ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಶುಕ್ರವಾರ 17 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ. ಇವರಲ್ಲಿ ಸಂಪರ್ಕ ಮೂಲಕ 11 ಮಂದಿಗೆ ಸೋಂಕು ತಗುಲಿದೆ. ಮೂವರು ಇತರ ರಾಜ್ಯಗಳಿಂದ, ಮೂವರು ವಿದೇಶದಿಂದ ಬಂದವರು ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು.
ಕಾಸರಗೋಡು ನಗರದ ತರಕಾರಿ ಅಂಗಡಿಯೊಂದರಲ್ಲಿ ನೌಕರಿ ನಡೆಸುತ್ತಿರುವ 22 ಮತ್ತು 24 ವರ್ಷದ ಚೆಂಗಳ ಪಂಚಾಯತ್ ನಿವಾಸಿಗಳು, ಮಧೂರು ಪಂಚಾಯತ್‍ನ 46 ಮತ್ತು 28 ವರ್ಷದ ನಿವಾಸಿಗಳು, ಕಾಸರಗೋಡು ನಗರಸಭೆ ವ್ಯಾಪ್ತಿಯ ಒಂದೇ ಕುಟುಂಬದ 21 ವರ್ಷದ ಪುರುಷ, 41 ವರ್ಷದ ಮಹಿಳೆ, 6 ವರ್ಷದ ಬಾಲಕ, ಕಾಸರಗೋಡು ನಗರದ ಹಣ್ಣಿನ ಅಂಗಡಿಯೊಂದರ ಮಾಲೀಕ, ಕಾಸರಗೋಡು ನಗರಸಭೆ ವ್ಯಾಪ್ತಿಯ 25 ವರ್ಷದ ನಿವಾಸಿ, ಕಾಸರಗೋಡಿನ ಕಾರು ಶೋರೂಂ ಒಂದರ ನೌಕರ ಮುಳಿಯಾರು ಪಂಚಾಯತ್‍ನ 35 ವರ್ಷದ ನಿವಾಸಿ, ಆರೋಗ್ಯ ಕಾರ್ಯಕರ್ತನಾಗಿರುವ 25 ವರ್ಷದ ಚೆಂಗಳ ಪಂಚಾಯತ್ ನಿವಾಸಿ, ಮಂಗಳೂರಿನಿಂದ ಆಗಮಿಸಿದ ಚೆಂಗಳ ಪಂಚಾಯತ್‍ನ 50 ವರ್ಷದ ನಿವಾಸಿ, ಅವರ 20 ವರ್ಷದ ಪುತ್ರಿಗೆ ಸೋಂಕು ತಗುಲಿದೆ.
ಸೌದಿಯಿಂದ ಆಗಮಿಸಿದ ಕುಂಬ್ಡಾಜೆ ಪಂಚಾಯತ್‍ನ 25 ವರ್ಷದ ಮಹಿಳೆ, ದೇಲಂಪಾಡಿ ಪಂಚಾಯತ್‍ನ 30 ವರ್ಷದ ನಿವಾಸಿ, ಅಬುದಾಬಿಯಿಂದ ಆಗಮಿಸಿದ ತ್ರಿಕರಿಪುರ ಪಂಚಾಯತ್‍ನ 50 ವರ್ಷದ ನಿವಾಸಿಗೆ ಕೋವಿಡ್ ಪಾಸಿಟಿವ್ ಆಗಿದೆ.
ಉತ್ತರಪ್ರದೇಶದಿಂದ ಆಗಮಿಸಿದ ಕುಂಬಳೆಯಲ್ಲಿ ಹೊಲಿಗೆ ಅಂಗಡಿಯಲ್ಲಿ ನೌಕರಿಯಲ್ಲಿರುವ 38 ವರ್ಷ ನಿವಾಸಿ, ಬೆಂಗಳೂರಿನಿಂದ ಆಗಮಿಸಿದ ಮೊಗ್ರಾಲ್ ಪುತ್ತೂರು ಪಂಚಾಯತ್‍ನ 23 ವರ್ಷದ ನಿವಾಸಿಗೆ ಸೋಂಕು ಖಚಿತವಾಗಿದೆ.
4 ಮಂದಿಗೆ ಕೋವಿಡ್ ನೆಗೆಟಿವ್ : ಉಕ್ಕಿನಡ್ಕ ಕಾಸರಗೋಡು ಮೆಡಿಕಲ್ ಕಾಲೇಜಿನಲ್ಲಿ ದಾಖಲಾಗಿದ್ದ ಮಂಗಲ್ಪಾಡಿ ಪಂಚಾಯತ್‍ನ 34, 43 ವರ್ಷದ ನಿವಾಸಿಗಳು, ತ್ರಿಕರಿಪುರ ಪಂಚಾಯತ್‍ನ 43 ವರ್ಷದ ನಿವಾಸಿ, ಕಣ್ಣೂರು ಮೆಡಿಕಲ್ ಕಾಲೇಜಿನಲ್ಲಿ ದಾಖಲಾಗಿದ್ದ ಮಡಿಕೈ ಪಂಚಾಯತ್‍ನ 27 ವರ್ಷದ ನಿವಾಸಿ ಗುಣಮುಖರಾದವರು.
ಕಾಸರಗೋಡು ಜಿಲ್ಲೆಯಲ್ಲಿ 6712 ಮಂದಿ ನಿಗಾದಲ್ಲಿದ್ದಾರೆ. ಮನೆಗಳಲ್ಲಿ 6146 ಮಂದಿ, ಸಾಂಸ್ಥಿಕ ನಿಗಾದಲ್ಲಿ 566 ಮಂದಿ ಇದ್ದಾರೆ. ನೂತನವಾಗಿ 96 ಮಂದಿ ನಿಗಾ ಪ್ರವೇಶಿಸಿದ್ದಾರೆ. 359 ಮಂದಿ ಶುಕ್ರವಾರ ತಮ್ಮ ನಿಗಾ ಅವ„ ಪೂರ್ಣಗೊಳಿಸಿದ್ದಾರೆ. 425 ಮಂದಿಯ ಸ್ಯಾಂಪಲ್ ತಪಾಸಣೆಗೆ ಕಳುಹಿಸಲಾಗಿದೆ. 826 ಮಂದಿಯ ಫಲಿತಾಂಶ ಲಭಿಸಿಲ್ಲ.
ಒಂದೇ ದಿನ ಸಂಪರ್ಕ ಮೂಲಕ 11 ಕೋವಿಡ್ ಪಾಸಿಟಿವ್: ಜನ ಜಾಗೃತÀರಾಗಬೇಕು : ಡಿ.ಎಂ.ಒ.
ಕಾಸರಗೋಡು ಜಿಲ್ಲೆಯಲ್ಲಿ ಒಂದೇ ದಿನ ಸಂಪರ್ಕ ಮೂಲಕದ 11 ಕೋವಿಡ್ ಪಾಸಿಟಿವ್ ಪ್ರಕರಣಗಳು ವರದಿಯಾಗಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಜಾಗರೂಕತೆ ಪಾಲಿಸುಂತೆ ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು.
ಕಾಸರಗೋಡು ನಗರದ ತರಕಾರಿ ಅಂಗಡಿಯಲ್ಲಿ ನೌಕರಿ ನಡೆಸುತ್ತಿರುವ 4 ಮಂದಿಗೆ, ಸಮೀಪದ ಹಣ್ಣಿನ ಅಂಗಡಿಯ ಮಾಲೀಕ ಶುಕ್ರವಾರ ಸೋಂಕು ತಗುಲಿರುವುದು ಖಚಿತಗೊಂಡವರು. ತರಕಾರಿ ಅಂಗಡಿಯ ಮಾಲೀಕ ವಾಹನ ಮೂಲಕ ಮಂಗಳೂರಿಗೆ ತರಕಾರಿ ಖರೀದಿಗಾಗಿ ಹೋಗಿ ಬರುವುದು ಗಮನಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಮಂಗಳೂರಿನಿಂದ ಬರುವ ವಾಹನಗಳ ಸೂಕ್ಷ್ಮ ತಪಾಸಣೆ ಚುರುಕುಗೊಳಿಸಲಾಗುವುದು. ಕರ್ನಾಟಕದಿಂದ ಅಡ್ಡದಾರಿಗಳ ಮೂಲಕ ಕೆಲವರು ಜಿಲ್ಲೆಗೆ ಆಗಮಿಸುತ್ತಿರುವುದು ಗಂಭೀರ ಸಮಸ್ಯೆಗೆ ಕಾರಣವಾಗಲಿದೆ. ಈ ಕ್ರಮವನ್ನು ತಡೆಯುವಲ್ಲಿ ಸಾರ್ವಜನಿಕರು ಸಂಬಂಧಪಟ್ಟ ಅ„ಕಾರಿಗಳಿಗೆ ಸಹಕಾರ ನೀಡುವಂತೆ ಅವರು ವಿನಂತಿಸಿದರು. ಇತರ ರಾಜ್ಯಗಳಿಂದ ಊರಿಗೆ ಮರಳುವ ಮಂದಿ ನಿಖರ ಮಾಹಿತಿಗಳನ್ನು ನೀಡುವಂತೆ, ಯಾತ್ರಾ ಮಾಹಿತಿಗಳನ್ನು ಮುಚ್ಚಿಡಕೂಡದು ಎಂದು ಅವರು ಭಿನ್ನವಿಸಿದರು. ಜಿಲ್ಲಾಡಳಿತೆ ಮತ್ತು ಆರೋಗ್ಯ ಇಲಾಖೆ ತಿಳಿಸಿರುವ ಕಟ್ಟುನಿಟ್ಟುಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಇಂಥಾ ಆದೇಶ ಉಲ್ಲಂಘನೆ ನಡೆಸಿದವರ ವಿರುದ್ಧ ಎಪಿಡೆಮಿಕ್ ಡಿಸೀಸ್ ಆರ್ಡಿನೆನ್ಸ್ 2020 ಪ್ರಕಾರ ಶಿಕ್ಷೆ ವಿ„ಸಬಹುದಾಗಿದೆ ಎಂದವರು ಮುನ್ನೆಚ್ಚರಿಕೆ ನೀಡಿದರು.
ಕೇರಳದಲ್ಲಿ 416 ಮಂದಿಗೆ ಸೋಂಕು :
ಕೇರಳ ರಾಜ್ಯದಲ್ಲಿ ಶುಕ್ರವಾರ 416 ಮಂದಿಗೆ ಕೊರೊನಾ ವೈರಸ್ ಸೋಂಕು ದೃಢೀಕರಿಸಲಾಗಿದೆ. ಇದೇ ಸಂದರ್ಭದಲ್ಲಿ 112 ಮಂದಿ ರೋಗಮುಕ್ತರಾಗಿದ್ದಾರೆಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದ್ದಾರೆ. ರೋಗ ಬಾ„ತರಲ್ಲಿ 123 ಮಂದಿ ವಿದೇಶದಿಂದಲೂ, 51 ಮಂದಿ ಇತರ ರಾಜ್ಯಗಳಿಂದಲೂ ಬಂದವರು. 204 ಮಂದಿಗೆ ಸಂಪರ್ಕದ ಮೂಲಕ ರೋಗ ಬಾಧಿಸಿದೆ.
ತಿರುವನಂತಪುರ-129, ಕೊಲ್ಲಂ-28, ಪತ್ತನಂತಿಟ್ಟ-32, ಆಲಪ್ಪುಳ-50, ಕೋಟ್ಟಯಂ-7, ಇಡುಕ್ಕಿ-12, ಎರ್ನಾಕುಳಂ-12, ತೃಶ್ಶೂರು-17, ಪಾಲ್ಘಾಟ್-28, ಮಲಪ್ಪುರಂ-41, ಕಲ್ಲಿಕೋಟೆ-12, ಕಣ್ಣೂರು-23, ಕಾಸರಗೋಡು-17 ಎಂಬಂತೆ ರೋಗ ಬಾಧಿಸಿದೆ.
ತಿರುವನಂತಪುರ-5, ಆಲಪ್ಪುಳ-24, ಕೋಟ್ಟಯಂ-9, ಇಡುಕ್ಕಿ-4, ಎರ್ನಾಕುಳಂ-4, ತೃಶ್ಶೂರು-19, ಪಾಲ್ಘಾಟ್-8, ಮಲಪ್ಪುರಂ-18, ವಯನಾಡು-4, ಕಣ್ಣೂರು-14, ಕಾಸರಗೋಡು-3 ಎಂಬಂತೆ ಗುಣಮುಖರಾಗಿದ್ದಾರೆ.
ಲಾಕ್‍ಡೌನ್ ಉಲ್ಲಂಘನೆ : 21 ಕೇಸುಗಳು ದಾಖಲು : ಲಾಕ್‍ಡೌನ್ ಆದೇಶ ಉಲ್ಲಂಘಿಸಿದ ಆರೋಪದಲ್ಲಿ ಕಾಸರಗೋಡು ಜಿಲ್ಲೆಯಲ್ಲಿ 21 ಕೇಸುಗಳನ್ನು ದಾಖಲಿಸಲಾಗಿದೆ. 34 ಮಂದಿ ಯನ್ನು ಬಂಧಿಸಲಾಗಿದ್ದು, 7 ವಾಹನಗಳನ್ನು ವಶಪಡಿಸಲಾಗಿದೆ. ಮಂಜೇಶ್ವರ ಪೆÇಲೀಸ್ ಠಾಣೆಯಲ್ಲಿ 3 ಕೇಸುಗಳು, ಕುಂಬಳೆ 2, ಕಾಸರಗೋಡು 2, ಆದೂರು 2, ಮೇಲ್ಪರಂಬ 1, ಬೇಕಲ 1, ಹೊಸದುರ್ಗ 1, ನೀಲೇಶ್ವರ 2, ಚಂದೇರ 1, ವೆಳ್ಳರಿಕುಂಡ್ 2, ಚಿತ್ತಾರಿಕಲ್ 2, ರಾಜಪುರಂ 1 ಕೇಸುಗಳು ದಾಖಲಾಗಿವೆ.
ಈ ಪ್ರಕರಣಗಳಿಗೆ ಸಂಬಂಧಿಸಿ ಈ ಮೂಲಕ ದಾಖಲಾಗುವ ಕೇಸುಗಳ ಸಂಖ್ಯೆ 3014 ಆಗಿದೆ. ಒಟ್ಟು 3946 ಮಂದಿಯನ್ನು ಬಂಧಿಸಲಾಗಿದ್ದು, 1251 ವಾಹನಗಳನ್ನು ವಶಪಡಿಸಲಾಗಿದೆ.
ಮಾಸ್ಕ್ ಧರಿಸದ 201 ಮಂದಿ ವಿರುದ್ಧ ಕೇಸು : ಮಾಸ್ಕ್ ಧರಿಸದೇ ಇದ್ದ ಆರೋಪದಲ್ಲಿ ಕಾಸರಗೋಡು ಜಿಲ್ಲೆಯಲ್ಲಿ 201 ಮಂದಿ ವಿರುದ್ಧ ಕೇಸು ದಾಖಲಾಗಿದೆ. ಈ ಪ್ರಕರಣಗಳಿಗೆ ಸಂಬಂಧಿಸಿ ಈ ಮೂಲಕ ದಾಖಲಾಗಿರುವ ಕೇಸುಗಳ ಸಂಖ್ಯೆ 11817 ಆಗಿದೆ.


