ಮಂಜೇಶ್ವರ: ಉಳ್ಳಾಲದಿಂದ ಮೀನುಗಾರಿಕೆಗೆಂದು ತೆರಳಿದವರು ದೋಣಿ ಕೆಟ್ಟು ಹದಿನಾರು ಗಂಟೆಗಳಷ್ಟು ಕಾಲ ಸಮುದ್ರ ಮಧ್ಯೆ ಬಾಕಿಯಾದವರನ್ನು ಸೋಮವಾರ ಬೆಳಿಗ್ಗೆ ಬಂಗ್ರಮಂಜೇಶ್ವರದ ಬೆಸ್ತರು ತೆರಳಿ ರಕ್ಷಣೆಗೈದ ಬಗ್ಗೆ ವರದಿಯಾಗಿದೆ.
ಉಳ್ಳಾಲದ ಆಸೀಫ್ ಎಂಬವರ ಮಾಲೀಕತ್ವದಲ್ಲಿರುವ ಅಯನ್ ಎಂಬ ದೋಣಿಯಲ್ಲಿ ಉಳ್ಳಾಲ ಸಮುದ್ರ ತೀರದಿಂದ ಭಾನುವಾರ ಬೆಳಿಗ್ಗೆ 6ಗಂಟೆಗೆ ಮೂವರು ಮೀನುಗಾರಿಕೆಗೆ ತೆರಳಿದ್ದರು. ಈ ನಡುವೆ ಸಮುದ್ರ ಮಧ್ಯೆ ದೋಣಿಯ ಯಂತ್ರ ಕೆಟ್ಟು ಹೋಗಿ ಬಾಕಿಯಾಗಿದ್ದು ಊರವರೊಡನೆ ಸಂಪರ್ಕ ಸಾಧಿಸಲಾಗಲಿಲ್ಲ. ದೋಣಿಯಲ್ಲಿದ್ದ ತಮಿಳುನಾಡು ರಾಮೇಶ್ವರಂ ನಿವಾಸಿಗಳು ಉಳ್ಳಾಲದಲ್ಲಿ ಮೀನುಗಾರಿಕೆ ಕೆಲಸ ನಿರ್ವಾಹಿಸುವ ಬಾಲ,ನಾಗರಾಜ,ಸುಕುಮಾರ ಎಂಬವರು ದೋಣಿಯಲ್ಲಿದ್ದ ಆಹಾರ,ನೀರನ್ನು ಸೇವಿಸಿ ರಾತ್ರಿ ಕಳೆದಿದ್ದರು. ಈ ವಿಷಯ ಸೋಮವಾರ ಬೆಳಿಗ್ಗೆ ಬಂಗ್ರಮಂಜೇಶ್ವರದ ಕೆಎಂಕೆ ರಶೀದ್ ಎಂಬವರಿಗೆ ತಿಳಿದು ಅವರು ಕಣ್ವತೀರ್ಥ ನಿವಾಸಿ ಧನರಾಜ್,ಹೊಸಬೆಟ್ಟು ಕಡಪ್ಪರ ನಿವಾಸಿಗಳಾದ ಮುಸ್ತಫಾ ಮಂಜೇಶ್ವರ,ಹನೀಫ್ ಬಂಗ್ರಮಂಜೇಶ್ವರ,ಮೊಹಮ್ಮದ್, ರಸಾಕ್ ಎಂಬವರೊಂದಿಗೆ ತೆರಳಿ ಸಮುದ್ರ ಮಧ್ಯೆ ಸಿಲುಕಿದವರನ್ನು ರಕ್ಷಿಸಿ ದೋಣಿ ಸಹಿತ ಕರೆತಂದರು. ಬಂಗ್ರಮಂಜೇಶ್ವರ ಸಮುದ್ರ ತೀರಕ್ಕೆ ಆಗಮಿಸಿದ ಮೂವರು ಸುರಕ್ಷಿತವಾಗಿದ್ದು ಗಂಟೆಗಳಷ್ಟು ಕಾಲ ಸಮುದ್ರದಲ್ಲಿ ಬಾಕಿಯಾದವರನ್ನು ರಕ್ಷಿಸಿದ ಬಂಗ್ರಮಂಜೇಶ್ವರದ ಸಮುದ್ರ ತೀರದವನ್ನು ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.