HEALTH TIPS

ಗಡಿನಾಡ ತೌಳವ ನೆಲೆ ವಾಂತಿಚ್ಚಾಲಿನಲ್ಲಿ 52ನೇ ವರ್ಷದ ಆಟಿ ಅಟ್ಟಣೆ ಸಂಪನ್ನ


          ಬದಿಯಡ್ಕ: ತುಳು ಸಂಪ್ರದಾಯ, ಜಾನಪದ, ಸಾಹಿತ್ಯ, ನಂಬಿಕೆ-ನಡವಳಿಕೆಗಳಿಗೆ ಪ್ರಾತಿನಿಧಿಕತೆಯನ್ನು ತರುವಲ್ಲಿ ಶ್ರಮಿಸುತ್ತಿರುವ ವಾಂತಿಚ್ಚಾಲಿನ ಜಿ.ಕೆ.ಚಾರಿಟೇಬಲ್ ಟ್ರಸ್ಟ್ ಆಯೋಜನೆಯಲ್ಲಿ 52ನೇ ವರ್ಷದ ಆಟಿದ ಅಟ್ಟಣೆ ಕಾರ್ಯಕ್ರಮ ಕೋವಿಡ್ ನಿಯಮ ಸಂಹಿತೆಗಳಿಗೆ ಅನುಸಾರವಾಗಿ ಸಾಂಪ್ರದಾಯಿಕ ಕ್ರಮಗಳೊಂದಿಗೆ ಭಾನುವಾರ ವಾಂತಿಚ್ಚಾಲ್ ಲಕ್ಷ್ಮೀ ನಿಲಯದಲ್ಲಿ ನಡೆಯಿತು.
        ಸಭಾ ಕಾರ್ಯಕ್ರಮವನ್ನು ಉಪ್ಲೇರಿ ಶ್ರೀಮಂತ್ರಮೂರ್ತಿ ಗುಳಿಗ ಸನ್ನಿಧಿಯ ಕರ್ಮಿ ಕೃಷ್ಣ ಬೆಳ್ಚಪ್ಪಾಡ ಜ್ಯೋತಿ ಬೆಳಗಿಸಿ  ಉದ್ಘಾಟಿಸಿದರು. ಕೊರಗಪ್ಪ ಪಾಲ್ತಿಮಾರ್ ಅಧ್ಯಕ್ಷತೆ ವಹಿಸಿದ್ದರು. ರಾಮ ನಾಯ್ಕ ಉಪ್ಲೇರಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ರಾಮ ಮೂಲ್ಯ ಕುಂಟಾಲಮೂಲೆ ಉಪಸ್ಥಿತರಿದ್ದ ಸಭೆಯಲ್ಲಿ ಟ್ರಸ್ಟ್ ನಿರ್ದೇಶಕ ಗೋಪಾಲಕೃಷ್ಣ ಕುಲಾಲ್ ಪ್ರಾಸ್ತಾವಿಕವಾಗಿ ಮಾತನಾಡಿದರು. ರಶ್ಮಿ ಮುಳಿಯಡ್ಕ ಸ್ವಾಗತಿಸಿ, ಅಕ್ಷತ್ ಏತಡ್ಕ ವಂದಿಸಿದರು. ಚೈತ್ರ ವಾಣೀನಗರ ನಿರೂಪಿಸಿದರು. ಮಾ.ಜಿಶನ್ ವಾಂತಿಚ್ಚಾಲ್ ಹಾಗೂ ಸ್ಮಿತಾ ಮುಳಿಯಡ್ಕ ಪ್ರಾರ್ಥನೆಗೈದರು. ಬಳಿಕ ಸಾಂಪ್ರದಾಯಿಕ ಗುಳಿಗ ತಂಬಿಲ, ಕಲ್ಲುರ್ಟಿ ಅಗೇಲು, ಕೊರಗಜ್ಜ ಸಂಮಾನ ನಡೆಯಿತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries