ಕುಂಬಳೆ: ಮಂಜೇಶ್ವರ ತಾಲೂಕು ಲೈಬ್ರರಿ ಕೌನ್ಸಿಲ್ ನೇತೃತ್ವದಲ್ಲಿ ತಾಲೂಕು ಮಟ್ಟದ ವಾಚನಾ ಪಕ್ಷಾಚರಣೆಯ ಸಮಾರೋಪ ಸಮಾರಂಭ ಹಾಗೂ ಐ.ವಿ.ದಾಸ್ ಸಂಸ್ಮರಣಾ ಕಾರ್ಯಕ್ರಮ ಜು.7 ರಂದು ಬೆಳಿಗ್ಗೆ 10.30 ರಿಂದ ಕುಂಬಳೆ ಸರ್ಕಾರಿ ಫ್ರೌಢಶಾಲಾ ವಠಾರದಲ್ಲಿ ಆಯೋಜಿಸಲಾಗಿದೆ.
ತಾಲೂಕು ಲೈಬ್ರರಿ ಕೌನ್ಸಿಲ್ ಅಧ್ಯಕ್ಷ ಅಬ್ದುಲ್ಲ ಕೆ. ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಮಾರಂಭವನ್ನು ಜಿಲ್ಲಾ ಲೈಬ್ರರಿ ಕೌನ್ಸಿಲ್ ಅಧ್ಯಕ್ಷ, ಮಾಜಿ ಶಾಸಕ ಕೆ.ವಿ.ಕುಂಞ ರಾಮನ್ ಉದ್ಘಾಟಿಸುವರು. ರಾಜ್ಯ ಲೈಬ್ರರಿ ಕೌನ್ಸಿಲ್ ಸದಸ್ಯ ಅಹಮ್ಮದ್ ಹುಸೈನ್ ಪಿ.ಕೆ ಅವರು ಐ.ವಿ.ದಾಸ್ ಅವರ ಸಂಸ್ಮರಣಾ ಭಾಷಣ ಮಾಡುವರು. ಜಿಲ್ಲಾ ಲೈಬ್ರರಿ ಕೌನ್ಸಿಲ್ ಕಾರ್ಯಕಾರಿ ಸಮಿತಿ ಸದಸ್ಯ ಕೆ.ಟಿ.ವಿಜಯನ್, ಕುಂಬಳೆ ಶಾಲಾ ಪ್ರಭಾರ ಮುಖ್ಯೋಪಾಧ್ಯಾಯಿನಿ ಲಿಂಬಾ ಜೋನ್, ತಾಲೂಕು ಲೈಬ್ರರಿ ಕೌನ್ಸಿಲ್ ಉಪಾಧ್ಯಕ್ಷ ಶಾಮ ಭಟ್, ಜೊತೆ ಕಾರ್ಯದರ್ಶಿ ಶ್ರೀಕುಮಾರಿ ಟೀಚರ್, ಸದಸ್ಯೆ ಗಿರಿಜಾ ತಾರಾನಾಥ್, ಮೊಗ್ರಾಲ್ ಎಂ.ಎಸ್ ಸ್ಮಾರಕ ಲೈಬ್ರರಿಯ ಮುಹಮ್ಮದ್ ಇಕ್ಬಾಲ್, ಕುಂಬಳೆ ಸಾಗರ್ ಲೈಬ್ರರಿಯ ಕಾರ್ಯದರ್ಶಿ ನ್ಯಾಯವಾದಿ ಉದಯ, ಸಿ.ಎಚ್.ಮೊಹಮ್ಮದ್ ಕೋಯ ಲೈಬ್ರರಿಯ ಅಶ್ರಫ್ ಕೊಡ್ಯಮೆ ಉಪಸ್ಥಿತರಿದ್ದು ಶುಭಾಶಂಸನೆಗೈಯ್ಯುವರು. ರತ್ನಾಕರ ಗಟ್ಟಿ, ಡಿ.ಕಮಲಾಕ್ಷ ಮೊದಲಾದವರು ಉಪಸ್ಥಿತರಿರುವರು.





