HEALTH TIPS

ಕೋವಿಡ್ ಸೂಪರ್ ಸ್ಪ್ರೆಡ್?-ಜಿಲ್ಲೆಯಲ್ಲಿ ಬಿಗಿ ಜಾಗ್ರತೆ : 4 ಪ್ರದೇಶಗಳ ಮಂದಿ ರೂಂ ಕ್ವಾರೆಂಟೈನ್ ಗೆ ಒಳಗಾಗಬೇಕು: ಜಿಲ್ಲಾಧಿಕಾರಿ ಆದೇಶ


       ಕಾಸರಗೋಡು: ಕೋವಿಡ್ ಸೋಂಕು ಹೆಚ್ಚಳಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಕಾಸರಗೋಡು ಜಿಲ್ಲೆಯಲ್ಲಿ ಬಿಗಿ ಜಾಗ್ರತೆ ಏರ್ಪಡಿಸಲಾಗಿದೆ. ಜಿಲ್ಲೆಯ 4 ಪ್ರದೇಶಗಳ ಮಂದಿ ರೂಂ ಕ್ವಾರೆಂಟೈನ್ ಗೆ ಒಳಗಾಗುವಂತೆ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಆದೇಶ ನೀಡಿದ್ದಾರೆ. 
      ಜು.5 ರಂದು ಮತ್ತು ಆ ಬಳಿಕ  ಕಾಸರಗೋಡು ಮಾರುಕಟ್ಟೆಗೆ ತೆರಳಿದ್ದವರು, ಚೆಂಗಳದಲ್ಲಿ ನಡೆದ ವಾಹನ ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯ ಮನೆಗೆ ಜು.3 ಯಾ ತದನಂತರ ಸಂದರ್ಶಿಸಿದವರು, ಜು.6ರಂದು ಯಾÁ ಬಳಿಕ ಕುಂಬಳೆಯ ಮಾರುಕಟ್ಟೆಗೆ ತೆರಳಿದ್ದವರು, ಜು.12ರಂದು ಯಾ ತದನಂತರ ಮಂಜೇಶ್ವರ ಪಂಚಾಯತ್ ನ 11,13,14 ವಾರ್ಡ್ ಗಳಲ್ಲಿ ಫುಟ್ ಬಾಲ್ ಪಂದ್ಯಾಟಗಳಲ್ಲಿ ಭಾಗಿಯಾದವರು, ಕಡ್ಡಾಯವಾಗಿ 14 ದಿನಗಳ ರೂಂ ಕ್ವಾರಂಟೈನ್ ಗೆ ಒಳಗಾಗುವಂತೆ ಜಿಲ್ಲಾಧಿಕಾರಿ ತಿಳಿಸಿದರು.
     ಈ ಮಂದಿ ಯಾವ ಕಾರಣಕ್ಕೂ ಕುಟುಂಬದ ಸದಸ್ಯರೊಂದಿಗೆ, ಸಾರ್ವಜನಿಕರೊಂದಿಗೆ ಸಂಪರ್ಕ ನಡೆಸ ಬಾರದು. ಈ ಪ್ರದೇಶಗಳಲ್ಲಿ ಕೋವಿಡ್ ಸೋಂಕು ಹೆಚ್ಚಳಗೊಂಡಿರುವ ಹಿನ್ನೆಲೆಯಲ್ಲಿ ಈ ಆದೇಶ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಹೇಳಿರುವರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries