ಕಾಸರಗೋಡು: ಕೋವಿಡ್ ಪ್ರತಿರೋಧ ಚಟುವಟಿಕೆಗಳ ಅಂಗವಾಗಿ ಸಾಮಾಜಿಕ ಸಂಪರ್ಕ ಮೂಲಕ ರೋಗ ಹರಡುವಿಕೆಯನ್ನು ನಿಯಂತ್ರಿಸಲು ಪ್ರಬಲ ಕ್ರಮಗಳನ್ನು ಕೈಗೊಳ್ಳಲು ಜನಪ್ರತಿನಿಧಿಗ ಸಭೆ ನಿರ್ಧರಿಸಿದೆ. ಇದೇ ವೇಳೆ ಉದ್ಯೋಗ ಸಂಬಂಧ ಈಗ ಜಿಲ್ಲೆಯಿಂದ ಮಂಗಳೂರಿಗೆ ಪ್ರತಿನಿತ್ಯ ತೆರಳಲು ಮಂಜೂರಾತಿ ಇರುವುದಿಲ್ಲ ಎಂದು ಸಭೆಯಲ್ಲಿ ತೀರ್ಮಾನಿದಲಾಗಿದೆ ಎಂದು ಕಂದಾಯ ಸಚಿವ ಇ.ಚಂದ್ರಶೇಖರನ್ ತಿಳಿಸಿದರು.
ಕರ್ನಾಟದಲ್ಲಿ ನೌಕರಿ ನಡೆಸುತ್ತಿರುವುದಾದರೆ ಅಲ್ಲಿ ಕನಿಷ್ಠ 28 ದಿನ ತಂಗಿ ಉದ್ಯೋಗದಲ್ಲಿ ನಿರತರಾಗಬೇಕು. ವೈದ್ಯರ ಸಹಿತ ಆರೋಗ್ಯ ಕಾರ್ಯಕರ್ತರಿಗೂ ಈ ಆದೇಶ ಅನ್ವಯವಾಗಿದೆ. ಸಾಮಾಜಿಕ ಸಂಪರ್ಕ ಮೂಲಕ ಭಾನುವಾರ ಹೆಚ್ಚುವರಿ ಮಂದಿಗೆ ಕೋವಿಡ್ ಸೋಂಕು ತಗುಲಿರುವ ಹಿನ್ನೆಲೆಯಲ್ಲಿ ಕರ್ನಾಟಕದ ಗಡಿಯಲ್ಲಿ ಪ್ರಬಲ ಕಟ್ಟುನಿಟ್ಟು ಜಾರಿಗೊಳಿಸಲು ಸಭೆ ಏಕಕಂಠದಿಂದ ನಿರ್ಧರಿಸಿದೆ ಎಂದೂ ಸಚಿವರು ಹೇಳಿದರು.
ಅನಗತ್ಯ ಪ್ರಯಾಣವನ್ನು ತಡೆಯಲಾಗುವುದು. ಗಡಿ ರಸ್ತೆಗಳಲ್ಲಿ ಸ್ಥಳೀಯಾಡಳಿತ ಸಂಸ್ಥೇಗಳು ಬಾರಿಕೇಡ್ ಗಳನ್ನು ಇರಿಸಲಾಗುವುದು. ತಲಾ ಮೂವರು ಸಿಬ್ಬಂದಿ ಕರ್ತವ್ಯದಲ್ಲಿರುವರು. ಪಂಚಾಯತ್, ಜಿಲ್ಲಾಡಳಿತೆ, ಪೆÇಲೀಸರು ತೀರ್ಮಾನಿಸುವ ರಸ್ತೆಯಲ್ಲಿ ಮಾತ್ರ ಸಂಚಾರಕ್ಕೆ ಅನುಮತಿ ಇರುವುದು. ಇತರ ರಸ್ತೆಗಳಲ್ಲಿ ಬಾರಿಕೇಡ್ ಗಳನ್ನು ಇರಿಸಲಾಗುವುದು. ಯಾತ್ರೆಗೆ ಅನುಮತಿ ನೀಡಲಾಗುವ ರಸ್ತೆಗಳಲ್ಲಿ ಪೆÇಲೀಸರ ಸೂಕ್ಷ್ಮ ನಿಗಾ ಇರುವುದು. ದಕ್ಷಿಣ ಕನ್ನಡದ ಸಮೀಪ ಪ್ರದೇಶಗಳಿಗೆ ಅನಿವಾರ್ಯವಾಗಿ ತೆರಳಬೇಕಾಗಿ ಬಂದವರ ಆಧಾರ್ ಕಾರ್ಡ್ ಸಹಿತ ದಾಖಲೆ ಪತ್ರಗಳ ತಪಾಸಣೆ ಇರುವುವು. ಈ ನಿಟ್ಟಿನಲ್ಲಿ ಸಮೀಪದ ಗ್ರಾಮಪಂಚಾಯತ್ ಗಳೊಂದಿಗೆ ಮಾತುಕತೆ ನಡೆಸಿ ತೀರ್ಮಾಣಕ್ಕೆ ಬರುವಂತೆ ಮಂಜೇಶ್ವರ ಬ್ಲಾಕ್ ಪಂಚಾಯತ್ ಗಳಿಗೆ ಸಭೆ ಆದೇಶಿಸಿದೆ.
ಜಿಲ್ಲೆಯ ಸದ್ರಿ ಸ್ಥಿತಿಗತಿಗಳ ಕುರಿತು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಮತ್ತು ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಡಿ.ಶಿಲ್ಪಾ ಅವರು ಸಭೆಯಲ್ಲಿ ಮಾಹಿತಿ ನೀಡಿದರು.
ಜಿಲ್ಲೆಯ ಕೆಲವೆಡೆ ದೈಹಿಕ ಅಂತರ ಕಾಯ್ದುಕೊಳ್ಳದೆ ಗುಂಪುಗೂಡುತ್ತಿರುವುದು ಗಮನಕ್ಕೆ ಬಂದಿದೆ. ಇದರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸಭೆ ಪೆÇಲೀಸರಿಗೆ ಆದೇಶ ನೀಡಿದೆ. ಮಾಸ್ಕ್ಧರಿಸದೇ ರುವುದು, ಶಾರೀರಿಕ ಅಂತರ ಕಾಯ್ದುಕೊಳ್ಳದೇ ಇರುವುದು, ಸಾಬೂನು, ಸಾಇಟೈಸರ್ ಇತ್ಯಾದಿ ಬಳಸಿ ಕೈತೊಳೆಯದೇ ಇರುವುದು ಇತ್ಯಾದಿಗಳೂ ಕೆಲವೆಡೆ ನಡೆಯದೇ ಇರುವ ಬಗ್ಗೂ ಮಾಹಿತಿ ಲಭಿಸಿದೆ. ಈ ಸಂಬಂಧ ಕಾನೂನು ಕ್ರಮಗಳು ಜಾರಿಗಳ್ಳಲಿವೆ. ಕಟ್ಟುನಿಟ್ಟು ಯಥಾ ಪ್ರಕಾರ ಜಾರಿಗೊಳ್ಳಲಿದೆ ಎಂದು ಸಭೆ ತಿಳಿಸಿದೆ.
10 ಮಂದಿಗಿಂತ ಅಧಿಕ ಸಲ್ಲದು:
ಪ್ರತಿಭಟನೆ ಸಹಿತ ಕಾರ್ಯಕ್ರಮಗಳಲ್ಲಿ 10 ಮಂದಿಗಿಂತ ಅಧಿಕ ಜನ ಸೇರಕೂಡದು. ಇಲ್ಲಿ ಭಾಗವಹಿಸುವವರು ಮಾಸ್ಕ್ ಧಾರಣೆ ಸಹಿತ ಆರೋಗ್ಯ ಇಲಾಖೆ ತಿಳಿಸಿರುವ ಕಟ್ಟುನಿಟ್ಟುಗಳನ್ನು ಕಡ್ಡಾಯವಾಗಿ ಪಾಲಿಸಬೇಕು.
ಇತರ ರಾಜ್ಯಗಳ ಕಾರ್ಮಿಕರ ಹೊಣೆಗಾರಿಕೆ ಗುತ್ತಿಗೆದಾರರದು!:
ಇತರ ರಾಜ್ಯಗಳ ಕಾರ್ಮಿಕರು ರಾಜ್ಯ ಸರಕಾರದ ಕೋವಿಡ್ 19 ಜಾಗ್ರತಾ ಪೆÇೀರ್ಟಲ್ ನಲ್ಲಿ ನೋಂದಣಿ ನಡೆಸಿ ಕಾಸರಗೋಡು ಜಿಲ್ಲೆಗೆ ಆಗಮಿಸಬೇಕು. ಇವರ ಪೂರ್ಣ ಹೊಣೆಗಾರಿಗೆ ಗುತ್ತಿಗೆದಾರರು ವಹಿಸಿಕೊಳ್ಳಬೇಕು. ಕಾರ್ಮಿಕರಿಗೆ ಬೇಕಾದ ಸೌಲಭ್ಯಗಳನ್ನು ಅವರು ಒದಗಿಸಬೇಕು. ಕಾರ್ಮಿಕರಿಗೆ ಪ್ರತಿಕೂಲ ಪರಿಸ್ಥಿತಿ ಒದಗಿದರೆ ಆಯಾ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಸಭೆ ಎಚ್ಚರಿಕೆ ನೀಡಿದೆ.
ಇತರ ರಾಜ್ಯಗಳಿಂದ, ವಿದೇಶಗಳಿಂದ ಊರಿಗೆ ಮರಳುವವರು ರಾಜ್ಯ ಸರಕಾರದ ಕೋವಿಡ್ 19 ಜಾಗ್ರತಾ ಪೆÇೀರ್ಟಲ್ ನಲ್ಲಿ ನೋಂದಣಿ ನಡೆಸಿ ಜಿಲ್ಲೆಗೆ ಆಗಮಿಸಬೇಕು. ಇದನ್ನು ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಳ್ಳಲು ಸಭೆ ತೀರ್ಮಾನಿಸಿದೆ.
ಇತರ ರಾಜ್ಯಗಳಿಂದ ಮೀನು, ತರಕಾರಿ ಇತ್ಯಾದಿ ಹೇರಿಕೊಂಡು ಬರುವ ಲಾರಿಗಳ ಚಾಲಕರಿಗೆ ಹೋಟೆಲ್ಗಳಲ್ಲಿ ಆಹಾರ ಪಾರ್ಸೆಲ್ ರೂಪದಲ್ಲಿ ಮಾತ್ರ ನೀಡಬೇಕು. ರೋಗ ಹೆಚ್ಚಳ ಹಿನ್ನೆಲೆಯಲ್ಲಿ ಮಂಜೇಶ್ವರ ವಲಯದಲ್ಲಿ ಲಾರಿಗಳನ್ನು ಪಾಕಿರ್ಂಗ್ ಮಾಡಬಾರದು. ಹೋಟೆಲ್ ಗಳ ಬಳಿ ಲಾರಿಗಳನ್ನು ಸಾಮೂಹಿಕವಾಗಿ ನಿಲುಗಡೆ ನಡೆಸಕೂಡದು. ಈ ಆದೇಶಗಳನ್ನು ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಳ್ಳಲು ಸ್ಥಳೀಯಾಡಳಿತ ಸಂಸ್ಥೆಗಳಿಗೆ ಹೊಣೆಗಾರಿಕೆ ನೀಡಲಾಗಿದೆ.
31 ವರೆಗೆ ಬೇಕಲಕೋಟೆ ತೆರೆಯುವುದಿಲ್ಲ :
ಬೇಕಲಕೋಟೆ ಸಹಿತ ಕಾಸರಗೋಡು ಜಿಲ್ಲೆಯ ಪ್ರವಾಸಿ ತಾಣಗಳನ್ನು ಜುಲೈ 31 ವರೆಗೆ ತೆರೆಯಕೂಡದು ಎಂದು ಜನಪ್ರತಿನಿಧಿಗಳ ಸಭೆ ನಿರ್ಧರಿಸಿದೆ. ರಾಣಿಪುರಂ, ಪೆÇಸಡಿಗುಂಪೆ ಸಹಿತ ತಾಣಗಳಲ್ಲಿ ಅಕ್ರಮವಾಗಿ ಜನ ಗುಂಪು ಸೇರುತ್ತಿರುವುದಾಗಿ ಸಭೆಯಲ್ಲಿ ಜನಪ್ರತಿನಿಧಿಗಳು ತಿಳಿಸಿದರು. ಆದೇಶ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸಭೆ ಪೆÇಲೀಸರಿಗೆ ಆದೇಶ ನೀಡಿದೆ.
ನಗರ ಪ್ರದೇಶಗಳಲ್ಲಿ ರಸ್ತೆಬದಿಯ ಜ್ಯೂಸ್ ಅಂಗಡಿಗಳಲ್ಲಿ ಇತ್ಯಾದಿ ಕಡೆ ಜನ ಅನಗತ್ಯವಾಗಿ ಗುಂಪುಸೇರುತ್ತಿರುವುದು ಗಮನಕ್ಕೆ ಬಂದಿದೆ. ಇದರಿಂದ ಸೊಂಕು ಹೆಚ್ಚಳಭೀತಿಯಿದೆ. ಇಂಥವುಗಳ ವಿರುದ್ಧವೂ ಕ್ರಮ ಕೈಗೊಳ್ಳುವಂತೆ ಸಭೆ ಜಿಲ್ಲಾಡಳಿತಕ್ಕೆ ಆದೇಶ ನೀಡಿದೆ.
ಡಯಾಲಿಸಿಸ್ ಯಂತ್ರಗಳ ಖರೀದಿಗೆ ತುರ್ತು ಕ್ರಮ:
ಕಾಸರಗೋಡು ಜಿಲ್ಲೆಯ ವಿವಿಧ ಸರಕಾರಿ ಆಸ್ಪತ್ರೆಗಳಲ್ಲಿ ಸಂಸದ, ಶಾಸಕರ ನಿಧಿ ಬಳಸಿ ಡಯಾಲಿಸಿಸ್ ಯಂತ್ರಗಳನ್ನು ತುರ್ತಾಗಿ ಖರೀದಿಸಲು ಜಿಲ್ಲಾಡಳಿತೆ ಮಂಜೂರಾತಿ ನೀಡಿದ್ದರೂ, ಇವನ್ನು ಒದಗಿಸಲು ಕೇರಳಮೆಡಿಕಲ್ ನಿಗಮ ವಿಳಂಬ ನಡೆಸುತ್ತಿರುವ ಹಿನ್ನೆಲೆಯಲ್ಲಿ ಟೆಂಡರ್ ಕ್ರಮಗಳ ಮೂಲಕ ಸ್ಥಳೀಯ ಮಟ್ಟದಲ್ಲಿ ಖರೀದಿ ನಡೆಸುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ತುರ್ತು ಅನುಮತಿ ನೀಡಬೇಕು ಎಂಬ ಜಿಲ್ಲಾಡಳಿತದ ಬಯಕೆಯನ್ನು ಆರೋಗ್ಯ ಇಲಾಖೆಯ ಗಮನಕ್ಕೆ ತರಲಾಗಿದೆ ಎಂದು ಕಂದಾಯ ಸಚಿವ ಇ.ಚಂದ್ರಶೇಖರನ್ ತಿಳಿಸಿದರು. ಕ್ರೀಡೆ ಇತ್ಯಾದಿ ಕಡೆಗಳಲ್ಲಿ ಆರೋಗ್ಯ ಇಲಾಖೆಯ ಕಟ್ಟುನಿಟ್ಟುಗಳನ್ನು ಕಡ್ಡಾಯಗೊಳಿಸಲು ಸಭೆ ತೀರ್ಮಾನಿಸಿದೆ.
ಸಭೆಯಲ್ಲಿ ಸಂಸದ ರಾಜ್ ಮೋಹನ್ ಉಣ್ಣಿತ್ತಾನ್, ಶಾಸಕರಾದ ಎಂ.ಸಿ.ಕಮರುದ್ದೀನ್, ಎನ್.ಎ.ನೆಲ್ಲಿಕುನ್ನು, ಕೆ.ಕುಂuಟಿಜeಜಿiಟಿeಜರಾಮನ್, ಎಂ.ರಾಜಗೋಪಾಲನ್, ಜಿಲ್ಲಾ ಪಂಚಾಯತ್ ಅಧ್ಯಕ್ಷ ಎ.ಜಿ.ಸಿ.ಬಶೀರ್, ಬ್ಲೋಕ್ ಪಂಚಾಯತ್ ಗಳ, ನಗರಸಭೆಗಳ, ಮಂಜೇಶ್ವರ ಬ್ಲಾಕ್ ಪಂಚಾಯತ್ ವ್ಯಾಪ್ತಿಯ ಗ್ರಾಮಪಂಚಾಯತ್ ಗಳ ಅಧ್ಯಕ್ಷರುಗಳು, ಹೆಚ್ಚುವರಿ ದಂಡನಾಧಿಕಾರಿ ಎನ್.ದೇವಿದಾಸ್, ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್, ಜಿಲ್ಲಾ ಸರ್ವೆ ಲೆನ್ಸ್ ಅಧಿಕಾರಿ ಡಾ.ಎ.ಟಿ.ಮನೋಜ್ ಮೊದಲಾದವರು ಉಪಸ್ಥಿತರಿದ್ದರು.


