ಮುಂದುವರಿದ ಭಾಗ-09
ಈ ರೀತಿಯ ಮಾತ್ರೆಗಳ ದರದಲ್ಲಿ ಇರುವ ವೈತ್ಯಾಸ ಯಾಕೆಂದರೆ ರೂ.82 ರ ಔಷಧಿಯನ್ನು ಮಾರುಕಟ್ಟೆಗೆ ತಂಡ Johnson and Johnson ಕಂಪೆನಿಗೆ ಈ ಮಾತ್ರೆಯನ್ನು ಪೇಟೆಂಟ್ ಮಾಡುವ ಅರ್ಹತೆ ಇದೆ. ಉಳಿದ ಕಂಪೆನಿಗಳಿಗೆ patenting ಅರ್ಹತೆ ಮಾತ್ರವಿದೆ. ಅಂದರೆ ಭಾರತೀಯ ಕಂಪೆನಿಗಳು ಔಷಧಿಯನ್ನು ಪೇಟೆಂಟ್ ಕಾನೂನಿನಿಂದ ತಪ್ಪಿಸಿಕೊಳ್ಳಲು ಔಷಧಿಗಳನ್ನು ಬೇರೆಬೇರೆ ರೀತಿಯಲ್ಲಿ (ಕೆಳಗಿನ ಗುಣಮಟ್ಟದಲ್ಲಿ) ತಯಾರಿಸುತ್ತಾರೆ. ತುಂಬಾ ರೋಗಿಗಳಿಗೆ ರೂ.82ರ ಮಾತ್ರೆಯಲ್ಲಿ ಗುಣಮುಖವಾಗುತ್ತದೆ. J & J ಕಂಪೆನಿಯು 1992 ರಲ್ಲಿಯೇ ಈ ಔಷಧಿಯನ್ನು ಮಾರುಕಟ್ಟೆಯಿಂದ ಹಿಂತೆಗೆದಿತ್ತು. ಈಗ ಪುನಃ ಮಾರುಕಟ್ಟೆಗೆ ಬಂದಿದೆ.
ಔಷಧಿಯನ್ನು 5 ಎಂಜಿ./ಕೆ.ಜಿ ದೇಹದ ತೂಕಕ್ಕೆ ಅನುಸಾರವಾಗಿ ರೋಗದ ಕುರುಹು ದೇಹದಿಂದ ಹೋಗುವ ವರೆಗೂ ಕೊಡಬೇಕಾಗುತ್ತದೆ. ಕನಿಷ್ಠ 30-45 ದಿನಗಳ ವರೆಗೆ ಈ ರೋಗ ಹಚ್ಚುವ ಔಷಧಿಯಿಂದ ಗುಣವಾಗುವುದಿಲ್ಲ. ಆದರೆ ಮಕ್ಕಳಿಗೆ ಮಾತ್ರೆ ನೀಡುವುದು ಭಾರೀ ಕಷ್ಟಕರ. ಈ ಹಿನ್ನೆಲೆಯಲ್ಲಿ ಸಿರಪ್ ಗಳೂ ಲಭ್ಯವಿಲ್ಲ. ಕೇವಲ ಇರ್ಟಟಫ್ ಎಂಬ ಔಷಧಿಯು ಲೋಶನ್ ರೂಪದಲ್ಲಿ ಲಭ್ಯ. (1 ಎಂ.ಎಲ್ ನಲ್ಲಿ 10 ಎಂ ಜಿ ಔಷಧಿ ಇರುತ್ತದೆ). ಆದುದರಿಂದ ಸಣ್ಣ ಮಕ್ಕಳಲ್ಲಿ ಈಗ ಫಂಗಸ್ ರೋಗ ಹೆಚ್ಚು ಕಂಡುಬರುತ್ತಿರುವ ಕಾರಣ ಮಾತ್ರೆಗಳನ್ನು ಕೊಡಲು ಕಷ್ಟವಾಗುತ್ತದೆ.ಯಾಕೆಂದರೆ ಟರ್ಬಿನಾಫಿನ್ ಮಾತ್ರೆಯು 125 ಎಂ.ಜಿ, 20 ಎಂಜಿ ಮತ್ತು 500 ಎಂ.ಜಿ ಮಾತ್ರೆಯ ರೂಪದಲ್ಲಿ ಮಾತ್ರ ಲಭ್ಯವಿದೆ. ಮಕ್ಕಳಿಗೆ 5 ಎಂಜಿ/ ತೂಕದಂತೆ ಮಾತ್ರೆ ಕೊಡುವಾಗ 12 ಕೆ ಜಿ ತೂಕದ ಮಕ್ಕಳಿಗೆ 125 ಎಂ ಜಿ ಯ ಅರ್ಧ ಮಾತ್ರೆ ಕೊಡಬಹುದು. ಅದಕ್ಕಿಂತ ಕಡಿಮೆ ತೂಕದವರಿಗೆ ಮಾತ್ರೆ ಕೊಡುವುದಾದರೂ ಹೇಗೆ? ಸಿರಫ್ ಗಳು ಲಭ್ಯವಿಲ್ಲ. ಇದೇ ರೀತಿ ಹೆಚ್ಚಿನ ಮಾತ್ರೆಗಳು ಕ್ಯಾಪ್ಸೂಲ್ ರೂಪದಲ್ಲಿ 100 ಎಂಜಿ ಮತ್ತು 200 ಎಂಜಿ ನಲ್ಲಿ ಲಭ್ಯವಿದೆ. ಕ್ಯಾಪ್ಸೂಲ್ ಆದ ಕಾರಣ ಅರ್ಧ ಮಾಡಿ ಸೇವಿಸಲಾಗುವುದಿಲ್ಲ. ಇಂತಹ ಸನ್ನಿವೇಶದಲ್ಲಿ ವೈದ್ಯರಾದರೂ ಏನು ಮಾಡುವುದು?ಆಗ ಕೇವಲ ಹಚ್ಚುವ ಔಷಧಿಯನ್ನು ಮಾತ್ರ ಕೊಡಬೇಕಾಗುತ್ತದೆ.
ಬರಹ: ಡಾ.ಪ್ರಸನ್ನಾ ನರಹರಿ.ಕಾಸರಗೋಡು. ಖ್ಯಾತ ಚರ್ಮ-ಲೈಂಗಿಕ ರೋಗ ತಜ್ಞರು.
ನಿರ್ದೇಶಕಿ ಐಎಡಿ ಕಾಸರಗೋಡು.
ನಾಳೆಗೂ ಮುಂದುವರಿಯುವುದು.........................



