ಕಾಸರಗೋಡು: ಜಿಲ್ಲೆಯ ಇತಿಹಾಸದಲ್ಲೇ ಪ್ರಥಮ ಬಾರಿಗೆ ಒಂದೇ ದಿನ(ಜು.12-ಭಾನುವಾರ)50ಕ್ಕಿಂತ ಅಧಿಕ ಕೋವಿಡ್ ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. ಇವರಲ್ಲಿ 42 ಮಂದಿಗೆ ಸಂಪರ್ಕದಿಂದ ಸೋಂಕು ತಗುಲಿದೆ. ಇದು ಜಿಲ್ಲೆ ಅತೀವ ಗಂಭೀರ ಸ್ಥಿತಿಯಲ್ಲಿ ಮುಂದುವರಿಯುತ್ತಿದೆ ಎಂಬುದನ್ನು ಸೂಚಿಸುತ್ತದೆ ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿರುವರು.
ಕಾಸರಗೋಡು ಜಿಲ್ಲೆಯಲ್ಲಿ ಕೋವಿಡ್ ಪಾಸಿಟಿವ್ ಆದ ಪ್ರಕರಣಗಳಲ್ಲಿ ಬಹುತೇಕ ಮಂದಿ ವ್ಯಾಪಾರ ವಲಯಕ್ಕೆ ಸಂಬಂಧಪಟ್ಟವರು ಎಂಬುದು ಖಚಿತವಾಗಿದೆ. ಭಾನುವಾರ ಸೋಂಕು ತಗುಲಿರುವುದು ಖಚಿತಗೊಂಡವರಲ್ಲಿ 8 ಮಂದಿಗೆ ಸೋಂಕು ತಗುಲಿದ ಮೂಲ ಏನು ಎಂಬುದು ತಿಳಿದುಬರುತ್ತಿಲ್ಲ. ಸಂಪೂರ್ಣ ಲಾಕ್ ಡೌನ್ ಅವಧಿಯಲ್ಲಿ ಸಾರ್ವಜಿಕರು ಹೊಂದಿದ್ದ ಜನಾಬ್ದಾರಿಯುತ ಮನೋಭಾವ ಮತ್ತೆ ತಳೆಯಬೇಕಾದ ಅನಿವಾರ್ಯತೆ ಬಂದೊದಗಿದೆ. ಮುಂದಿನ ದಿನಗಳಲ್ಲಿ ಅತೀವ ಜಾಗ್ರತೆ ಪಾಲಿಸಬೇಕಾಗಿದೆ ಎಂದರು.
ಕಳೆದ ಮೇ 27ರಿಂದ 35 ದಿನಗಳ ಕಾಲ ಕಾಸರಗೋಡು ಜಿಲ್ಲೆಯಲ್ಲಿ ಒಂದೇ ಒಂದು ಸಂಪರ್ಕ ಮೂಲದಿಂದ ಸೋಂಕು ತಗುಲಿದ ಪ್ರಕರಣ ವರದಿಯಾಗಿರಲಿಲ್ಲ. ಈ ಸಾಧನೆ ಮತ್ತೆ ಜಾರಿಗೊಳ್ಳಬೇಕು. ಇದಕ್ಕೆ ಎಲ್ಲ ವಲಯಗಳ ಜನತೆಯ ಸಹಕಾರ ಬೇಕು ಎಂದವರು ಹೇಳಿದರು.
ಗಡಿ ಪ್ರದೇಶಗಳ ಮೂಲಕ ಕೋವಿಡ್ 19 ಜಾಗ್ರತಾ ಪೆÇೀರ್ಟಲ್ ಮೂಲಕ ನೋಂದಣಿ ನಡೆಸದೇ ಅಕ್ರಮವಾಗಿ ಜಿಲ್ಲೆಗೆ ಪ್ರವೇಶಿಸುವ ಮಂದಿಯನ್ನು ನಿಯಂತ್ರಿಸುವಲ್ಲಿ ಸಂಬಂಧಪಟ್ಟವರು ಮುನ್ನಡೆ ಸಾಧಿಸಬೇಕು. ಅನಗತ್ಯ ಪ್ರಯಾಣ, ಗುಂಪು ಸೇರುವಿಕೆ ಇತ್ಯಾದಿಗಳನ್ನು ಕಡ್ಡಾಯವಾಗಿ ಕೈಬಿಡಬೇಕು. ಇಲ್ಲವಾದಲ್ಲಿ ಜಿಲ್ಲೆ ಯಲ್ಲಿ ಮತ್ತೆ ಸಂಪೂರ್ಣ ಲಾಕ್ ಡೌನ್ ಜಾರಿಗೊಳಿಸುವುದು ಅನಿವಾರ್ಯವಾದೀತು ಎಂದವರು ತಿಳಿಸಿದರು.
ಜಿಲ್ಲಾಡಳಿತೆ ತಿಳಿಸಿರುವ ಕಟ್ಟುನಿಟ್ಟುಗಳನ್ನು ಎಲ್ಲರೂ ಕಡ್ಡಾಯವಾಗಿ ಪಾಲಿಸಬೇಕು. ಅನಿವಾರ್ಯ ಕಾರಣಗಳಿಲ್ಲದೆ ಸಾರ್ವಜನಿಕ ಪ್ರದೇಶಗಳಿಗೆ ಜನ ಬರಲೇ ಕೂಡದು. ಅನಿವಾರ್ಯ ಸಾಮಾಗ್ರಿಗಳ ಖರೀದಿಗೆ ಮಾತ್ರ ಅಂಗಡಿಗಳಿಗೆ ತೆರಳಬೇಕು. 65 ವರ್ಷದ ಮೇಲ್ಪಟ್ಟವರು ಮತ್ತು ಹತ್ತು ವರ್ಷಕ್ಕಿಂತ ಕೆಳಗಿನ ವಯೋಮಾನದ ಮಕ್ಕಳು ಮನೆಗಳಿಂದ ಹೊರಗಿಳಿಯಕೂಡದು. ಈಗಿರುವ ಕಟ್ಟುನಿಟ್ಟುಗಳನ್ನು ಇನ್ನಷ್ಟು ಬಿಗಿಗೊಳಿಸುವ ಮುನ್ನ ಸಾರ್ವಜನಿಕರು ಜಾಗ್ರತೆ ಪಾಲಿಸುವುದು ಉತ್ತಮ. ಈ ನಿಟ್ಟಿನಲ್ಲಿ ಜನ ಸಹಕಾರ ನೀಡುವರು ಎಂಬ ವಿಶ್ವಾಸ ತಮಗಿದೆ ಎಂದು ಜಿಲ್ಲಾಧಿಕಾರಿ ನುಡಿದರು.
ಭಾನುವಾರ 56 ಮಂದಿಗೆ ಕೋವಿಡ್ ಪಾಸಿಟಿವ್ : ಇವರಲ್ಲಿ 41 ಮಂದಿಗೆ ಸಂಪರ್ಕ ಮೂಲದಿಂದ ಸೋಂಕು:
ಜಿಲ್ಲೆಯಲ್ಲಿ ಭಾನುವಾರ 56 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ. ಇವರಲ್ಲಿ 42 ಮಂದಿಗೆ ಸಂಪರ್ಕ ಮೂಲದಿಂದ ಸೋಂಕು ತಗುಲಿದೆ. ಉಳಿದಂತೆ 8 ಮಂದಿ ವಿದೇಶಗಳಿಂದ, 6 ಮಂದಿ ಇತರ ರಾಜ್ಯಗಳಿಂದ ಬಂದವರು ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು.
ಸಂಪರ್ಕದಿಂದ ಸೋಂಕು ತಗುಲಿದವರು:
ಮೀಂಜ ಪಂಚಾಯತ್ ನ 29 ವರ್ಷದ ಮಹಿಳೆ, ಪಳ್ಳಿಕ್ಕರೆ ಪಂಚಾಯತ್ ನ 54 ವರ್ಷದ ಮಹಿಳೆ, (ಇವರಿಬ್ಬರೂ ಆರೋಗ್ಯ ಸಂಸ್ಥೆಯೊಂದರ ಸಿಬ್ಬಂದಿ.), ಮಧೂರು ಪಂಚಾಯತ್ ಮೂಲದ, ಈಗ ಚೆಮ್ನಾಡ್ ಪಂಚಾಯತ್ ನಿವಾಸಿ 49 ವರ್ಷದ ವ್ಯಕ್ತಿ, (ಇವರು ಚೆರ್ಕಳದಲ್ಲಿ ಹೋಟೆಲೊಂದನ್ನು ನಡೆಸುತ್ತಿದ್ದಾರೆ. ಇವರ ಹೋಟೆಲ್ ಸಿಬ್ಬಂದಿಯ ಸಂಪರ್ಕ ಮಾಹಿತಿ ಲಭಿಸಿಲ್ಲ.) ಕುಂಬಳೆ ಪಂಚಾಯತ್ ನ 65 ವರ್ಷದ ವ್ಯಕ್ತಿ ಸಂಪರ್ಕ ಮೂಲಕ ಸೊಂಕು ತಗುಲಿದವರು. ಒಂದೇ ಕುಟುಂಬದ ಸದಸ್ಯರಾದ ಕುಂಬಳೆ ಪಂಚಾಯತ್ ನ 56 ವರ್ಷದ ಮಹಿಳೆ, 32 ವರ್ಷದ ವ್ಯಕ್ತಿ, 2 ವರ್ಷದ ಬಾಲಕಿ, 26 ವರ್ಷದ ಮಹಿಳೆ, ಮೊಗ್ರಾಲ್ ಪುತ್ತೂರು ಪಂಚಾಯತ್ ನ 32 ವರ್ಷದ ವ್ಯಕ್ತಿ, ಕಾಸರಗೋಡು ನಗರದಲ್ಲಿ ಸ್ಟೇಷನರಿ ಅಂಗಡಿ ನಡೆಸುತ್ತಿರುವ ಕಾಸರಗೋಡು ನಗರಸಭೆ ವ್ಯಾಪ್ತಿಯ 45 ವರ್ಷದ ವ್ಯಕ್ತಿ ಸಹಿತ 42 ಮಂದಿ ಸಂಪರ್ಕದಿಂದ ಸೋಂಕು ತಗುಲಿದವರು.
ವಿದೇಶದಿಂದ ಬಂದವರು:
ಶಾರ್ಜಾ ದಿಂದ ಆಗಮಿಸಿದ ಪುಲ್ಲೂರು-ಪೆರಿಯ ಪಂಚಾಯತ್ ನ 47 ವರ್ಷದ ನಿವಾಸಿ, ಬಹರೈನ್ ನಿಂದ ಬಂದಿದ್ದ 48 ವರ್ಷದ ವ್ಯಕ್ತಿ, ದುಬಾಯಿಯಿಂದ ಬಂದಿದ್ದ ಅಜಾನೂರು ಪಂಚಾಯತ್ ನ 25 ವರ್ಷದ ಮಹಿಳೆ, ಕುವೈತ್ ನಿಂದ ಆಗಮಿಸಿದ್ದ ಮಂಗಲ್ಪಾಡಿ ಪಂಚಾಯತ್ ನ 37 ವರ್ಷದ ವ್ಯಕ್ತಿ, ಅಬುದಾಭಿಯಿಂದ ಬಂದಿದ್ದ ಮಂಜೇಶ್ವರ ಪಂಚಾಯತ್ ನ 24 ವರ್ಷದ ವ್ಯಕ್ತಿ, ಮಸ್ಕತ್ ನಿಂದ ಆಗಮಿಸಿದ್ದ ಪುಲ್ಲೂರು-ಪೆರಿಯ ಪಂಚಾಯತ್ ನ 44 ವರ್ಷದ ವ್ಯಕ್ತಿ, ಶಾರ್ಜಾದಿಂದ ಬಂದಿದ್ದ 37 ವರ್ಷದ ನಿವಾಸಿ ಸೋಂಕು ತಗುಲಿದವರು. ದುಬಾಯಿಯಿಂದ ಆಗಮಿಸಿದ್ದ ಚೆಮ್ನಾಡ್ ಪಂಚಾಯತ್ ನಿವಾಸಿ 23 ವರ್ಷದ ವ್ಯಕ್ತಿಗೆ ಕೋವಿಡ್ ಪಾಸಿಟಿವ್ ಆಗಿದೆ.
ಇತರ ರಾಜ್ಯಗಳಿಂದ ಬಂದವರು:
ಕರ್ನಾಟಕದಿಂದ ಬಂದಿದ್ದ ಮುಳಿಯಾರು ಪಂಚಾಯತ್ ನಿವಾಸಿ 32 ವರ್ಷದ ವ್ಯಕ್ತಿ, ಮೊಗ್ರಾಲ್ ಪುತ್ತೂರು ಪಂಚಾಯತ್ ನ 32 ವರ್ಷದ ವ್ಯಕ್ತಿ, ದಿನನಿತ್ಯ ತರಕಾರಿಗಾಗಿ ಮಂಗಳೂರಿಗೆ ಹೋಗಿಬರುತ್ತಿದ್ದ ಚೆಂಗಳ ಪಂಚಾಯತ್ ನ 38 ವರ್ಷದ (ಕಾಸರಗೋಡು ನಗರದಲ್ಲಿ ಇವರು ತರಕಾರಿ ಅಂಗಡಿ ನಡೆಸುತ್ತಿದ್ದಾರೆ. ಇವರ ಸಂಪರ್ಕ ಮಾಹಿತಿ ಲಭಿಸಿಲ್ಲ.) ವ್ಯಕ್ತಿ, ಕಾಸರಗೋಡು ನಗರಸಭೆಯ 45 ವರ್ಷದ ವ್ಯಕ್ತಿ ಸೋಂಕು ತಗುಲಿದವರು.
ಕಾಸರಗೋಡು ಜಿಲ್ಲೆಯಲ್ಲಿ ಭಾನುವಾರ 7 ಮಂದಿಗೆ ರೋಗಮುಕ್ತಿಃ
ಕಾಸರಗೋಡು ಜಿಲ್ಲೆಯಲ್ಲಿ ಭಾನುವಾರ 7 ಮಂದಿ ಕೋವಿಡ್ ಸೋಂಕಿನಿಂದ ಗುಣಮುಖರಾಗಿದ್ದಾರೆ. ಈ ವರೆಗೆ ಕಾಸರಗೋಡು ಜಿಲ್ಲೆಯಲ್ಲಿ ಸೋಂಕು ಖಚಿತಗೊಂಡವರ ಸಂಖ್ಯೆ ಒಟ್ಟು 641 ಆಗಿದೆ. ಈ ವರೆಗೆ ಒಟ್ಟು 434 ಮಂದಿಗೆ ರೋಗಮುಕ್ತಿ ಲಭಿಸಿದೆ. ಒಟ್ಟು 214 ಮಂದಿ ಆಸ್ಪತ್ರೆಗಳಲ್ಲಿ ದಾಖಲಾಗಿದ್ದಾರೆ. ಒಟ್ಟು 6513 ಮಂದಿ ನಿಗಾದಲ್ಲಿದ್ದಾರೆ. ಮನೆಗಳಲ್ಲಿ 5897 ಮಂದಿ, ಸಾಂಸ್ಥಿಕ ನಿಗಾದಲ್ಲಿ 465 ಮಂದಿ ಇದ್ದಾರೆ. 368 ಮಂದಿ ಭಾನುವಾರ ತಮ್ಮ ನಿಗಾ ಅವಧಿ ಪೂರ್ಣಗೊಳಿಸಿದ್ದಾರೆ. ಒಟ್ಟು 26 ಮಂದಿ ನೂತನವಾಗಿ ನಿಗಾ ಪ್ರವೇಶ ಮಾಡಿದ್ದಾರೆ.
ಭಾನುವಾರ ಒಟ್ಟು 16312 ಮಂದಿಯ ಸ್ಯಾಂಪಲ್ ತಪಾಸಣೆಗೆ ಕಳುಹಿಸಲಾಗಿದೆ. ಭಾನುವಾರ 489 ಮಂದಿಯ ಸ್ಯಾಂಪಲ್ ತಪಾಸಣೆಗೆ ರವಾನಿಸಲಾಗಿದೆ. 1311 ಮಂದಿಯ ಫಲಿತಾಂಶ ಲಭಿಸಲು ಬಾಕಿಯಿದೆ.


