HEALTH TIPS

ಡಿ ವೈ ಎಫ್ ಐ ನೇತಾರನ ಮನೆಗೆ ಕಲ್ಲೆಸೆದು ಹಾನಿಗೊಳಿಸಿದ ಗೂಂಡಾ ಮಾಫಿಯಾಗಳು

       ಮಂಜೇಶ್ವರ: ಕೊರೊನಾ ಸೋಂಕು ತಡೆಯಲು ಕರ್ನಾಟಕದಿಂದ ಆಗಮಿಸುತ್ತಿರುವ ವಾಹನಗಳನ್ನು ತಡೆಯಲು ರಸ್ತೆಗಳನ್ನು ಮಣ್ನು ಹಾಕಿ ಮುಚ್ಚುಗಡೆಗೊಳಿಸುವ ಸಂದರ್ಭ ಮಂಜೆಶ್ವರ ಗ್ರಾ. ಪಂ. ಅಧಿಕೃತರ ಜೊತೆಗೆ ಸಹಕರಿಸಿದ ಡಿ ವೈ ಎಫ್ ಐ ನೇತಾರನೊಬ್ಬನ ಮನೆಗೆ ಭಾನುವಾರ ರಾತ್ರಿ   ಗೂಂಡಾ ಮಾಫಿಯಾಗಳು  ಫೆÇೀನಿನಲ್ಲಿ ಬೆದರಿಕೆಯೊಡ್ಡಿ  ಬಳಿಕ ಕಳೆದ ರಾತ್ರಿ   ಮನೆಗೆ ಕಲ್ಲೆಸೆದು ಗಾಜುಗಳನ್ನು ಪುಡಿಗೈದು ಅಟ್ಟಹಾಸ ಗೈದಿದ್ದಾರೆ.
      ಕೆಲ ದಿನಗಳ ಹಿಂದೆ ಕಾಸರಗೋಡು ಜಿಲ್ಲಾಧಿಕಾರಿ ಕಚೇರಿಯಲ್ಲಿ ಕಂದಾಯ ಸಚಿವ ಇ ಚಂದ್ರಶೇಖರನ್ ರವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಕರ್ನಾಟಕ ಕೇರಳ ಗಡಿ ಪ್ರದೇಶದ ಒಳ ರಸ್ತೆಗಳಲ್ಲಿ ವ್ಯಾಪಕವಾಗಿ ಅನಧಿಕೃತ ಮರಳು ಸಾಗಾಟ, ಮದ್ಯ ಹಾಗೂ ಇತರ ಅಮಲು ಪದಾರ್ಥಗಳು ಕರ್ನಾಟಕ ಭಾಗಗಳಿಂದ ಹರಿದು ಬರುತ್ತಿರುವ ಹಿನ್ನೆಲೆ ಹಾಗೂ ಲಂಚವನ್ನು ಪಡೆದು ಪಾಸ್ ಇಲ್ಲದೆ ಮಾನವ ಸಾಗಾಟವನ್ನು ನಡೆಸುತ್ತಿರುವುದು ಕಾಸರಗೋಡು ಜಿಲ್ಲೆಯಲ್ಲಿ ಕೊರೋನಾ ವೈರಸ್ ಸಂಪರ್ಕದ ಮೂಲಕ ಹರಡುತ್ತಿರುವ ಕಾರಣ ಗಡಿ ಪ್ರದೇಶದ ಒಳ ರಸ್ತೆಗಳನ್ನು ಮಣ್ಣು ಹಾಕಿ ಮುಚ್ಚಲು ತೀರ್ಮಾನಿಸಲಾಗಿತ್ತು.
     ಇದರ ಮುಂದುವರಿದ ಭಾಗವಾಗಿ ಭಾನುವಾರ ಸಂಜೆ ಮಂಜೇಶ್ವರ ಗ್ರಾ. ಪಂ. ನೇತೃತ್ವದಲ್ಲಿ ಗಡಿ ಪ್ರದೇಶಕ್ಕೆ ಮಣ್ಣು ಹಾಕುವಾಗ ಕುಂಜತ್ತೂರು ಡಿ ವೈ ಎಫ್ ಐ ವಿಲೇಜ್ ಅಧ್ಯಕ್ಷ ಮುನೀರ್ ತೂಮಿನಾಡು ಕೈ ಜೋಡಿಸಿದ್ದರು. ಇದನ್ನು ಸಹಿಸದ ಕೆಲವೊಂದು ಮಂದಿ ಭಾನುವಾರ ಸಂಜೆ ಮುನೀರ್  ನನ್ನು ಫೆÇೀನ್ ಮೂಲಕ ಸಂಪರ್ಕಿಸಿ ಬೆದರಿಕೆಯೊಡ್ಡಿದ್ದಾರೆನ್ನಲಾಗಿದೆ. ಬಳಿಕ ರಾತ್ರಿ ಸುಮಾರು 1.30 ರ ಸುಮಾರಿಗೆ   ಮುನೀರ್ ನ ಮನೆಗೆ ಕಲ್ಲೆಸೆದು ಗಾಜುಗಳನ್ನು ಪುಡಿ ಗೈದು ಮಾಫಿಯಾ ಗುಂಡಾಗಳು ಅಟ್ಟ ಹಾಸ ಮೆರೆದಿದ್ದಾರೆ.
      ಮುನೀರ್ ತನ್ನ ಮಗುವಿನೊಂದಿಗೆ ಮಲಗುತ್ತಿದ್ದ ಕೊಠಡಿಯ ಕಿಟಿಕಿಯ ಗಾಜುಗಳು ಪುಡಿಯಾಗಿವೆ. ಮಂಜೇಶ್ವರ ಪೆÇಲೀಸರು ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಜಿಲ್ಲಾ ಪೆÇಲೀಸ್ ವರಿಷ್ಟೆ ಈ ಬಗ್ಗೆ ಸೂಕ್ತ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸುವಂತೆ ನಿರ್ದೇಶ ನೀಡಿರುವುದಾಗಿ ತಿಳಿದು ಬಂದಿದೆ. ಕೊರೊನಾ ಆತಂಕದ ಮಧ್ಯೆ ಗೂಂಡಾ ಮಾಫಿಯಾಗಳಿಗೆ ಸುಗ್ಗಿಯ ಕಾಲವೆನ್ನಲಾಗಿದ್ದು ಅಕ್ರಮ ಮದ್ಯ, ಅನಧಿಕೃತ ಮರಳು, ಗಾಂಜಾ ಸೇರಿದಂತೆ ಇತರ ಅಮಲು ಪದಾರ್ಥಗಳು ಈ ಒಳ ರಸ್ತೆಗಳ ಮೂಲಕ ಹರಿದು ಬರುತಿತ್ತೆಂದು ಹೇಳಲಾಗಿದೆ. ಮಾತ್ರವಲ್ಲದೆ ಪಾಸಿಲ್ಲದೆ ಕರ್ನಾಟಕ ಭಾಗದಿಂದ ಬರುವವರನ್ನು ಒಬ್ಬರಿಂದ ಸುಮಾರು ಎರಡು ಸಾವಿರದಿಂದ ಐದು ಸಾವಿರ ದ ತನಕ ಹಣ ವಸೂಲಿ ಮಾಡುತಿದ್ದರೆಂದು ಹೇಳಲಾಗಿದೆ. ಇದೀಗ ರಸ್ತೆಯನ್ನು ಮುಚ್ಚುಗಡೆಗೊಳಿಸಿರುವುದು ಮಾಫಿಯಾಗಳಿಗೆ ನುಂಗಲಾರದ ತುತ್ತಾಗಿರುವುದಾಗಿ ಹೇಳಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries