HEALTH TIPS

ಮಂಜೇಶ್ವರದಲ್ಲಿ ಭಾರೀ ಪ್ರಮಾಣದ ಕಪ್ಪುಹಣ ವಶ

 
            ಕುಂಬಳೆ: ಸ್ವಿಪ್ಟ್ ಕಾರೊಂದರಲ್ಲಿ ಸಾಗಿಸಲಾಗುತ್ತಿದ್ದ ಎರಡು ಕೋಟಿ ರೂ.ಗಳ ಕಪ್ಪು ಹಣವನ್ನು ಕುಂಬಳೆ ಅಬಕಾರಿ  ವಿಭಾಗ ಸೋಮವಾರ ರಾತ್ರಿ ವಶಪಡಿಸಿಕೊಂಡ ಘಟನೆ ನಡೆದಿದೆ.
           ಮಂಜೇಶ್ವರ ಸಮೀಪದ ತೂಮಿನಾಡು ಎಂಬಲ್ಲಿ ಈ ಕಾರ್ಯಾಚರಣೆ ನಡೆದಿದೆ. ಕುಂಜತ್ತೂರು ನಿವಾಸಿ ಶಂಸಿದ್ದೀನ್ (32) ಎಂಬಾತನನ್ನು ಈ ಸಂದರ್ಭ ಬಂಧಿಸಲಾಗಿದೆ.
           ಕಾಳಧನ ಸಾಗಿಸಲಾದ ಕೆ.ಎಲ್.14. ವಿ.9148 ದಾಖಲಾತಿ ಸಂಖ್ಯೆಯ ಸ್ವಿಪ್ಟ್ ಕಾರನ್ನು ಎಕ್ಸೈಸ್ ವಿಭಾಗ ವಶಪಡಿಸಿಕೊಂಡಿದೆ. ಮಂಗಳೂರು ಕಡೆಯಿಂದ ಕಾಸರಗೋಡಿನತ್ತ ಬರುತ್ತಿದ್ದ ಕಾರನ್ನು ಸಂಶಯದ ಹಿನ್ನೆಲೆಯಲ್ಲಿ ಪರಿಶೀಲನೆಗೆ ಒಳಪಡಿಸಿದಾಗ ಅಕ್ರಮ ಹಣ ಪತ್ತೆಯಾಯಿತು. 2 ಕೋಟಿ 87 ಸಾವಿರದ ಮುನ್ನೂರು ರೂ. ಕಾಳಧನ ವಶಪಡಿಸಲಾಯಿತು.ಜೊತೆಗೆ ದಾಖಲೆಗಳಿಲ್ಲದ ಚಿನ್ನವೂ ಕಂಡುಬಂದಿದೆ ಎಂದು ಅಧಿಕೃತರು ತಿಳಿಸಿದ್ದಾರೆ.
        ಕುಂಬಳೆ ಅಬಕಾರಿ ವಲಯ ಅಧಿಕಾರಿ ಎಲ್.ನೌಫಲ್, ಪ್ರಿವೆಂಟಿವ್ ಅಧಿಕಾರಿ ರಾಜೀವನ್ ವಿ., ಸಿವಿಲ್ ಅಧಿಕಾರಿ ಸತೀಶನ್, ಶ್ರೀಜೀಷ್, ಗಣೇಶನ್, ಚಾಲಕ ಸತ್ಯನ್ ಪರಿಶೀಲನಾ ತಂಡದಲ್ಲಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries