ನವದೆಹಲಿ: ಮಾಹಾಮಾರಿ ಕೊರೋನಾ ನಂತರದ ಸವಾಲುಗಳನ್ನು ಎದುರಿಸಲು ಸಾರ್ವಜನಿಕ-ಖಾಸಗಿ ಸಹಭಾಗಿತ್ವ ಕ್ರಮದಲ್ಲಿ ತಂತ್ರಜ್ಞಾನ ಆಧಾರಿತ ಪರಿಹಾರಗಳನ್ನು ಅಭಿವೃದ್ಧಿಪಡಿಸಲು ಕೇಂದ್ರ ಸರ್ಕಾರ ಏಳು ಪ್ರಮುಖ ಕ್ಷೇತ್ರಗಳನ್ನು ಗುರುತಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ನೀತಿ ಆಯೋಗ ಆಯೋಜಿಸಿದ್ದ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ತಂತ್ರಜ್ಞಾನ ನಾಯಕರ ಸಂವಾದದಲ್ಲಿ ತಂತ್ರಜ್ಞಾನ ಆಧಾರಿತ ಪರಿಹಾರಗಳ ಕುರಿತು ಚರ್ಚಿಸಲಾಯಿತು.
ಕಳೆದ ಮೂರು ತಿಂಗಳುಗಳಲ್ಲಿ, ಭಾರತದ 75ಕ್ಕೂ ಹೆಚ್ಚು ಪರಿಣಿತರು ನೀತಿ ಆಯೋಗ ಮತ್ತು ಹಲವಾರು ಸಚಿವಾಲಯಗಳು/ಇಲಾಖೆಗಳೊಂದಿಗೆ ಏಳು ಪ್ರಮುಖ ವಿಷಯಗಳಲ್ಲಿ ಕೆಲಸ ಮಾಡುತ್ತಿವೆ ಮತ್ತು ತಾಂತ್ರಿಕ ಪರಿಹಾರಗಳ ಪರಿಕಲ್ಪನೆ ಮತ್ತು ಅಭಿವೃದ್ಧಿಪಡಿಸುತ್ತಿವೆ ಎಂದು ಹಿರಿಯ ಸರ್ಕಾರಿ ಅಧಿಕಾರಿಯೊಬ್ಬರು ಸುದ್ದಿ ಸಂಸ್ಧೆಗೆ ತಿಳಿಸಿದ್ದಾರೆ.ಆರ್ಥಿಕತೆ, ಡಿಜಿಟಲ್ ಆರೋಗ್ಯ, ಜೀವನೋಪಾಯ, ಪೆÇೀಷಣೆ, ಎಂಎಸ್‍ಎಂಇ, ಕೃಷಿ ಮತ್ತು ಶಿಕ್ಷಣ ಈ ಏಳು ಕ್ಷೇತ್ರಗಳನ್ನು ಆಯ್ಕೆ ಮಾಡಲಾಗಿದೆ.
ಕೋವಿಡ್ -19ರ ನಂತರದ ಜಗತ್ತಿನಲ್ಲಿ ಹೊರಹೊಮ್ಮುವ ಪ್ರಮುಖ ವಿಷಯಗಳನ್ನು ಗುರುತಿಸಲು ಮತ್ತು ತಂತ್ರಜ್ಞಾನದ ಹಸ್ತಕ್ಷೇಪಕ್ಕಾಗಿ ನಿರ್ದಿಷ್ಟ ಬಳಕೆಯ ಪ್ರಕರಣಗಳನ್ನು ಗುರುತಿಸಲು ಉನ್ನತ ತಂತ್ರಜ್ಞಾನ ನಾಯಕರೊಂದಿಗೆ ಕೆಲಸ ಮಾಡಲು ಮೋದಿ ಸರ್ಕಾರ ಥಿಂಕ್-ಟ್ಯಾಂಕ್ ನೀತಿ ಆಯೋಗಕ್ಕೆ ನಿರ್ದೇಶನ ನೀಡಿದ್ದರು.
ಗುಣಮಟ್ಟದ ಡಿಜಿಟಲ್ ಹೆಲ್ತ್‍ಕೇರ್‍ನ ಅಗತ್ಯವನ್ನು ಪ್ರಧಾನಿ ಒತ್ತಿ ಹೇಳಿದರು. ದೇಶಾದ್ಯಂತ ಗುಣಮಟ್ಟದ ಆರೋಗ್ಯ ಮತ್ತು ಪರಿಹಾರಗಳ ವಿಸ್ತರಣೆಯನ್ನು ಖಚಿತಪಡಿಸಿಕೊಳ್ಳಲು ಮೋದಿ ಈ ತಂಡವನ್ನು ವಿನಂತಿಸಿದ್ದಾರೆ ಎಂದು ಅಧಿಕಾರಿ ಹೇಳಿದ್ದಾರೆ.


