಬಂದವರು ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು.
ಸಂಪರ್ಕದಿಂದ ಸೋಂಕು : ಕಾಸರಗೋಡು ನಗರಸಭೆಯ 46, 42, 23, 20, 28, 61, 26 ವರ್ಷದ ಪುರುಷರು (ಪ್ರಾಥಮಿಕ ಸಂಪರ್ಕ). ಮಧೂರು ಗ್ರಾಮಪಂಚಾಯತ್‍ನ 26 ವರ್ಷದ ಮಹಿಳೆ(ಆರೋಗ್ಯ ಕಾರ್ಯಕರ್ತೆ), 51 ವರ್ಷದ ಪುರುಷ(ಪ್ರಾಥಮಿಕ ಸಂಪರ್ಕ), ಚೆಂಗಳ ಪಂಚಾಯತ್‍ನ ಒಂದೇ ಕುಟುಂಬದ 15 ವರ್ಷದ ಬಾಲಕ, 19 ವರ್ಷದ ಪುರುಷ, 15 ವರ್ಷದ ಬಾಲಕಿ, 60 ವರ್ಷದ ಪುರುಷ, ಒಂದೇ ಕುಟುಂಬದ 40, 28 ವರ್ಷದ ಮಹಿಳೆಯರು, 15 ವರ್ಷದ ಬಾಲಕಿ, ಕುಂಬಳೆ ಪಂಚಾಯತ್‍ನ 38 ವರ್ಷದ ಮಹಿಳೆ(ಆರೋಗ್ಯ ಕಾರ್ಯಕರ್ತೆ), ಒಂದೇ ಕುಟುಂಬದ 36,17 ವರ್ಷದ ಮಹಿಳೆಯರು, 14, 6, ಒಂದೂವರೆ ವರ್ಷದ ಬಾಲಕರು, 24,64,31 ವರ್ಷದ ಪುರುಷರು(ಪ್ರಾಥಮಿಕ ಸಂಪರ್ಕ), ಒಂದೇ ಕುಟುಂಬದ 7,2 ವರ್ಷದ ಬಾಲಕಿಯರು, 24,21,20 ವರ್ಷದ ಪುರುಷರು(ಪ್ರಾಥಮಿಕ ಸಂಪರ್ಕ), 23 ವರ್ಷದ ಮಹಿಳೆ(ಆರೋಗ್ಯ ಕಾರ್ಯಕರ್ತೆ), ಮಡಿಕೈ ಪಂಚಾಯತ್‍ನ 25 ವರ್ಷದ ಮಹಿಳೆ(ಪ್ರಾಥಮಿಕ ಸಂಪರ್ಕ), ಕಿನಾನೂರು - ಕರಿಂದಳಂ ಪಂಚಾಯತ್ ನ 21 ವರ್ಷದ ಪುರುಷ (ಸಂಪರ್ಕ ಮೂಲ ಪತ್ತೆಯಾಗಿಲ್ಲ), ನೀಲೇಶ್ವರ ನಗರಸಭೆಯ 75,35 (ಸಂಪರ್ಕ ಮೂಲ ಪತ್ತೆಯಾಗಿಲ್ಲ) ವರ್ಷದ ಪುರುಷರು ಸೋಂಕು ಬಾಧೆಗೊಳಗಾದವರು.
ವಿದೇಶದಿಂದ ಬಂದವರು : ಸೌದಿಯಿಂದ ಆಗಮಿಸಿದ್ದ ಕುಂಬಳೆ ಪಂಚಾಯತ್‍ನ 39, ಪುಲ್ಲೂರು-ಪೆರಿಯ ಪಂಚಾಯತ್‍ನ 33 ವರ್ಷದ ಪುರುಷರು ರೋಗ ಬಾ„ತರು.
ಇತರ ರಾಜ್ಯದಿಂದ ಆಗಮಿಸಿದವರು : ಕರ್ನಾಟಕದಿಂದ ಬಂದಿದ್ದ ಕಾರಡ್ಕ ಪಂಚಾಯತ್‍ನ 25 ವರ್ಷದ ನಿವಾಸಿ ಸೋಂಕು ತಗುಲಿದವರು.
5109 ಮಂದಿ ನಿಗಾದಲ್ಲಿ : ಕಾಸರಗೋಡು ಜಿಲ್ಲೆಯಲ್ಲಿ ಕೋವಿಡ್ 19 ಸಂಬಂಧ 5109 ಮಂದಿ ನಿಗಾದಲ್ಲಿದ್ದಾರೆ ಎಂದು ಆರೋಗ್ಯ ಇಲಾಖೆಯ ಗಣನೆ ತಿಳಿಸಿದೆ. ಇವರಲ್ಲಿ 4250 ಮಂದಿ ಮನೆಗಳಲ್ಲಿ, 859 ಮಂದಿ ಸಾಂಸ್ಥಿಕವಾಗಿ ನಿಗಾದಲ್ಲಿರುವರು. ನೂತನವಾಗಿ ಮಂಗಳವಾರ 320 ಮಂದಿ ನಿಗಾ ಪ್ರವೇಶಿಸಿದ್ದಾರೆ. 396 ಮಂದಿ ತಮ್ಮ ನಿಗಾ ಅವ„ ಪೂರ್ಣಗೊಳಿಸಿದ್ದಾರೆ. ಜಿಲ್ಲೆಯಲ್ಲಿ 435 ಮಂದಿಯ ಸ್ಯಾಂಪಲ್ ತಪಾಸಣೆಗೆ ಕಳುಹಿಸಲಾಗಿದೆ. 670 ಮಂದಿಯ ಸ್ಯಾಂಪಲ್ ಲಭಿಸಿಲ್ಲ.
6 ಮಂದಿಗೆ ಕೋವಿಡ್ ನೆಗೆಟಿವ್ : ಕಾಸರಗೋಡು ಜಿಲ್ಲೆಯಲ್ಲಿ ಮಂಗಳವಾರ 7 ಮಂದಿಗೆ ಕೋವಿಡ್ ನೆಗೆಟಿವ್ ಆಗಿದೆ.
ಉದಯಗಿರಿ ಸಿ.ಎಫ್.ಎಲ್.ಟಿ.ಸಿ.ಯಲ್ಲಿ ದಾಖಲಾಗಿದ್ದ ಚೆಂಗಳ ಪಂಚಾಯತ್‍ನ 20,25 ವರ್ಷದ ಮಹಿಳೆಯರು, ಕಾಸರಗೋಡು ನಗರಸಭೆಯ 41 ವರ್ಷದ ಮಹಿಳೆ, ಮುಳಿಯಾರು ಪಂಚಾಯತ್‍ನ 35 ವರ್ಷದ ಪುರುಷ, ಕುಂಬ್ಡಾಜೆ ಪಂಚಾಯತ್ ನ 25 ವರ್ಷದ ಮಹಿಳೆ. ಉಕ್ಕಿನಡ್ಕ ಕಾಸರಗೋಡು ಮೆಡಿಕಲ್ ಕಾಲೇಜಿನಲ್ಲಿ ದಾಖಲಾಗಿದ್ದ ವರ್ಕಾಡಿ ಪಂಚಾಯತ್‍ನ 13 ವರ್ಷದ ಬಾಲಕಿ.
ಕೇರಳದಲ್ಲಿ 720 ಮಂದಿಗೆ ಸೋಂಕು : ಕೇರಳ ರಾಜ್ಯದಲ್ಲಿ ಮಂಗಳವಾರ 720 ಮಂದಿಗೆ ಕೊರೊನಾ ವೈರಸ್ ಸೋಂಕು ದೃಢೀಕರಿಸಲಾಗಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದ್ದಾರೆ. ಇದೇ ವೇಳೆ 274 ಮಂದಿ ಗುಣಮುಖರಾಗಿದ್ದಾರೆ. ರೋಗ ಬಾ„ತರಲ್ಲಿ 82 ಮಂದಿ ವಿದೇಶದಿಂದ ಹಾಗು 54 ಮಂದಿ ಇತರ ರಾಜ್ಯಗಳಿಂದ ಬಂದವರು. 528 ಮಂದಿಗೆ ಸಂಪರ್ಕದಿಂದ ರೋಗ ಬಾ„ಸಿದೆ. 17 ಮಂದಿ ಆರೋಗ್ಯ ಕಾರ್ಯಕರ್ತರಿಗೆ, 29 ಮಂದಿ ಡಿಎಸ್‍ಇ ಸಿಬ್ಬಂದಿಗಳು, 4 ಮಂದಿ ಐಟಿಬಿಪಿ ಸಿಬ್ಬಂದಿಗಳು, ಒಬ್ಬರು ಕೆಎಲ್‍ಎಫ್ ಸಿಬ್ಬಂದಿ ಹಾಗು ನಾಲ್ವರು ಕೆಎಸ್‍ಇ ಸಿಬ್ಬಂದಿಗಳಿಗೆ ರೋಗ ಬಾ„ಸಿದೆ. ಮಂಗಳವಾರ ತಿರುವನಂತಪುರ ಜಿಲ್ಲೆಯ ಪುಲ್ಲುವಿಳಯಿಲ್ ವಿಕ್ಟೋರಿಯ(72) ಸಾವಿಗೀಡಾಗಿದ್ದು, ಇದರೊಂದಿಗೆ ಸಾವಿಗೀಡಾದವರ ಸಂಖ್ಯೆ 44ಕ್ಕೇರಿತು.
ತಿರುವನಂತಪುರ-151, ಕೊಲ್ಲಂ-85, ಆಲಪ್ಪುಳ-46, ಪತ್ತನಂತಿಟ್ಟ-40, ಕೋಟ್ಟಯಂ-39, ತೃಶ್ಶೂರು-19, ಪಾಲ್ಘಾಟ್-46, ಮಲಪ್ಪುರಂ-61, ಕಲ್ಲಿಕೋಟೆ-39, ಕಣ್ಣೂರು-57, ವಯನಾಡು-17, ಕಾಸರಗೋಡು-40 ಎಂಬಂತೆ ರೋಗ ಬಾಧಿಸಿದೆ.
ತಿರುವನಂತಪುರ-11, ಕೊಲ್ಲಂ-11, ಆಲಪ್ಪುಳ-70, ಇಡುಕ್ಕಿ-5, ಕೋಟ್ಟಯಂ-10, ಎರ್ನಾಕುಳಂ-7, ತೃಶ್ಶೂರು-6, ಪಾಲ್ಘಾಟ್-34, ಮಲಪ್ಪುರಂ-51, ಕಲ್ಲಿಕೋಟೆ-39, ಕಣ್ಣೂರು-10, ವಯನಾಡು-14, ಕಾಸರಗೋಡು-6 ಎಂಬಂತೆ ಗುಣಮುಖರಾಗಿದ್ದಾರೆ.
ಮಾಸ್ಕ್ ಧರಿಸದ 234 ಮಂದಿ ವಿರುದ್ಧ ಕೇಸು : ಮಾಸ್ಕ್ ಧರಿಸದೇ ಇದ್ದ ಪ್ರಕರಣಕ್ಕೆ ಸಂಬಂಧಿಸಿ ಕಾಸರಗೋಡು ಜಿಲ್ಲೆಯಲ್ಲಿ 234 ಮಂದಿ ವಿರುದ್ಧ ಕೇಸು ದಾಖಲಿಸಲಾಗಿದೆ. ಈ ಮೂಲಕ ಈ ಪ್ರಕರಣಗಳಿಗೆ ಸಂಬಂಧಿಸಿ ಕಾಸರಗೋಡು ಜಿಲ್ಲೆಯಲ್ಲಿ ದಾಖಲಾದ ಕೇಸುಗಳ ಸಂಖ್ಯೆ 13864 ಆಗಿದೆ.
ಲಾಕ್ ಡೌನ್ ಉಲ್ಲಂಘನೆ : 24 ಕೇಸುಗಳ ದಾಖಲು : ಲಾಕ್‍ಡೌನ್ ಆದೇಶ ಉಲ್ಲಂಘಿಸಿದ ಆರೋಪಕ್ಕೆ ಸಂಬಂಧಿಸಿ ಕಾಸರಗೋಡು ಜಿಲ್ಲೆಯಲ್ಲಿ 24 ಕೇಸುಗಳನ್ನು ದಾಖಲಿಸಲಾಗಿದೆ. 37 ಮಂದಿಯನ್ನು ಬಂ„ಸಲಾಗಿದ್ದು, ಒಂದು ವಾಹನವನ್ನು ವಶಪಡಿಸಲಾಗಿದೆ. ಮಂಜೇಶ್ವರ ಪೆÇಲೀಸ್ ಠಾಣೆಯಲ್ಲಿ 2 ಕೇಸುಗಳು, ಕುಂಬಳೆ 1, ಕಾಸರಗೋಡು 3, ವಿದ್ಯಾನಗರ 2, ಬದಿಯಡ್ಕ 1, ಮೇಲ್ಪರಂಬ 1, ಬೇಕಲ 1, ಅಂಬಲತ್ತರ 1, ಹೊಸದುರ್ಗ 4, ನೀಲೇಶ್ವರ 2, ಚಂದೇರ 1, ವೆಳ್ಳರಿಕುಂಡ್ 2, ಚಿತ್ತಾರಿಕಲ್ 1, ರಾಜಪುರಂ 1 ಕೇಸುಗಳು ದಾಖಲಾಗಿವೆ.
ಈ ಮೂಲಕ ಕಾಸರಗೋಡು ಜಿಲ್ಲೆಯಲ್ಲಿ ಈ ಪ್ರಕರಣಗಳಿಗೆ ಸಂಬಂಧಿಸಿ ಈ ವರೆಗೆ ದಾಖಲಾದ ಕೇಸುಗಳ ಸಂಖ್ಯೆ 3164 ಆಗಿದೆ. 4207 ಮಂದಿಯನ್ನು ಬಂಧಿಸಲಾಗಿದ್ದು, 1276 ವಾಹನಗಳನ್ನು ವಶಪಡಿಸಲಾಗಿದೆ.


